ಕಲಬುರಗಿ: ನಗರದ ಜಗತ್ ಮೇಲಿನಕೇರಿಯಲ್ಲಿರುವ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಭಾನುವಾರ ಮೈಲಾರಲಿಂಗೇಶ್ವರ ಜಲಾಭಿಷೇಕ ಮಹೋತ್ಸವ ಶ್ರದ್ಧಾ–ಭಕ್ತಿಯಿಂದ ಜರುಗಿತು.

ಬೆಳಿಗ್ಗೆ ಮೈಲಾರಲಿಂಗೇಶ್ವರ ದೇವಸ್ಥಾನದಿಂದ ಜಲ ಪೂಜೆಗೆಂದು ಮಹಿಳೆಯರ ಕುಂಭಕಳಸದೊಂದಿಗೆ ಜಗತ್ ವೃತ್ತದ ಮೂಲಕ ಗಾಜಿಪುರದ ದಾಸೋಹ ಮಠಕ್ಕೆ ಮೆರವಣಿಗೆಯಲ್ಲಿ ತೆರಳಲಾಯಿತು. ಅಲ್ಲಿ ಪೂಜಾ ವಿಧಿವಿಧಾನದ ಬಳಿಕ ಗಾಜಿಪುರದಿಂದ ಮತ್ತೆ ಜಗತ್, ಹನುಮಾನ ಮಂದಿರ ಮೂಲಕ ಮೈಲಾರಲಿಂಗೇಶ್ವರ ಮಂದಿರಕ್ಕೆ ಬರಲಾಯಿತು.

ಮೆರವಣಿಗೆಯಲ್ಲಿ ಜಗತ್, ಚನ್ನವೀರ ನಗರ ಮತ್ತು ಶರಣಸಿರಸಗಿಯ ಬೀರಲಿಂಗೇಶ್ವರ ಡೊಳ್ಳಿನ ಮೇಳಗಳು, ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರುಗು ತಂದವು.

ಮೈಲಾರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಮಲ್ಲಿಕಾರ್ಜುನ ಪೂಜಾರಿ ಅವರಿಂದ ಸರಪಳಿ ಹರಿಯುವ ಕಾರ್ಯಕ್ರಮ ಜರುಗಿತು. ಅಪಾರ ಭಕ್ತರು ಈ ಭಕ್ತಿಭಾವದಿಂದ ಕೂಡಿದ ಕ್ಷಣಕ್ಕೆ ಸಾಕ್ಷಿಯಾದರು. ಈ ವೇಳೆ ಮೈಲಾರಲಿಂಗೇಶ್ವರನಿಗೆ ಜೈಕಾರ ಮೊಳಗಿತು. ಜೊತೆಗೆ ಭಕ್ತರು ಭಂಡಾರದಲ್ಲಿ ಮಿಂದೆದ್ದರು.

ನಂತರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈಲಾರಲಿಂಗೇಶ್ವರ ಸೇವಾ ಸಮಾಜದ ರೇಣುಕಾ–ಬಸವರಾಜ ಖಾನಾಪುರ ದಂಪತಿಯಿಂದ ಮಹಿಳೆಯರಿಗೆ ಉಡಿ ತುಂಬಲಾಯಿತು. ಕಲಬುರಗಿ–ಹುಬ್ಬಳ್ಳಿ ಗದ್ದುಗೆ ಮಠದ ಚರಲಿಂಗ ಸ್ವಾಮೀಜಿ ಭಕ್ತರನ್ನು ಆಶೀರ್ವದಿಸಿದರು. ಬಳಿಕ ಭಕ್ತರು ಸರತಿಸಾಲಿನಲ್ಲಿ ನಿಂತು ಹುಗ್ಗಿ, ಅನ್ನ, ಪಲ್ಲೆ, ಸಾಂಬಾರು ಪ್ರಸಾದ ಸವಿದರು.

