ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕಲಬುರಗಿ | ಅಸಲಿ ನಡುವೆ ನುಸುಳುವ ‘ನಕಲಿ’ ಬೀಜ, ಗೊಬ್ಬರ: ಬೇಕಿದ ಕಡಿವಾಣ

Published : 9 ಜೂನ್ 2025, 7:02 IST
Last Updated : 9 ಜೂನ್ 2025, 7:02 IST
ಫಾಲೋ ಮಾಡಿ
Comments
ಕಮಲಾಪುರ ತಾಲ್ಲೂಕಿನ ರೈತ ಸಂಪರ್ಕ ಕೇಂದ್ರ ಮುಂಭಾಗದಲ್ಲಿ ಗೊಬ್ಬರ ಖರೀದಿಸಿದ ರೈತರು
ಕಮಲಾಪುರ ತಾಲ್ಲೂಕಿನ ರೈತ ಸಂಪರ್ಕ ಕೇಂದ್ರ ಮುಂಭಾಗದಲ್ಲಿ ಗೊಬ್ಬರ ಖರೀದಿಸಿದ ರೈತರು
ಕಲಬುರಗಿಯಲ್ಲಿನ ಕೆಎಸ್‌ಎಸ್‌ಸಿ ಬೀಜ ಘಟಕಕ್ಕೆ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಭೇಟಿ ನೀಡಿ ಪರಿಶೀಲಿಸಿದರು
ಕಲಬುರಗಿಯಲ್ಲಿನ ಕೆಎಸ್‌ಎಸ್‌ಸಿ ಬೀಜ ಘಟಕಕ್ಕೆ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಭೇಟಿ ನೀಡಿ ಪರಿಶೀಲಿಸಿದರು
ಚಿತ್ತಾಪುರ ತಾಲ್ಲೂಕಿನಲ್ಲಿ ಕೃಷಿ ಇಲಾಖೆ ಸಿಬ್ಬಂದಿ ಮುಂಗಾರು ಹಂಗಾಮಿನ ಬೀಜೋಪಚಾರ ಅಭಿಯಾನ ನಡೆಸಿದರು
ಚಿತ್ತಾಪುರ ತಾಲ್ಲೂಕಿನಲ್ಲಿ ಕೃಷಿ ಇಲಾಖೆ ಸಿಬ್ಬಂದಿ ಮುಂಗಾರು ಹಂಗಾಮಿನ ಬೀಜೋಪಚಾರ ಅಭಿಯಾನ ನಡೆಸಿದರು
ಕೃಷಿ ಇಲಾಖೆಯ ನಿಯಮಗಳ ಅನುಸಾರ ಬೀಜ ಗೊಬ್ಬರ ಕೀಟನಾಶಕಗಳನ್ನು ಮಾರುತ್ತಿದ್ದೇವೆ. ನಕಲಿ ಕೃಷಿ ಪರಿಕರಗಳ ಮಾರಾಟ ಕಂಡುಬಂದಲ್ಲಿ ಕೃಷಿ ಇಲಾಖೆಗೆ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ
ಬಸವರಾಜ ಚಂದ್ರಕಾಂತ ಮಂಗಲಗಿ ಕಲಬುರಗಿ ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ
ಕೆಲವು ವರ್ತಕರು ಗೊಬ್ಬರದ ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ. ಕೃಷಿ ಇಲಾಖೆಯ ಅಧಿಕಾರಿಗಳು ಅಂತಹವರ ಮೇಲೆ ನಿಗಾ ಇರಿಸಿ ಕ್ರಮ ತೆಗೆದುಕೊಳ್ಳಲು ಮುಂದಾಗಬೇಕು
ಶ್ರೀಮಂತ ಬಿರಾದಾರ ಕರ್ನಾಟಕ ರೈತ ಸಂಘದ ಅಧ್ಯಕ್ಷ
ಕೃಷಿ ಕೇಂದ್ರ ಅಂಗಡಿಗಳ ಮುಂದೆ ಬಿತ್ತನೆ ಬೀಜ ಗೊಬ್ಬರ ಕೀಟನಾಶಕಗಳ ದಾಸ್ತಾನು ಮಾಹಿತಿ ಹಾಗೂ ದರ ಪಟ್ಟಿಯನ್ನು ಹಾಕಬೇಕು. ಬೀಜ ಗೊಬ್ಬರ ವಿತರಣೆಯಲ್ಲಿ ಅಡ್ಡಿಯಾಗಬಾರದು
ಸಂತೋಷಕುಮಾರ ಎಸ್.ಪಿ ಕನಸು ಸೇವಾ ಸಂಸ್ಥೆ ಅಧ್ಯಕ್ಷ
ರಸೀದಿ ಪ್ಯಾಕೆಟ್‌ ಸಹಿತ ಮುಷ್ಟಿ ಬೀಜ ಗೊಬ್ಬರ...
‘ಅಧಿಕೃತ ಅಂಗಡಿಗಳಲ್ಲಿ ಯಾವುದೇ ಬಿತ್ತನೆ ಬೀಜ ಗೊಬ್ಬರ ಖರೀದಿಸಿದ ರೈತರು ಕಡ್ಡಾಯವಾಗಿ ರಸೀದಿಗಳನ್ನು ಪಡೆಯಬೇಕು. ಪ್ಯಾಕೆಟ್‌ನೊಂದಿಗೆ ಒಂದು ಮುಷ್ಟಿಯಷ್ಟು ಬೀಜ ಮತ್ತು ಗೊಬ್ಬರವನ್ನು ಕಾಯ್ದಿಟ್ಟುಕೊಳ್ಳಬೇಕು. ಒಂದು ವೇಳೆ ಸರಿಯಾಗಿ ಬೆಳೆ ಬಾರದೆ ಇದ್ದಲ್ಲಿ ಬೀಜ ಗೊಬ್ಬರವನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಅದರ ಗುಣಮಟ್ಟದ ಪರೀಕ್ಷೆಗೆ ನೆರವಾಗುತ್ತದೆ. ಅಂಗಡಿ ಮಾಲೀಕ ಕಂಪನಿ ವಿರುದ್ಧ ಕಾನೂನು ಕ್ರಮಕ್ಕೆ ರಸೀದಿ ಸಹಾಯಕವಾಗುತ್ತದೆ’ ಎಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ಪರವಾನಗಿ ಹೊಂದಿರುವ ವರ್ತಕರು ಕೃಷಿ ಇಲಾಖೆಯ ನಿಯಂತ್ರಣದಲ್ಲಿ ಇರುತ್ತಾರೆ. ರಸೀದಿ ಇದ್ದರೆ ಅವರನ್ನು ಸುಲಭವಾಗಿ ಪತ್ತೆಹಚ್ಚಿ ಕಾನೂನಿನ ಮುಂದೆ ನಿಲ್ಲಿಸಿ ರೈತನಿಗೆ ನ್ಯಾಯಕೊಡಿಸಬಹುದು. ಹೆಚ್ಚಿನ ಶಿಕ್ಷೆಗೆ ಪೊಲೀಸರಿಗೂ ದೂರು ಕೊಡಬಹುದು. ರಸೀದಿ ಇಲ್ಲದಿದ್ದರೆ ಏನೂ ಮಾಡಲು ಆಗದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT