ವಿಶ್ವನಾಥ ಅವರನ್ನು ಖಾನಾಪುರ ಕ್ರಾಸ್ ಸಮೀಪದ ಆಳಂದ–ವಾಗ್ದರಿ ಮುಖ್ಯರಸ್ತೆ ಮೇಲೆ ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಗ್ರಾಮ ಪಂಚಾಯಿತಿ ಕೆಲಸದ ಸಂಬಂಧ ಪಿಡಿಒ ದಶರಥ ಪಾತ್ರೆ ಮತ್ತು ವಿಶ್ವನಾಥ ನಡುವೆ ವೈರತ್ವ ಬೆಳೆದಿತ್ತು. ವಿಶ್ವನಾಥ ಜತೆಗೆ ದಶರಥ ತಕರಾರು ಮಾಡುತ್ತಿದ್ದರು ಎಂದು ಆರೋಪಿ ವಿಶ್ವನಾಥ ಪತ್ನಿ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.