ಕಾರ್ಯಕ್ರಮದಲ್ಲಿ ಮೈಲಾರಲಿಂಗೇಶ್ವರ ಸೇವಾ ಸಮಾಜದ ಅಧ್ಯಕ್ಷ ಯಶ್ವಂತರಾವ ಕಾಳೆ, ಉಪಾಧ್ಯಕ್ಷ ಶಿವಶರಣಪ್ಪ ಉಪಳಾಂವಕರ್, ಕಾರ್ಯದರ್ಶಿ ಶಿವಶರಣಪ್ಪ ಗೋಗಿ, ಕೋಶಾಧ್ಯಕ್ಷ ಸಿದ್ಧರಾಮ ಸಿದ್ರಾಮಗೋಳ, ಸಹ ಕಾರ್ಯದರ್ಶಿ ಗುರುರಾಜ ಕೋರವಾರ, ಸದಸ್ಯರಾದ ವಿನಯಕುಮಾರ ಸಿದ್ರಾಮಗೋಳ, ಮಲ್ಲೇಶಪ್ಪ ದುಮ್ಮಾಲಿ, ವೀರಭದ್ರಪ್ಪ ಪಾಟೀಲ, ಶಿವಪುತ್ರ ಪಾಟೀಲ, ಚಂದ್ರಕಾಂತ ಖಿಂಡಿ, ಶಿವಶರಣಪ್ಪ ಆರ್.ಖಾನಾಪುರ, ವಿಜಯಕುಮಾರ ಎಂ.ಮೇಳಕುಂದಿ, ಕಾಶಿನಾಥ ಎಂ.ಅಗಸ್ತ್ಯತೀರ್ಥ, ಸಂತೋಷ ಕಾಳೆ ಉಪಸ್ಥಿತರಿದ್ದರು.

ಭಂಡಾರದಲ್ಲಿ ಮಿಂದೆದ್ದ ಭಕ್ತಸಮೂಹ | ಮೈಲಾರಲಿಂಗೇಶ್ವರನಿಗೆ ವಿಶೇಷ ಪೂಜೆ, ಆರತಿ ಹುಗ್ಗಿ, ಅನ್ನ–ಸಾಂಬಾರು ಪ್ರಸಾದ ಸವಿದ ಜನ

1984ರಿಂದ ಜಲಾಭಿಷೇಕ

‘ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ 1984ರಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಮಾಣಿಕಪ್ರಭು ಮಾಧಮಶೆಟ್ಟಿ ಮೂರ್ತಿ ದೇಣಿಗೆ ಕೊಟ್ಟರು. ಮಡಿವಾಳಪ್ಪ ಹತ್ತೂರೆ ಗರ್ಭಗುಡಿ ನಿರ್ಮಿಸಿಕೊಟ್ಟರು. ಅಲ್ಲಿಂದ ನಾಡಿನಲ್ಲಿ ಮಳೆ ಬೆಳೆ ಚೆನ್ನಾಗಿ ಆಗಲಿ. ಎಲ್ಲೆಡೆ ಶಾಂತಿ ನೆಲೆಸಲಿ ಸಮೃದ್ಧಿ ಕಾಣಲಿ ಎಂದು ಲೋಕಕಲ್ಯಾಣಾರ್ಥವಾಗಿ ನಿರಂತರವಾಗಿ ಜಲಾಭಿಷೇಕ ಮಹೋತ್ಸವ ನಡೆಸಿಕೊಂಡು ಬರಲಾಗುತ್ತಿದೆ’ ಎಂದು ಮೈಲಾರಲಿಂಗೇಶ್ವರ ಸೇವಾ ಸಮಾಜದ ಕಾರ್ಯದರ್ಶಿ ಶಿವಶರಣಪ್ಪ ಗೋಗಿ ತಿಳಿಸಿದರು.

ವಿದ್ಯಾಶ್ರೀ ಪ್ರಶಸ್ತಿ ಪ್ರದಾನ

ಜಲಾಭಿಷೇಕ ಮಹೋತ್ಸವ ಅಂಗವಾಗಿ ಡಿ.1ರಿಂದ ಡಿ.6ರವರೆಗೆ ನಿತ್ಯ ಸಂಜೆ ಪ್ರವಚನ ಕಾರ್ಯಕ್ರಮ ನಡೆಯಿತು. ಬಣಮಗಿಯ ರಾಚೋಟೇಶ್ವರ ಶಿವಾಚಾರ್ಯರು ಪ್ರವಚನ ನಡೆಸಿಕೊಟ್ಟರು. ಪವಿತ್ರಾ ವಿಶ್ವನಾಥ ಮಠಪತಿ ಸಂಗೀತ ಸೇವೆ ವೀರಭದ್ರಯ್ಯ ಸ್ಥಾವರಮಠ ತಬಲಾ ಸಾಥ್ ನೀಡಿದರು. ಶನಿವಾರ ನಡೆದ ಪ್ರವಚನ ಮುಕ್ತಾಯ ಸಮಾರಂಭದಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ಪ್ರತಿಭಾವಂತರಿಗೆ ‘ವಿದ್ಯಾಶ್ರೀ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.