ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂಚೋಳಿ | ಪರಿಷತ್ ಚುನಾವಣೆ: ಶೇ 74ರಷ್ಟು ಮತದಾನ

Published 3 ಜೂನ್ 2024, 15:47 IST
Last Updated 3 ಜೂನ್ 2024, 15:47 IST
ಅಕ್ಷರ ಗಾತ್ರ

ಚಿಂಚೋಳಿ: ‘ಈಶಾನ್ಯ ಪದವೀಧರ ಮತಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ತಾಲ್ಲೂಕಿನಲ್ಲಿ ಬಿರುಸಿನ ಮತದಾನವಾಗಿದೆ. ಪರಿಷತ್ ಚುನಾವಣೆಯ ಮತದಾನಕ್ಕಾಗಿ ತಾಲ್ಲೂಕಿನಲ್ಲಿ ಮೂರು ಮತಗಟ್ಟೆಗಳನ್ನು ತೆರೆಯಲಾಗಿತ್ತು. ಚುನಾವಣೆಯಲ್ಲಿ ಶೇ 74ರಷ್ಟು ಮತದಾನ ನಡೆದಿದೆ.

ತಾಲ್ಲೂಕಿನ ಐನಾಪುರದ ಗ್ರಾ.ಪಂ. ಕಚೇರಿ ಮತಗಟ್ಟೆಯಲ್ಲಿ 576 ಮತದಾರರ ಪೈಕಿ 431 ಮಂದಿ ಹಕ್ಕು ಚಲಾಯಿಸಿದರು. ಪುರುಷರು ಶೇ 79.51 ಮತ್ತು ಮಹಿಳೆಯರು ಶೇ 63.74 ಮತ ಚಲಾಯಿಸಿದರು.

ಪಟ್ಟಣದ ಸರ್ಕಾರಿ ಕನ್ಯಾ ಪಿಯು ಕಾಲೇಜಿನ ಮತಗಟ್ಟೆಯಲ್ಲಿ ಒಂದೊಂದು ತಾಸು ಸಾಲಿನಲ್ಲಿ ನಿಂತು ಮತದಾರರು ಹಕ್ಕು ಚಲಾಯಿಸಿದರು. 1009 ಮತದಾರರ ಪೈಕಿ 755 ಮಂದಿ ಮತದಾನ ಮಾಡಿದರು. ಅದರಲ್ಲಿ ಪುರುಷರು ಶೇ 80.70, ಸ್ತ್ರೀಯರು ಶೇ 65.18 ಮತ ಚಲಾಯಿಸಿದರು.

ತಾಲ್ಲೂಕಿನ ಸುಲೇಪೇಟದ ಸರ್ಕಾರಿ ಪಿಯು ಕಾಲೇಜಿನ ಮತಟಗಟೆಯಲ್ಲಿ 610 ಮತದಾರರ ಪೈಕಿ 447 ಮಂದಿ ಹಕ್ಕು ಚಲಾಯಿಸಿದರು. ಪುರುಷರು ಶೇ 77.30, ಸ್ತ್ರೀಯರು ಶೇ 66.06 ಮತಚಲಾಯಿಸಿದರು.

ಮತದಾನ ಸುಸೂತ್ರವಾಗಿ ನಡೆಯಲು ಮತದಾನ ಕೇಂದ್ರದಲ್ಲಿ ಟೆಂಟ್ ಹಾಗೂ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿತ್ತು. ತಹಶೀಲ್ದಾರ್‌ ವೆಂಕಟೇಶ ದುಗ್ಗನ, ಕಂದಾಯ ನಿರೀಕ್ಷಕ ರವಿ ಪಾಟೀಲ, ಕೇಶವ ಕುಲಕರ್ಣಿ, ರಮೇಶ ಕೋಳಿ, ಆರೀಫ್, ಸಿಪಿಐ ಎಲ್.ಎಚ್.ಗೌಂಡಿ, ಎಸ್‌ಐಸಿದ್ದೇಶ್ವರ, ನಂದಿನಿ ಹಾಜರಿದ್ದರು.

ಮತಗಟ್ಟೆಯ ಹೊರಗಡೆ ಕಾಂಗ್ರೆಸ್–ಬಿಜೆಪಿ ಮುಖಂಡರು ಪ್ರತ್ಯೇಕವಾಗಿ ಕುಳಿತು ಮತದಾರರ ಒಲವು ಗಳಿಸಲು ಪ್ರಯತ್ನಿಸಿದರು. ಶಾಸಕ ಡಾ.ಅವಿನಾಶ ಜಾಧವ, ಅಶೋಕ ಪಾಟೀಲ, ಗೋಪಾಲರಾವ ಕಟ್ಟಿಮನಿ, ಕೆ.ಎಂ.ಬಾರಿ, ಗೌತಮ ಪಾಟೀಲ, ಸುಭಾಷ ಸೀಳಿನ, ರಾಜಶೇಖರ ಮಜ್ಜಗಿ, ಸಂತೋಷ ಗಡಂತಿ, ಸತೀಶರಡ್ಡಿ ತಾಜಲಾಪುರ, ರಾಮರೆಡ್ಡಿ ಪಾಟೀಲ, ಗಿರಿರಾಜ ನಾಟಿಕಾರ, ಲೋಕೇಶ ಶೆಳ್ಳಗಿ ಹಾಜರಿದ್ದರು.

ಕಾಂಗ್ರೆಸ್ ಗುಂಪಿನಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ್, ಜಿ.ಪಂ. ಮಾಜಿ ಅಧ್ಯಕ್ಷ ದೀಪಕನಾಗ ಪುಣ್ಯಶೆಟ್ಟಿ, ಹಿರಿಯ ಮುಖಂಡ ಮಹೇಮೂದ್ ಪಟೇಲ್, ಡಿಸಿಸಿ ಬ್ಯಾಂಕ್ ನಿರ್ದೆಶಕ ಅಜೀತ ಪಾಟೀಲ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ನರಶಿಮ್ಲು ಕುಂಬಾರ, ಅಬ್ದುಲ್ ಬಾಷೀತ್, ವಿಶ್ವನಾಥ ಹೊಡೇಬೀರನಹಳ್ಳಿ, ಅಯ್ಯುಬ ಖಾನಸಾಬ್ ಮತ್ತಿತರರು ಹಾಜರಿದ್ದರು.

ಹಣ ಹಂಚಿಕೆ ಆರೋಪ: ಸಿಪಿಐ-ಎಸ್‌ಐ ವಿರುದ್ಧ ದೂರು

ತಾಲ್ಲೂಕಿನಲ್ಲಿ ಕಾಂಗ್ರೆಸ್ ಮುಖಂಡರು ರಾಜಾರೋಷವಾಗಿ ಪದವೀಧರ ಮತಕ್ಷೇತ್ರದ ಚುನಾವಣೆಯಲ್ಲಿ ಮತದಾರರಿಗೆ ಹಣ ಹಂಚಿದ್ದಾರೆ. ಇದನ್ನು ಗಮನಕ್ಕೆ ತಂದರೂ ಕ್ರಮಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ ಚಿಂಚೋಳಿ ಸಿಪಿಐ ಮತ್ತು ಚಿಂಚೋಳಿ ಠಾಣೆ ಎಸ್‌ಐ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸಹಾಯಕ ಚುನಾವಣಾಧಿಕಾರಿಗಳಿಗೆ ಪರಿಷತ್ ಚುನಾವಣೆ ಬಿಜೆಪಿ ಉಸ್ತುವಾರಿ ಮುಖಂಡ ಸಂತೋಷ ಗಡಂತಿ ದೂರು ಸಲ್ಲಿಸಿದ್ದಾರೆ.

ಚಿಂಚೋಳಿಯ ಮತಗಟ್ಟೆಯಲ್ಲಿ ಮತದಾರರಿಗೆ ಹಣ ಹಂಚಲಾಗಿದೆ. ಮತಗಟ್ಟೆಯ ಬಳಿಯೇ ನಿಂತ 4 ವಾಹನಗಳಲ್ಲಿ ಹಣ ತಂದು ಇಟ್ಟುಕೊಂಡು ಹಂಚಲಾಗಿದೆ. ಇದನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮಕೈಗೊಂಡಿಲ್ಲ. ಹೀಗಾಗಿ ಇಬ್ಬರನ್ನು ಸೇವೆಯಿಂದ ವಜಾ ಮಾಡಬೇಕು ಎಂದು ದೂರಿನಲ್ಲಿ ಸಂತೋಷ ಗಡಂತಿ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT