ಕಾಳಗಿ: ಕರ್ನಾಟಕ ಸರ್ಕಾರದ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹಾಗೂ ವಿಧಾನ ಪರಿಷತ್ತಿನ ಸಭಾನಾಯಕ ಎನ್.ಎಸ್.ಭೋಸರಾಜು ಸೋಮವಾರ ಕಾಳಗಿ ಪಟ್ಟಣಕ್ಕೆ ಭೇಟಿ ನೀಡಿದರು.

ಐತಿಹಾಸಿಕ ನೀಲಕಂಠ ಕಾಳೇಶ್ವರ ಲಿಂಗದ ದರ್ಶನ ಪಡೆದು ಕಾಳೇಶ್ವರ ಪುಷ್ಕರಣಿ, ಅನಂತ ಪದ್ಮನಾಭ ಪುಷ್ಕರಣಿ, ರಾಮ ಪುಷ್ಕರಣಿ ಮತ್ತು ರೌದ್ರಾವತಿ ನದಿ ವೀಕ್ಷಿಸಿದರು.

ನೈಸರ್ಗಿಕವಾಗಿ ಪುಟಿದೇಳುವ ನೀರಿನ ಬುಗ್ಗೆಗಳು ಮತ್ತು ತಿಳಿಯಾದ ನೀರು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಏತ ನೀರಾವರಿ ಯೋಜನೆಯ ಘಟಕ ವೀಕ್ಷಿಸಿ, ಎರಡೂ ಜಾಕ್ವೆಲ್ಗಳು ಕೆಲಸ ಮಾಡುತ್ತಿವೆಯಾ? ರೈತರ ಹೊಲಗಳಿಗೆ ನೀರು ಹೋಗುತ್ತಿದೆಯಾ? ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು.

‘ಇದು ತುಂಬಾ ಹಳೆಯದಾಗಿದೆ. ಅಲ್ಲಲ್ಲಿ ಕಾಲುವೆ ಹಾಳಾಗಿದೆ. ನಿಗದಿತ ಪ್ರಮಾಣದಲ್ಲಿ ರೈತರ ಹೊಲಗಳಿಗೆ ನೀರು ಹರಿಯುತ್ತಿಲ್ಲ’ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದರು.

ನಂತರದಲ್ಲಿ ದೇವಸ್ಥಾನ ಸಮಿತಿ ಮತ್ತು ಸಾರ್ವಜನಿಕರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ‘ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಒತ್ತಾಯದ ಮೇರೆಗೆ ಇಲ್ಲಿಗೆ ಬಂದಿದ್ದೇನೆ. ಇಲ್ಲಿಯ ನೀರಿನ ಮಟ್ಟವನ್ನು ಮನಗಂಡೆ. ಅವರ ಮತ್ತು ಈ ಭಾಗದ ರೈತರ ಕೋರಿಕೆಯಂತೆ ಮುಂದಿನ ದಿನಗಳಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್, ಏತ ನೀರಾವರಿ ಯೋಜನೆ ಮತ್ತಿತರ ಅಭಿವೃದ್ಧಿ ಕೈಗೊಂಡು ರೈತರಿಗೆ ಅನುಕೂಲ ಮಾಡಿಕೊಡಲು ಪ್ರಮಾಣಿಕ ಪ್ರಯತ್ನ ಮಾಡುವೆ. ₹2ಸಾವಿರ ಕೋಟಿಯಲ್ಲಿ ಈಗಾಗಲೇ ಕಲಬುರಗಿ ಜಿಲ್ಲೆಗೆ ಅತಿಹೆಚ್ಚು ₹800 ಕೋಟಿ ಅನುದಾನ ಕೊಟ್ಟಿದ್ದೇನೆ. ಹಿಂದಿನ ಸರ್ಕಾರದಲ್ಲಿ ಬಜೆಟ್ ಇಲ್ಲದೆ ₹12,696 ಕೋಟಿ ಖರ್ಚು ಮಾಡಿ ನಮ್ಮ ಮೇಲೆ ಹಾಕಿದ್ದಾರೆ. ಅದನ್ನು ಸರಿದೂಗಿಸಿ ಬೇರೆ ಕಾಮಗಾರಿಗಳು ಪೂರ್ಣಗೊಳಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ಅನುದಾನ ಹೊಂದಿಸಿಕೊಂಡು ಕೆಲಸ ಮಾಡುವುದಾಗಿ ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಮಾತನಾಡಿ ‘ಈ ಕ್ಷೇತ್ರ ತನ್ನದೆಯಾದ ಇತಿಹಾಸವನ್ನು ಹೊಂದಿದೆ. ಒಂದುಕಾಲದಲ್ಲಿ ಇಲ್ಲಿಯ ನೀರು ಮಳಖೇಡ ಸಿಮೆಂಟ್ ಕಾರ್ಖಾನೆಗೆ ಕೊಂಡೊಯ್ದರೂ ನೀರಿನ ಪ್ರಮಾಣ ಕಡಿಮೆಯಾಗಿರಲಿಲ್ಲ’ ಎಂದರು.

‘ರೈತರಿಗಾಗಿ ಮಲಘಾಣ ಸಂಗಮದ ಬಳಿ ಮತ್ತು ನಂದೂರ ಶಿವಲಿಂಗೇಶ್ವರ ದೇವಸ್ಥಾನ ಬಳಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಬೇಕು. ಹಾಳಾದ ಏತ ನೀರಾವರಿ ಯೋಜನೆ ಘಟಕವನ್ನು ನವೀಕರಿಸಿ ಸೂಕ್ತ ಜಾಗಕ್ಕೆ ಸ್ಥಳಾಂತರಿಸಬೇಕು. ಪುಷ್ಕರಣಿ, ರೌದ್ರಾವತಿ ನೀರಿಗೆ ಹೊಸ ರೂಪ ಕೊಟ್ಟು ನೀರಾವರಿ ಹೆಚ್ಚಳಕ್ಕೆ ಅನುಕೂಲ ಮಾಡಿಕೊಡಬೇಕು’ ಎಂದು ಸಚಿವರಲ್ಲಿ ಮನವಿ ಮಾಡಿದರು.

ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ, ಜಿ.ಪಂ ಮಾಜಿ ಸದಸ್ಯ ರಾಜೇಶ ಗುತ್ತೇದಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವಿಂದ್ರ ಹೆಬ್ಬಾಳ, ದೇವಸ್ಥಾನ ಸಮಿತಿ ಪ್ರಮುಖರಾದ ಶಿವಶರಣಪ್ಪ ಕಮಲಾಪುರ, ಶಿವಶರಣಪ್ಪ ಗುತ್ತೇದಾರ, ಪ್ರಕಾಶ ಸೇಗಾಂವಕರ್, ಮುಖಂಡ ಸೋಮಶೇಖರ ಹಿರೇಮಠ, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಾಘವೇಂದ್ರ ಗುತ್ತೇದಾರ, ಕಾಂಗ್ರೆಸ್ ನಗರ ಅಧ್ಯಕ್ಷ ವೇದಪ್ರಕಾಶ ಮೋಟಗಿ, ಬ್ಲಾಕ್ ಯುಥ್ ಅಧ್ಯಕ್ಷ ಪ್ರದೀಪ ಡೊಣ್ಣೂರ, ಸಂತೋಷ ಪತಂಗೆ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು. ಬಳಿಕ ಸಚಿವರು ರಾಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ವೀಕ್ಷಣೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.