₹3 ಕೋಟಿ ವೆಚ್ಚದಲ್ಲಿ ಮನೆ ನಿರ್ಮಿಸುತ್ತಿರುವ ಆರೋಪಿ ಮಂಜುನಾಥ ಮೇಳಕುಂದಿ

ಕಲಬುರಗಿ: ಪಿಎಸ್ಐ ನೇಮಕಾತಿ ಹಗರಣದಲ್ಲಿ ಭಾನುವಾರ ಸಿಐಡಿಗೆ ಶರಣಾಗಿರುವ ಅಮರ್ಜಾ ನೀರಾವರಿ ಯೋಜನೆಯ ಸಹಾಯಕ ಎಂಜಿನಿಯರ್ ಮಂಜುನಾಥ ಮೇಳಕುಂದಿ ಜಯನಗರದಲ್ಲಿ ಸುಮಾರು ₹ 3 ಕೋಟಿ ವೆಚ್ಚದಲ್ಲಿ ಮನೆ ನಿರ್ಮಿಸುತ್ತಿರುವುದು ಪತ್ತೆಯಾಗಿದೆ.
ಅಕ್ರಮ ನೇಮಕ ಪ್ರಕರಣ ಬೆಳಕಿಗೆ ಬರದಿದ್ದರೆ ವಿದೇಶಕ್ಕೆ ತೆರಳಿ ಇಂಟಿರಿಯರ್ ಡಿಸೈನ್‌ಗೆ ಅಗತ್ಯವಾದ ಪರಿಕರ ಹಾಗೂ ಪೀಠೋಪಕರಣಗಳನ್ನು ತರಲು ತಯಾರಿ ನಡೆಸಿದ್ದರು ಎನ್ನಲಾಗಿದೆ.
ಕಳೆದ 21 ದಿನಗಳ ಕಾಲ ಮಂಜುನಾಥ ಬೆಂಗಳೂರು, ಮಂಗಳೂರು, ಕಾರವಾರ, ಆಂಧ್ರಪ್ರದೇಶ ಸೇರಿದಂತೆ ಅನೇಕ ಕಡೆ ಸುತ್ತಾಡಿದ್ದು, ಪೊಲೀಸರಿಗೆ ಸಿಕ್ಕಿ ಬೀಳುವ ಭಯದಿಂದ ಒಂದು ಕಡೆ ನೆಲೆ ನಿಂತಿರಲಿಲ್ಲ ಎನ್ನಲಾಗಿದೆ.
ಇವುಗಳನ್ನು ಓದಿ...
ನಿನ್ನಿಂದಲೇ ಎಲ್ಲ ಆಗಿದ್ದು, ಅಪ್ಪ ಜೈಲಿಗೆ ಹೋಗಿದ್ದು ಎಂದ ದಿವ್ಯಾ ಹಾಗರಗಿ ಮಕ್ಕಳು
ಪಿಎಸ್ಐ ನೇಮಕಾತಿ ಅಕ್ರಮ: ಜ್ಞಾನಜ್ಯೋತಿ ಶಾಲೆಯ ಮುಖ್ಯಶಿಕ್ಷಕ ಕಾಶಿನಾಥ ಶರಣು
ಸುಂಕದಕಟ್ಟೆ ಆ್ಯಸಿಡ್ ದಾಳಿ ಪ್ರಕರಣ: ಆರೋಪಿ ಪತ್ತೆಗೆ ಪೊಲೀಸರ 7 ತಂಡ ರಚನೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.