ಶನಿವಾರ, ಮೇ 15, 2021
24 °C

ಕೃಷಿ ಕಾಯ್ದೆಗಳಿಗೆ ವಿರೋಧ: ಕಲಬುರ್ಗಿಯಲ್ಲಿ ಬಂದ್ ಇಲ್ಲ; ಪ್ರತಿಭಟನೆ ಮಾತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಸಂಯುಕ್ತ ಕಿಸಾನ್ ಸಂಘಟನೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಶುಕ್ರವಾರ ಕರೆ ನೀಡಿದ ʼಭಾರತ ಬಂದ್ʼ ಜಿಲ್ಲೆಯಲ್ಲಿ ವಿಫಲವಾಯಿತು.

ಬೆಳಿಗ್ಗೆ ಎಂದಿನಂತೆಯೇ ಜನಜೀವನ ಮುಂದುವರೆಯಿತು. ಸರ್ಕಾರಿ ಬಸ್, ಆಟೋ, ಕಾರ್, ಬೈಕ್ ಸೇರಿದಂತೆ ಎಲ್ಲ ವಾಹನಗಳೂ ಓಡಾಡಿದವು. ಬೆಳಿಗ್ಗೆಯೇ ಎಲ್ಲ ವ್ಯಾಪಾರಿಗಳು ತಮ್ಮ ಅಂಗಡಿ ಮುಂಗಟ್ಟುಗಳನ್ನು ತೆರೆದು ವಹಿವಾಟು ನಡೆಸಿದರು. 

ಇಲ್ಲಿನ ಸೂಪರ್ ಮಾರ್ಕೆಟ್, ಕಣ್ಣಿ ಮಾರ್ಕೆಟ್, ಬಸ್ ನಿಲ್ದಾಣ,  ಎಪಿಎಂಸಿಗಳಲ್ಲಿ ಕೂಡ ಜನಸಂದಣಿ ಯಥಾ ಪ್ರಕಾರ ಇತ್ತು.

ಪ್ರಮುಖ ವೃತ್ತಗಳು, ಚೌಕಗಳು, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು.

ಬಂದ್ ನಡೆಸಲು ಪೊಲೀಸ್ ಇಲಾಖೆ ಅನುಮತಿ ನೀಡದ ಕಾರಣ,  ಹೋರಾಟಗಾರರು ಪ್ರತಿಭಟನೆ ಮಾತ್ರ ನಡೆಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು