ಬುಧವಾರ, ಆಗಸ್ಟ್ 12, 2020
23 °C

ಕಲಬುರ್ಗಿ: 70 ಔಷಧಿ ಅಂಗಡಿ ಪರವಾನಗಿ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಕೋವಿಡ್‌–19 ರೋಗ ಲಕ್ಷಣಗಳಾದ ನೆಗಡಿ, ಕೆಮ್ಮು, ಜ್ವರ, ವಿಷಮಸೀತ ಜ್ವರ, ತೀವ್ರ ಉಸಿರಾಟದ ತೊಂದರೆಗೆ ಔಷಧ ಖರೀದಿಸಿದವರ ವಿವರವನ್ನು ‘ಫಾರ್ಮ್‌ ಪೋರ್ಟ್‌’ನಲ್ಲಿ ಭರ್ತಿ ಮಾಡದ ಕಲಬುರ್ಗಿ ಜಿಲ್ಲೆಯ 70 ಸೇರಿ ರಾಜ್ಯದಲ್ಲಿ ಒಟ್ಟು 110 ಔಷಧಿ ಅಂಗಡಿಗಳ ಪರವಾನಗಿಯನ್ನು ಅಮಾನತುಗೊಳಿಸಿದ್ದಾಗಿ ಹೆಚ್ಚುವರಿ ಔಷಧ ನಿಯಂತ್ರಕ ಅಮರೇಶ ತುಂಬಗಿ ತಿಳಿಸಿದ್ದಾರೆ.

ಕಲಬುರ್ಗಿ ಜಿಲ್ಲೆಯ 70, ಬೆಂಗಳೂರು 3, ಬೀದರ್‌ 4, ವಿಜಯಪುರ 15, ಮೈಸೂರು 4, ರಾಯಚೂರು 9, ಬಾಗಲಕೋಟೆ 5 ಹೀಗೆ ಒಟ್ಟು 110 ಔಷಧಿ ಅಂಗಡಿಗಳ ಪರವಾನಗಿಯನ್ನು ಅನಿರ್ಧಿಷ್ಟ ಅವಧಿಗೆ ಅಮಾನತುಗೊಳಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು