ಅಲೆಮಾರಿಗಳು ಕನಿಷ್ಠ ಸೌಕರ್ಯಗಳಿಲ್ಲದೆ ಜೀವಿಸುತ್ತಿದ್ದಾರೆ. ಸ್ಲಂ ಘೋಷಣೆಗೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸಿಲ್ಲ. ಸರ್ಕಾರ ಬೇಗ ಸೌಕರ್ಯ ಒದಗಿಸಬೇಕು
ರೇಣುಕಾ ಸರಡಗಿ ಜಿಲ್ಲಾ ಸಂಚಾಲಕಿ ಸ್ಲಂ ಜನಾಂದೋಲನ ಕರ್ನಾಟಕ ಸಂಘ
ಮಳೆಗಾಲದಲ್ಲಿ ಜೋಪಡಿಗಳಿಗೆ ನೀರು ನುಗ್ಗಿ ತೊಂದರೆಯಾಗುತ್ತದೆ. ಮೂಲಸೌಕರ್ಯಗಳಿಲ್ಲದ ಕಾರಣ ಪ್ರಯಾಸದಿಂದ ಜೀವಿಸುತ್ತಿದ್ದೇವೆ.
ಅಧಿಕಾರಿಗಳು ಗಮನಹರಿಸಬೇಕು ಮಾರುತಿ ನಿವಾಸಿ
ಸಮಸ್ಯೆ ಗಮನಕ್ಕೆ ಬಂದಿಲ್ಲ. ಕುಡಿಯುವ ನೀರಿನ ಸಮಸ್ಯೆ ಇದ್ದರೆ ಮಹಾನಗರ ಪಾಲಿಕೆಯವರು ಬಗೆಹರಿಸುತ್ತಾರೆ. ಈ ಸಂಬಂಧ ಪಾಲಿಕೆಗೆ ಮನವಿ ಮಾಡಲಾಗುವುದು
ಶ್ರೀಧರ ಸಾರವಾಡ ಎಇಇ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ
ಚಿಕ್ಕ ಹೆಗಲುಗಳ ಮೇಲೆ ಚಿಂದಿ ಚೀಲ
ದಾಖಲೆಗಳಿಲ್ಲದ ಕಾರಣ ಇಲ್ಲಿನ ಬಹುತೇಕ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಪಾಟಿ ಚೀಲದ ಬದಲು ಚಿಂದಿ ಚೀಲ ಚಿಕ್ಕ ಹೆಗಲುಗಳನ್ನೇರಿದೆ. ಪಾಲಕರು ಪ್ಲಾಸ್ಟಿಕ್ ಕೊಡ ಮಾರಲು ಹಾಗೂ ಕೂಲಿ ಕೆಲಸಕ್ಕೆ ತೆರಳಿದರೆ ಮಕ್ಕಳು ನಗರದ ನೆಹರೂ ಗಂಜ್ ಸೂಪರ್ ಮಾರುಕಟ್ಟೆ ಸೇರಿ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿಂದಿ ಆಯುತ್ತಾರೆ.
ಪ್ಲಾಸ್ಟಿಕ್ ಬಿಂದಿಗೆಗೆ ತಗ್ಗಿದ ಬೇಡಿಕೆ
‘ಹೆಚ್ಚಿನ ಜನರು ಸ್ಟೀಲಿನ ಹಂಡೆ ಕೊಂಡುಕೊಳ್ಳುವ ಕಾರಣ ಪ್ಲಾಸ್ಟಿಕ್ ಬಿಂದಿಗೆಗೆ ಬೇಡಿಕೆ ಕಡಿಮೆಯಾಗಿದೆ’ ಎಂದು ಇಲ್ಲಿನ ನಿವಾಸಿ ರಮೇಶ ತಿಳಿಸಿದರು. ‘ನಗರದಲ್ಲಿ ಯಾರೂ ತೆಗೆದುಕೊಳ್ಳುವುದಿಲ್ಲ. ಬೈಕಿನ ಮೇಲೆ ಜಿಲ್ಲೆಯ ಗ್ರಾಮೀಣ ಪ್ರದೇಶಕ್ಕೆ ತೆರಳಿ ಬಿಂದಿಗೆ ಮಾರಾಟ ಮಾಡಿ ಬರುತ್ತೇವೆ. ದಿನವಿಡೀ ತಿರುಗಿ ಮಾರಾಟ ಮಾಡಿದರೆ ಪೆಟ್ರೊಲ್ ಖರ್ಚು ಕಳೆದು ₹200ರಿಂದ ₹300 ಮಿಕ್ಕುತ್ತದೆ. ಇದರಿಂದ ಜೀವನ ನಿರ್ವಹಣೆ ಮಾಡುತ್ತೇವೆ’ ಎಂದು ಹೇಳಿದರು.