ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಭಾವನೆಗಳ ಅಕ್ಷರ ರೂಪವೆ ಕಾವ್ಯ’

ಸೇಡಂ; ಶ್ರಾವಣ ಕಾವ್ಯ ಸಂಜೆ ಕವಿಗೋಷ್ಠಿ
Published : 20 ಆಗಸ್ಟ್ 2024, 5:27 IST
Last Updated : 20 ಆಗಸ್ಟ್ 2024, 5:27 IST
ಫಾಲೋ ಮಾಡಿ
Comments

ಸೇಡಂ: ‘ಭಾವನೆಗಳನ್ನು ಅಕ್ಷರಗಳ ರೂಪದಲ್ಲಿ ಅಭಿವ್ಯಕ್ತಿಸಿದಾಗ ಉಂಟಾಗುವ ಆನಂದವೇ ಕಾವ್ಯವಾಗುತ್ತದೆ’ ಎಂದು ಲೇಖಕಿ ಶೋಭಾದೇವಿ ಚೆಕ್ಕಿ ಅಭಿಪ್ರಾಯಪಟ್ಟರು.

ಪಟ್ಟಣದ ನೀಲಗಂಗಮ್ಮ ಸಜ್ಜನಶೆಟ್ಟಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನೃಪತುಂಗ ಅಧ್ಯಯನ ಸಂಸ್ಥೆ ಆಯೋಜಿಸಿದ್ದ ಶ್ರಾವಣ ಕಾವ್ಯ ಸಂಜೆ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

‘ಕಾವ್ಯ ಮತ್ತೊಬ್ಬರ ಒತ್ತಾಯಕ್ಕೆ ಉದ್ಭವಿಸಲಾರದು. ಅನುಭವ, ಅಧ್ಯಯನ, ಆಸಕ್ತಿಯ ಫಲವಾಗಿ ಮೂಡುವ ಕವನಗಳಿಂದ ಓದುಗರ ಮನಸ್ಸು ಅರಳುವಂತೆ ಆಗುತ್ತದೆ. ಸಾಹಿತ್ಯದಲ್ಲಿ ಆಸಕ್ತಿ ಇರುವ ಎಲ್ಲರೂ ಬೆಳೆಯುವಂತಹ ಅವಕಾಶಗಳನ್ನು ಇಲ್ಲಿನ ನೃಪತುಂಗ ಅಧ್ಯಯನ ಸಂಸ್ಥೆ ಮಾಡುತ್ತಿರುವುದು ಅಭಿನಂದನಾರ್ಹವಾಗಿದೆ’ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಗೊಣಗಿ ಮತ್ತು ತಾಲ್ಲೂಕು ಬರಹಗಾರರ ಸಂಘದ ಅಧ್ಯಕ್ಷ ರುಕ್ಮಿಣಿ ಕಾಳಗಿ ಭಾಗವಹಿಸಿದ್ದರು. ಮಕ್ಕಳ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷೆ ಆರತಿ ಕಡಗಂಚಿ ಅಧ್ಯಕ್ಷತೆ ವಹಿಸಿ, ವಾಚಿಸಿದ ಎಲ್ಲ ಕವಿಗಳ ಕವನಗಳನ್ನು ವಿಶ್ಲೇಷಿಸಿದರು. ‘ಕಾವ್ಯಕೃಷಿ ಮಾಡಲು ಇಲ್ಲಿನ ಮನೋನೆಲ ಫಲವತ್ತಾಗಿದೆ’ ಎಂದರು.

ಕವಿಗಳಾದ ಲಿಂಗಾರೆಡ್ಡಿ ಶೇರಿ, ಎಂ.ಜಿ.ದೇಶಪಾಂಡೆ, ವಿಜಯಲಕ್ಷ್ಮಿ ಪತ್ತಾರ, ವಿಠಲ್ ಬರಮಕರ್, ಚಂದ್ರಕಲಾ ಪಾಟೀಲ, ಸುವರ್ಣ ಅಳ್ಳೊಳ್ಳಿ, ಜ್ಯೋತಿ ಲಿಂಗಂಪಲ್ಲಿ, ಅಮರಮ್ಮ ಪಾಟೀಲ, ನಾಗಲಕ್ಷ್ಮಿ ಪಾಟೀಲ, ವಿಜಯಭಾಸ್ಕರ ರೆಡ್ಡಿ, ಸಂತೋಷ ತೊಟ್ನಳ್ಳಿ, ಶ್ರೀಶರಣು, ಮುರುಗೆಪ್ಪ ಹಣಮನಳ್ಳಿ, ಸವಿತಾ ಕುಂಬಾರ, ಪ್ರಮೀಳಾ ಪಾಟೀಲ, ಗಣಪತಿ ಬಡಿಗೇರ, ವೀರಯ್ಯಸ್ವಾಮಿ ಮಠಪತಿ, ಶಿವಾರೆಡ್ಡಿ ಸೇರಿದಂತೆ ಅನೇಕ ಕವಿಗಳು ಕವನ ವಾಚಿಸಿದರು.

ಪ್ರಮುಖರಾದ ಶಿವಯ್ಯಸ್ವಾಮಿ ಬಿಬ್ಬಳ್ಳಿ, ಸುಲೋಚನ ಬಿಬ್ಬಳ್ಳಿ, ಜನಾರ್ದನರೆಡ್ಡಿ ತುಳೇರ, ವೀರಭದ್ರಪ್ಪ ಟೆಂಗಳಿ, ಶರಣು ಮಹಾಗಾಂವ, ಆದಿತ್ಯ ಜೋಶಿ, ಕಾರ್ತಿಕರೆಡ್ಡಿ, ವೀರಭದ್ರಯ್ಯಸ್ವಾಮಿ ಹಾಜರಿದ್ದರು. ಲಲಿತಾ ಕೋಕಟ್ ಪ್ರಾರ್ಥಿಸಿದರು. ಸಿದ್ದಪ್ಪ ತಳ್ಳಳ್ಳಿ ಸ್ವಾಗತಿಸಿದರು. ಮಹಿಪಾಲರೆಡ್ಡಿ ಮುನ್ನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾಗ್ಯಶ್ರೀ ಮಠಪತಿ ನಿರೂಪಿಸಿದರು. ನೃಪತುಂಗ ಅಧ್ಯಯನ ಸಂಸ್ಥೆ ಅಧ್ಯಕ್ಷ ಪ್ರಭಾಕರ ಜೋಶಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT