ತುರ್ವಿಹಾಳ: ‘ವಿದ್ಯಾರ್ಥಿಗಳಿಗೆ ಕಳಪೆ ಗುಣಮಟ್ಟದ ಬಿಸಿಯೂಟ ವಿತರಿಸಲಾಗಿದೆ’ ಎಂದು ಆರೋಪಿಸಿ ಹತ್ತಿಗುಡ್ಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಹಾಗೂ ಅಡುಗೆ ಸಹಾಯಕರನ್ನು ಗ್ರಾಮಸ್ಥರು ಗುರುವಾರ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಶಾಲೆಯಲ್ಲಿ 1ರಿಂದ 8ನೇ ತರಗತಿವರೆಗೆ ಒಟ್ಟು 96 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ‘ಮಧ್ಯಾಹ್ನ ತಯಾರಿಸಿದ ಬಿಸಿಯೂಟದ ಅನ್ನದಲ್ಲಿ ಶುಚಿತ್ವದ ಕೊರತೆ ಹಾಗೂ ತೀರಾ ಕಳಪೆ ಆಹಾರ ವಿತರಿಸಲಾಗಿದೆ’ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

‘ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿರುವ ಬಿಸಿಯೂಟವನ್ನು ಮುಖ್ಯಶಿಕ್ಷರು ಪರಿಶೀಲನೆ ನಡೆಸಬೇಕು. ನಿತ್ಯ ಶುಚಿತ್ವದಿಂದ ಆಹಾರ ತಯಾರಿಸಬೇಕು. ಅಡುಗೆ ಸಹಾಯಕರ ಮೇಲೆ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

ಈವೇಳೆ ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ ಬೇವಿನಗಿಡ, ಗ್ರಾಮಸ್ಥರಾದ ಶಿವಲಿಂಗ ಭಂಡಾರಿ, ಸಣ್ಣ ವೆಂಕೋಬ, ಮರಿಯಪ್ಪ, ಬಸವರಾಜ, ಮಲ್ಲಪ್ಪ, ಬಸವರಾಜ, ಅಮರೇಶ, ಬಸವಂತಪ್ಪ, ಹನುಮಂತ, ಮುರ್ತೆಪ್ಪ, ತಿಮ್ಮಣ್ಣ, ಜಮದಗ್ನಿ, ತಿಮ್ಮಮ್ಮ, ಹನುಮಮ್ಮ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.