ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಸಮಸ್ಯೆ ಬಗೆಹರಿಸಿ: ಶಾಸಕ

ಜನಸ್ಪಂದನಾ ಸಭೆಯಲ್ಲಿ ಶಾಸಕ ಡಾ.ಅವಿನಾಶ ಜಾಧವ ಸೂಚನೆ
Last Updated 8 ಡಿಸೆಂಬರ್ 2019, 4:23 IST
ಅಕ್ಷರ ಗಾತ್ರ

ಕಾಳಗಿ: ‘ಜನಸ್ಪಂದನಾ ಸಭೆಗೆ ಕ್ಷೇತ್ರದ ಶಾಸಕರು ಬರಲಿ, ಬಿಡಲಿ. ಬರುವಿಕೆಗೆ ದಾರಿ ಕಾಯುವುದು ಬೇಡ. ನಿಗದಿತ ಸಮಯ ಆಗಿದ್ದರೆ ಅಧಿಕಾರಿಗಳು ಜನರೊಂದಿಗೆ ಕುಳಿತು ಅವರ ಸಮಸ್ಯೆಗಳ ಬಗ್ಗೆ ಪರಸ್ಪರ ಚರ್ಚಿಸಬೇಕು’ ಎಂದು ಶಾಸಕ ಡಾ.ಅವಿನಾಶ ಜಾಧವ ಹೇಳಿದರು.

ಗೋಟೂರ ಗ್ರಾಮದಲ್ಲಿ ಶನಿವಾರ ಜನಸ್ಪಂದನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಈ ಸಭೆ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಕಲ್ಪಿಸುವ ಮಹತ್ವದ ಉದ್ದೇಶ ಹೊಂದಿದೆ. ಈ ಬಗ್ಗೆ ಅಧಿಕಾರಿಗಳಲ್ಲಿ ಸ್ಪಷ್ಟತೆ ಇರಬೇಕು. ಎಂದು ಅವರು ಹೇಳಿದರು.

ಗೋಟೂರ-ಕಾಳಗಿ ಮಧ್ಯೆ 2 ಕಿ.ಮೀ ರಸ್ತೆ ಅಗಲೀಕರಣ, ಚಿಂಚೋಳಿ ಎಚ್. ರಸ್ತೆ ಸುಧಾರಣೆ, ನಿರಂತರ ಜ್ಯೋತಿ ವಿದ್ಯುತ್ ಸರಬರಾಜು, ಗೋಟೂರ ಆರೋಗ್ಯ ಉಪ ಕೇಂದ್ರ ಅವ್ಯವಸ್ಥೆ, ಹೆಚ್ಚುವರಿ ನ್ಯಾಯ ಬೆಲೆ ಅಂಗಡಿ ಮಂಜೂರು, ಸಾಮಾಜಿಕ ಭದ್ರತಾ ಯೋಜನೆ ಸಮರ್ಪಕ ಜಾರಿ ಸೇರಿದಂತೆ ಜನರ ವಿವಿಧ ಸಮಸ್ಯೆಗಳಿಗೆ ಶಾಸಕರು ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ ಪಾಟೀಲ, ಉಪ ತಹಶೀಲ್ದಾರ್ ಶೇಷಗಿರಿ ನಾಯಕ್, ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್‌ ಅಂಬಾದಾಸ, ಜಿಲ್ಲಾ ಪಂಚಾಯಿತಿ ಸಹಾಯಕ ಎಂಜಿನಿಯರ್ ಮೋತಿರಾಮ ಚವಾಣ್, ಬಸ್ ಘಟಕದ ವ್ಯವಸ್ಥಾಪಕ ಯಶ್ವಂತ ಯಾತನೂರ, ಪಿಡಿಒ ರೇವಣಸಿದ್ದಪ್ಪ ಕಲಶೆಟ್ಟಿ, ಎಎಸ್ಐ ಅಣಿವೀರಪ್ಪ ಹೆಬ್ಬಾಳ ಇದ್ದರು.

ಮುಖಂಡ ಸಿದ್ದಣ್ಣ ಜಮಾದಾರ, ದೇವಿಂದ್ರಪ್ಪ ಕಮಕನೂರ, ಶಾಲಿವಾ ಹನ ಮಡಿವಾಳ, ಬಸವರಾಜ ಪಾಟೀಲ, ಕಾಂತು ರಾಠೋಡ, ಕಾಶಿನಾಥ ಕಾಮರೆಡ್ಡಿ, ಮಹೇಶ ಸಾವಳಗಿ, ಮಲ್ಲಿಕಾರ್ಜುನ ಗವಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT