ಕಲಬುರಗಿ: ಜಿಲ್ಲಾ ವಕ್ಫ್ ಮಂಡಳಿಯ ಅಧಿಕಾರಿಗಳು ಮುಸ್ಲಿಂ ಸಮುದಾಯದವರಿಗೆ ಸೌಕರ್ಯಗಳನ್ನು ಒದಗಿಸುವ ಬದಲು ರಾಜಕೀಯ ನಾಯಕರು, ವಾಣಿಜ್ಯ ಉದ್ಯಮಿಗಳಿಗೆ ಬೆಂಬಲ ಕೊಡುತ್ತಿದ್ದಾರೆ ಎಂದು ಆರೋಪಿಸಿ ಜನತಾ ಪರಿವಾರ ಸಂಘಟನೆ ಮುಖಂಡರು ವಕ್ಫ್ ಕಚೇರಿ ಮುಂಭಾಗದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ವಕ್ಫ್ ಮಂಡಳಿಯ ಸದಸ್ಯರ ನೇಮಕ ಹಾಗೂ ಪರಿಹಾರಕ್ಕಾಗಿ ನಿಯಂತ್ರಕ ಸಮಿತಿಗಳನ್ನು ರಚಿಸಬೇಕು. ಪ್ರತಿಯೊಂದು ಪ್ರದೇಶದಲ್ಲಿ ಮಸೀದಿಯ ಸಮಿತಿಯು ಮೇಲ್ವಿಚಾರಣೆ ಮಾಡಬೇಕು ಎಂದು ಕೋರಿದ್ದಾರೆ.
ಪ್ರತಿಭಟನೆಯಲ್ಲಿ ಮುಖಂರಾದ ಸಿರಾಜ್ ಶಬ್ದಾ, ಶೇಖ್ ಸೈಫಾನ್, ಅಬ್ದುಲ್ ಹುಸೇನ್, ಅಬ್ದುಲ್ ಸಬೀರ್ ಸೇರಿ ಹಲವರು ಪಾಲ್ಗೊಂಡಿದ್ದರು.