ಬುಧವಾರ, ಮೇ 25, 2022
31 °C
ಡಿಸಿಸಿ ಬ್ಯಾಂಕ್ ಎದುರು ಕರ್ನಾಟಕ ಪ್ರಾಂತ ರೈತ ಸಂಘದಿಂದ ಪ್ರತಿಭಟನೆ

ಕಲಬುರ್ಗಿ: ರೈತರಿಗೆ ಸಾಲ ನೀಡಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಮುಂಗಾರು ಹಂಗಾಮು ಆರಂಭವಾಗಿದ್ದು ರೈತರಿಗೆ ಆದ್ಯತೆಯ ಮೇರೆಗೆ ಸಾಲ ಮಂಜೂರು ಮಾಡಬೇಕು ಹಾಗೂ 2012–13ನೇ ಸಾಲಿನಲ್ಲಿ ಮಂಜೂರಾದ ₹ 11.80 ಕೋಟಿ ಹಣವನ್ನು ರೈತರ ಖಾತೆಗೆ ಪಾವತಿ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಸದಸ್ಯರು ಇಲ್ಲಿನ ಕಲಬುರ್ಗಿ–ಯಾದಗಿರಿ ಕೇಂದ್ರ ಸಹಕಾರ ಬ್ಯಾಂಕ್ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಬೆಳೆ ವಿಮೆ ಹಣವನ್ನು ‍ಪಾವತಿ ಮಾಡದೇ ದುರ್ಬಳಕೆ ಮಾಡಿಕೊಂಡಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಠಿಣ ಶಿಕ್ಷೆ ವಿಧಿಸಬೇಕು. ಬೆಳೆವಿಮೆಯಿಂದ ವಂಚಿತರಾದವರು ಹಾಗೂ ಸಾಲ ಮನ್ನಾ ಆಗದ ರೈತರಿಗೂ ಡಿಸಿಸಿ ಬ್ಯಾಂಕ್ ಹಾಗೂ ಸಹಕಾರ ಸೊಸೈಟಿಗಳ ಮೂಲಕ ಸಾಲ ವಿತರಿಸಬೇಕು. 2017–18ನೇ ಸಾಲಿನ ಹಿಂದಿನ ಸರ್ಕಾರಗಳ ಅವಧಿಯಲ್ಲಿ ಮಾಡಲಾದ ಸಾಲಮನ್ನಾದಿಂದ ವಂಚಿತರಾದ ರೈತರಿಗೆ ಆದ ಅನ್ಯಾಯವನ್ನು ಸರಿಪಡಿಸಬೇಕು. ಆ ರೈತರಿಗೆ ಹೊಸ ಸಾಲ ಕೊಡಬೇಕು ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಮುಖಂಡರಾದ ಸುಧಾಮ ಧನ್ನಿ, ಪಾಂಡುರಂಗ ಮಾವಿನಕರ, ಮೇಘರಾಜ ಕಠಾರೆ, ಶಾಂತಪ್ಪ ಪಾಟೀಲ, ಸಿದ್ದರಾಮ ಹರವಾಳ, ಸುಭಾಷ್ ಜೇವರ್ಗಿ, ಮಲ್ಲನಗೌಡ, ಸಾಯಿಬಣ್ಣ ಗುಡಬಾ, ಪರಮೇಶ್ವರ ಕಾಂತಾ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು