ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಂಚಮಸಾಲಿ ಸಮಾಜ 2ಎಗೆ ಸೇರಿಸಿ’

Last Updated 2 ನವೆಂಬರ್ 2020, 11:25 IST
ಅಕ್ಷರ ಗಾತ್ರ

ಕನಕಗಿರಿ: ಪಂಚಮಸಾಲಿ ಸಮಾಜವನ್ನು 2ಎ ಗೆ ಸೇರಿಸಿ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಸಮಾಜ ಬಾಂಧವರು ಸೋಮವಾರ ತಹಶೀಲ್ದಾರ್ ರವಿ ಅಂಗಡಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಸಮಾಜದ ಪ್ರಮುಖರಾದ ಚಂದ್ರೆಗೌಡ ಪಾಟೀಲ, ವೀರೇಶ ದೇವರಾಳ, ಬಸವರಾಜ ಕೋರಿ ಮಾತನಾಡಿ,‘ಪಂಚಮಸಾಲಿ ಸಮಾಜದವರು ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ಧಾರೆ. ಅದರಲ್ಲಿ ಶೇ. 90ರಷ್ಟು ಜನರು ಬಡವರಾಗಿದ್ದಾರೆ. ಕೃಷಿ ನಂಬಿ ಜೀವನ ಸಾಗಿಸುತ್ತಿದ್ಧಾರೆ ಎಂದು ತಿಳಿಸಿದ್ದಾರೆ.

2ಎ ಮೀಸಲಾತಿ ಸೌಲಭ್ಯ ನೀಡುವಂತೆ ಅನೇಕ ವರ್ಷಗಳಿಂದಲೂ ಹೋರಾಟ ನಡೆಸಿಕೊಂಡು ಬರುತ್ತಿದ್ದರೂ ಸರ್ಕಾರಗಳು ಗಮನಕ್ಕೆ ತೆಗೆದುಕೊಳ್ಳುತ್ತಿಲ್ಲ. ಸರ್ಕಾರದ ನೀತಿಯಿಂದ ಸಮಾಜ ಬಾಂಧವರು ಬೇಸತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಮುಖರಾದ ಶರಣಪ್ಪ ಗುಂಡದ, ಬಸವರಾಜ ಕಲಕೇರಿ, ರಾಜ ಚಿನ್ನೂರು, ವೀರನಗೌಡ ಕಾರಪುಡಿ, ಸಿದ್ದನಗೌಡ, ನಾಗಪ್ಪ, ವಿರೂಪಾಕ್ಷಪ್ಪ ಕಲಕೇರಿ ಹಾಗೂ ಉಮಾಕಾಂತ ದೇಸಾಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT