ಕಲಬುರಗಿ: ಮುಂಬೈ–ಬೆಂಗಳೂರು ವೇಗದ ರೈಲು (ಸ್ಪೀಡ್ ಟ್ರೇನ್) ಯೋಜನೆಯನ್ನು ಮುಂಬೈ–ಪುಣೆ– ಸೋಲಾಪುರ– ಕಲಬುರಗಿ– ರಾಯಚೂರು– ಬೆಂಗಳೂರು ಮಾರ್ಗದ ಮೂಲಕ ಜಾರಿಗೊಳಿಸುವಂತೆ ಕೇಂದ್ರ ರೈಲ್ವೆ ಸಚಿವಾಲಯಕ್ಕೆ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ) ವತಿಯಿಂದ ಮನವಿ ಸಲ್ಲಿಸಲಾಗಿದೆ.

ಈ ಕುರಿತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಮತ್ತು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಅದರ ಪ್ರತಿಯನ್ನು ಮಧ್ಯ ರೈಲ್ವೆ ಮಹಾ ವ್ಯವಸ್ಥಾಪಕರಿಗೆ, ಮುಂಬೈ ಸೆಂಟ್ರಲ್, ಸೋಲಾಪುರ ಹಾಗೂ ಬೆಂಗಳೂರು ರೈಲ್ವೆ ವಿಭಾಗದ ಡಿಆರ್ಎಂಗಳಿಗೂ ಸಹ ಕಳುಹಿಸಲಾಗಿದೆ ಎಂದು ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಎಂ. ಪಪ್ಪಾ ತಿಳಿಸಿದ್ದಾರೆ.

ಮುಂಬೈ–ಪುಣೆ– ಸೋಲಾಪುರ– ಕಲಬುರಗಿ– ರಾಯಚೂರು– ಬೆಂಗಳೂರು ಮಾರ್ಗವು ಈಗಾಗಲೇ ಪೂರ್ಣವಾಗಿ ವಿದ್ಯುತೀಕರಣ ಮತ್ತು ದ್ವಿಪಥ ಆಗಿದ್ದು, 130 ಕಿ.ಮೀ ವೇಗದ ರೈಲು ಸಂಚಾರಕ್ಕೆ ತಾಂತ್ರಿಕವಾಗಿ ಸಿದ್ಧವಾಗಿದೆ. ಈ ಮಾರ್ಗವು ಪರ್ಯಾಯ ಮಾರ್ಗವಾದ ಹುಬ್ಬಳ್ಳಿ–ಪುಣೆ ಮಾರ್ಗಕ್ಕಿಂತ 80–100 ಕಿ.ಮೀ ಕಡಿಮೆ ದೂರ ಹೊಂದಿದೆ. ಈ ಮೂಲಕ ಪ್ರಯಾಣ ಸಮಯವನ್ನು ಸುಮಾರು 1 ಗಂಟೆಯಿಂದ 2 ಗಂಟೆಗಳವರೆಗೆ ಕಡಿಮೆ ಮಾಡಬಹುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಮಾರ್ಗವು ಮಂತ್ರಾಲಯ, ಪಂಡರಾಪುರ, ತುಳಜಾಪುರ, ಗಾಣಗಾಪುರ, ಅಕ್ಕಲಕೋಟ ಮುಂತಾದ ಪ್ರಮುಖ ತೀರ್ಥ ಕ್ಷೇತ್ರಗಳನ್ನು ಸಂಪರ್ಕಿಸುತ್ತಿದ್ದು, ಜೊತೆಗೆ ಸೋಲಾಪುರ, ಕಲಬುರಗಿ, ರಾಯಚೂರು, ಅನಂತಪುರ ಮುಂತಾದ ಪ್ರಮುಖ ವ್ಯಾಪಾರ ಹಾಗೂ ಕೈಗಾರಿಕಾ ಕೇಂದ್ರಗಳನ್ನು ಕೂಡ ಸಂಪರ್ಕಿಸುತ್ತದೆ. ಇದರಿಂದ ಧಾರ್ಮಿಕ ಪ್ರವಾಸೋದ್ಯಮ, ವ್ಯಾಪಾರ ಹಾಗೂ ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಗೆ ಹೊಸ ಚೈತನ್ಯ ಸಿಗಲಿದೆ ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.