ಬುಧವಾರ, ಮಾರ್ಚ್ 29, 2023
25 °C

ತಾಜಲಾಪುರ: ಸರ್ಕಾರಿ ನೌಕರರೇ ಹೆಚ್ಚು, ಶಿಕ್ಷಣಕ್ಕೆ ಆಸರೆಯಾದ ಸಿದ್ದಗಂಗಾ ಮಠ

ಜಗನ್ನಾಥ ಡಿ. ಶೇರಿಕಾರ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ: ತಾಲ್ಲೂಕಿನ ಕುಗ್ರಾಮ ಎಂಬ ಹೆಸರು ಪಡೆದಿರುವ ತಾಜಲಾಪುರ ಗ್ರಾಮದಲ್ಲಿ 45ಕ್ಕೂ ಹೆಚ್ಚು ಮಂದಿಗೆ ಸರ್ಕಾರಿ ನೌಕರಿ ಸಿಕ್ಕಿದೆ. ಕೇವಲ ಸರ್ಕಾರಿ ನೌಕರಿ ಮಾತ್ರವಲ್ಲದೇ 15ರಿಂದ 20 ಮಂದಿ ಖಾಸಗಿ ಕೆಲಸ ಗಿಟ್ಟಿಸಿ ಗ್ರಾಮಕ್ಕೆ ಹೆಗ್ಗಳಿಕೆ ತಂದಿದ್ದಾರೆ .

ಮೂಲ ಸೌಕರ್ಯಗಳಿಂದ ವಂಚಿತವಾಗಿರುವ ಚಿಂಚೋಳಿ ತಾಲ್ಲೂಕಿನ ತಾಜಲಾಪುರ ಗ್ರಾಮವು ಚಿಮ್ಮನಚೋಡ ಗ್ರಾ.ಪಂ. ವ್ಯಾಪ್ತಿಗೆ ಸೇರಿದೆ. ಈ ಗ್ರಾಮವು ಮುಲ್ಲಾಮಾರಿ ನದಿಯ ದಂಡೆಯ ಮೇಲಿದೆ.

ಭಾಲ್ಕಿ–ಚಿಂಚೋಳಿ ರಾಜ್ಯ ಹೆದ್ದಾರಿಯಿಂದ 1 ಕೀ.ಮೀ ದೂರದಲ್ಲಿರುವ ಈ ಗ್ರಾಮವು ಕೇವಲ 150 ರಿಂದ 180 ಮನೆಗಳನ್ನು ಹೊಂದಿದೆ. ಸರ್ಕಾರಿ ಉದ್ಯೋಗದಲ್ಲಿ (ಇಬ್ಬರು (ಎಂಬಿಬಿಎಸ್ ಎಂ.ಡಿ) ತಜ್ಞ ವೈದ್ಯರು, ಮೂವರು ಎಂಬಿಬಿಎಸ್ ವೈದ್ಯರು), ವೈದ್ಯರು 5, ಎಂಜಿನಿಯರ್ 5, ಎಂಬಿಎ 5, ಪಶು ವೈದ್ಯರು 1, ಸಬ್ ಇನ್‌ಸ್ಪೆಕ್ಟರ್ ಸೇರಿದಂತೆ ಪೋಲೀಸ್ ಇಲಾಖೆ 11, ಶಿಕ್ಷಣ ಇಲಾಖೆ 12, ಕಂದಾಯ ಇಲಾಖೆ 1, ಆರೋಗ್ಯ ಇಲಾಖೆ 3, ಸಾರಿಗೆ ಇಲಾಖೆ 3, ಕಾಲೇಜು ಶಿಕ್ಷಣ-1, ತಾಂತ್ರಿಕ ಶಿಕ್ಷಣ 2, ಭೂದಾಖಲೆ ಇಲಾಖೆ 1, ತಾ.ಪಂ. 3, ಹಾಲು ಒಕ್ಕೂಟ-1, ಇತರೆ 1 ಹೀಗೆ 45 ಮಂದಿ ಸರ್ಕಾರಿ ಹುದ್ದೆಯಲ್ಲಿದ್ದಾರೆ.

ಖಾಸಗಿ ಉದ್ಯೋಗದಲ್ಲಿ 20ಕ್ಕೂ ಹೆಚ್ಚು ಮಂದಿಯಿದ್ದು ಇವರಲ್ಲಿ ಕೆಲವರು ಸರ್ಕಾರಿ ನೌಕರರಿಗಿಂತ ಹೆಚ್ಚು ಸಂಬಂಳ ಪಡೆಯುತ್ತಿದ್ದಾರೆ. ಇಲ್ಲಿನ 75 ಮಂದಿಯಲ್ಲಿ 20ಕ್ಕೂ ಹೆಚ್ಚು ಮಂದಿಗೆ ಶಿಕ್ಷಣ ದಾಸೋಹ ನೀಡಿದ ಶ್ರೇಯಸ್ಸು ತುಮಕೂರಿನ ಸಿದ್ದಗಂಗಾ ಮಠಕ್ಕೆ ಸಲ್ಲುತ್ತದೆ. 20 ಮಂದಿಯಲ್ಲಿ 10 ಮಂದಿ ಸರ್ಕಾರಿ ನೌಕರಿಯಲ್ಲಿದ್ದರೆ, ಉಳಿದವರು ಖಾಸಗಿ ಉದ್ಯೋಗದಲ್ಲಿದ್ದು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.

756 ಮತದಾರರನ್ನು ಹೊಂದಿರುವ ಪುಟ್ಟ ಊರಿನಲ್ಲಿ 180 ಮನೆಗಳಿವೆ. ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 62 ಮಕ್ಕಳಿದ್ದಾರೆ. ಇಲ್ಲಿನ ಮಕ್ಕಳಿಗೆ ವಿಜಯಪುರದ ಶಿಕ್ಷಕ ಮೋದಿನಸಾಬ್ ಮತ್ತು ಸಿದ್ಧರಾಮ ಅವರು ಉತ್ತಮ ಅಡಿಪಾಯ ಹಾಕಿದ್ದಾರೆ ಎಂದು ಅವರ ಶಿಷ್ಯ ಬಳಗ ಸ್ಮರಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು