ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೂರಜ್ ಪ್ರಕರಣ ಅಸಹ್ಯಕರ: ಪ್ರಿಯಾಂಕ್ ಖರ್ಗೆ

Published 23 ಜೂನ್ 2024, 16:01 IST
Last Updated 23 ಜೂನ್ 2024, 16:01 IST
ಅಕ್ಷರ ಗಾತ್ರ

ಕಲಬುರಗಿ: ‘ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರು ಯುವಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾದ ಪ್ರಕರಣ ಅಸಹ್ಯವಾಗಿದೆ. ದೊಡ್ಡ ಮನೆ ಎನಿಸಿಕೊಂಡು ಅಧಿಕಾರದಲ್ಲಿ ಇರುವವರು ಸಮಾಜಕ್ಕೆ ಏನು ಸಂದೇಶ ಕೊಡುತ್ತಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಕೇಳಿದರು.

ನಗರದಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಯಡಿಯೂರಪ್ಪ, ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ ಅವರ ಪ್ರಕರಣಗಳು ವಿಚಿತ್ರ, ವಿಕೃತಿ, ಅಸಹ್ಯ ಪಡುವಂತಹವು. ಆಶ್ಚರ್ಯ ಎಂದರೆ ಅವರಿಗೆ ಏನೂ ಅನಿಸುತ್ತಿಲ್ಲ. ಬೇರೆಯವರ ರಾಜೀನಾಮೆ ಕೇಳುವವರು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದರು.

‘ದೊಡ್ಡ ಮನೆಯ ಎಲ್ಲರೂ ಅಧಿಕಾರದಲ್ಲಿದ್ದಾರೆ. ಅವರ ಮೇಲೆ ಏನು ಹೊಣಗಾರಿಕೆ ಇದೆ? ಸಮಾಜಕ್ಕೆ ಏನು ಸಂದೇಶ ಕೊಡುತ್ತಿದ್ದಾರೆ. ಕುಟುಂಬದ ಮೇಲಿನ ಕಪ್ಪು ಚುಕ್ಕೆ ಅಳಿಸುವವರೆಗೆ ಅಧಿಕಾರ ಬಿಟ್ಟುಕೊಡುವ ಮಾದರಿ ನಡೆ ಅನುಸರಿಸಬೇಕು. ಅವರನ್ನು ನಂಬಿಕೊಂಡು ಪಕ್ಷದ ಲಕ್ಷಾಂತರ ಜನರು, ಎನ್‌ಡಿಎ ಸರ್ಕಾರ ಕೂಡ ನಡೆಯುತ್ತಿದೆ’ ಎಂದು ಹೇಳಿದರು.

‘ಬೇಟಿ ಬಚಾವೋ ಬೇಟಿ ಪಡಾವೊ ಎಂದು ನ್ಯಾಯದ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು ತಮ್ಮ ಪಕ್ಷದವರು ಕಾನೂನು ಉಲ್ಲಂಘಿಸಿದಾಗ, ಪೋಕ್ಸೊ ಪ್ರಕರಣದಲ್ಲಿ ಆರೋಪಿಯಾದಾಗ ಮೌನವಾಗಿ ಇರುವುದು ಏಕೆ’ ಎಂದು ಪ್ರಶ್ನಿಸಿದರು.

ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT