ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಚಾರಿಕ ಜ್ಞಾನದ ಹಸಿವು ಹೆಚ್ಚಿಸಕೊಳ್ಳಿ: ಕೆ.ಎಸ್.ಭಗವಾನ್ ಸಲಹೆ

ಆಳಂದ: ಸಂವಿಧಾನ ರಕ್ಷಣೆಗಾಗಿ ಸಂಕಲ್ಪ ಸಮಾವೇಶ
Last Updated 27 ಜನವರಿ 2020, 11:23 IST
ಅಕ್ಷರ ಗಾತ್ರ

ಆಳಂದ: ಸಮಾಜದಲ್ಲಿ ಶೋ ಷಣೆ, ಅಸಮಾನತೆ ವಿರುದ್ದ ಹೋರಾಡಬೇಕಾದರೆ ಇಂದಿನ ಯುವಕರು ವೈಚಾರಿಕ ಜ್ಞಾನದ ಹಸಿವು ಹೆಚ್ಚಿಸಿಕೊಳ್ಳುವ ಅಗತ್ಯವಿದೆ ಎಂದು ಸಾಹಿತಿ ಕೆ.ಎಸ್. ಭಗವಾನ್‌ ತಿಳಿಸಿದರು.

ಪಟ್ಟಣದ ಎ.ವಿ.ಪಾಟೀಲ ಕಲ್ಯಾಣ ಮಂಟಪದಲ್ಲಿ ಶನಿವಾರ ಭೀಮ್‌ ಆರ್ಮಿಯ ವತಿಯಿಂದ ಏರ್ಪಡಿಸಿದ ಸಂವಿಧಾನ ರಕ್ಷಣೆಗಾಗಿ ಭೀಮ ಸಂಕಲ್ಪ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಹೋರಾಟ, ಸಂಘಟನೆಗಳಿಗೆ ವಿಚಾರಗಳು ಶಕ್ತಿ ತುಂಬಲಿವೆ. ಅದಕ್ಕೆ ಯಾವುದೇ ಪ್ರಗತಿಪರ ಹೋರಾಟ ಯಶಸ್ವಿಗೊಳಿಸಲು ಡಾ.ಅಂಬೇಡ್ಕರ್‌ ಅವರ ಚಿಂತನೆಗಳು ಮೈಗೂಡಿಸಿಕೊ ಳ್ಳುವುದು ಮುಖ್ಯವಿದೆ ಎಂದರು.

ಭೀಮ ಆರ್ಮಿಯ ಜಿಲ್ಲಾಧ್ಯಕ್ಷ ನಾಗೇಶ ಕೊಳ್ಳಿ ಮಾತನಾಡಿ ‘ಡಾ.ಅಂಬೇಡ್ಕರ್‌ ರಚಿಸಿದ ಸಂವಿಧಾನವನ್ನು ತಿದ್ದುಪಡಿ ಮಾಡುವ ಹುನ್ನಾರ ನಡೆದಿದೆ. ಕೋಮುವಾದಿಗಳ ಎಲ್ಲ ಪ್ರಯತ್ನದ ವಿರುದ್ದ ಭೀಮಾ ಆರ್ಮಿ ಜಾಗೃತಗೊಂಡ ಹೋರಾಟ ನಡೆಸಲು ಸಜ್ಜುಗೊಳಿಸಬೇಕಿದೆ ಎಂದರು.

ಹಣಮಂತ ಯಳಸಂಗಿ, ಡಾ.ವಿಠಲ ವಗ್ಗನ್, ಜೆ.ಎಂ. ಕೋರಬು ಮಾತನಾಡಿ‘ ಸಂವಿಧಾನವೇ ಶ್ರೇಷ್ಠ ಗ್ರಂಥವಾಗಿದೆ. ಪ್ರತಿಯೊಬ್ಬರಿಗೂ ಘನತೆ ಕಲ್ಪಿಸಿದ ಪವಿತ್ರವಾದ ಸಂವಿಧಾನರ ರಕ್ಷಣೆ ಎಲ್ಲರ ಹೊಣೆಯಾ ಗಿದೆ ಎಂದರು.

ತಾಲ್ಲೂಕು ಘಟಕದ ಅಧ್ಯಕ್ಷ ಸೂರ್ಯ ಕಾಂತ ಜಿಡಗಾ ಅಧ್ಯಕ್ಷತೆ ವಹಿಸಿದರು. ಪ್ರೊ.ಎಸ್‌.ಪಿ. ಮೇಲಿನಕೇರಿ, ಜಿ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಿದ್ದರಾಮ ಪ್ಯಾಟಿ, ಪ್ರಕಾಶ ಮೂಲಭಾರತಿ, ದತ್ತಾತ್ರೇಯ ಇಕ್ಕಳಕಿ, ನಾಗೇಂದ್ರ ಹೆಬಳಿ, ಧರ್ಮಾ ಬಂಗರಗಾ, ರಮೇಶ ಮಾಡ್ಯಾಳಕರ, ಕೆ.ಎಂ. ಶಿವಮೂರ್ತಿ, ಮರೆಪ್ಪ ಬಡಿಗೇರ ಇದ್ದರು. ಜಿ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಿದ್ದರಾಮ ಪ್ಯಾಟಿ, ಕೆಎಎಸ್‌ ಗೆ ಆಯ್ಕೆಯಾದ ಅಂಬಾದಾಸ ಕಾಂಬಳೆ, ದಂತವೈದ್ಯ ಅರ್ಚನಾ ಗಾಯಕವಾಡ ಅವರಿಗೆ ಸನ್ಮಾನಿಸಲಾಯಿತು. ಪ್ರಣವ ಡೋಲೆ ನಿರೂಪಿಸಿ ದರೆ, ಸೂರ್ಯಕಾಂತ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT