ಗುರುವಾರ , ಆಗಸ್ಟ್ 18, 2022
25 °C

ಹಾಸ್ಟೆಲ್‌ಗಳಲ್ಲಿ ಇಂಗ್ಲಿಷ್ ಪಾಠ: ಆದೇಶ ವಾಪಸ್‌ಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಸರ್ಕಾರಿ ಪದವಿಪೂರ್ವ ಕಾಲೇಜುಗಳ ಇಂಗ್ಲಿಷ್ ಉಪನ್ಯಾಸಕರಿಗೆ ಈಗಾಗಲೇ ಹೆಚ್ಚು ಕಾರ್ಯಭಾರ ಇರುವುದರಿಂದ ಬಿಸಿಎಂ ಇಲಾಖೆಯ ಹಾಸ್ಟೆಲ್‌ಗಳಿಗೆ ತಿಂಗಳಲ್ಲಿ 15 ದಿನ ತೆರಳಿ ಸ್ಪೋಕನ್ ಇಂಗ್ಲಿಷ್ ಬೋಧಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಉಪನ್ಯಾಸಕರನ್ನು ಹಾಸ್ಟೆಲ್‌ಗಳಿಗೆ ನಿಯೋಜಿಸಿ ಹೊರಡಿಸಿದ ಆದೇಶ ಹಿಂಪಡೆಯುವಂತೆ ಒತ್ತಾಯಿಸಿ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಪದಾಧಿಕಾರಿಗಳು ಸೋಮವಾರ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದರು.

‘ಇಂಗ್ಲಿಷ್ ಉಪನ್ಯಾಸಕರು ನಿರಂತರವಾಗಿ ಪಿಯುಸಿ ಪರೀಕ್ಷೆ ಕಾರ್ಯ, ಮೌಲ್ಯಮಾಪನ ಕಾರ್ಯ, ಸಿಇಟಿ ಪರೀಕ್ಷೆ, ‍ಪ್ರಥಮ ಹಾಗೂ ದ್ವಿತೀಯ ಪಿಯುಸಿಗೆ ದಾಖಲಾತಿ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳಿಗೆ ವಿಶ್ವಾಸ ಕಿರಣ ಎಂಬ ಭಾಷಾ ಬೋಧನೆ ವಿಷಯವನ್ನು ಬೋಧಿಸುವುದರ ಜೊತೆಗೆ ಪರೀಕ್ಷಾ ಫಲಿತಾಂಶವನ್ನು ಹೆಚ್ಚಿಸಲು ಮಕ್ಕಳಿಗೆ ವಿಶೇಷ ತರಗತಿಗಳನ್ನು ತೆಗೆದುಕೊಳ್ಳುತ್ತಾ ನಿರಂತರವಾಗಿ ಬೋಧನಾ ಕಾರ್ಯದಲ್ಲಿ ತೊಡಗಿದ್ದೇವೆ’ ಎಂದು ಅವರು ತಿಳಿಸಿದರು.

‘ಇಷ್ಟಾಗಿಯೂ ಬಿಸಿಎಂ ಇಲಾಖೆಯ ಹಾಸ್ಟೆಲ್‌ಗಳ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲಿಷ್ ಹೇಳಬೇಕು ಎಂದು ಹೊರಡಿಸಿದ ಆದೇಶ ಅವೈಜ್ಞಾನಿಕವಾಗಿದೆ. ಆದ್ದರಿಂದ ಆದೇಶ ವಾಪಸ್ ಪಡೆಯಬೇಕು’ ಎಂದು ಅವರು ಕೋರಿದರು.

ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ನಾಮದೇವ ಕಡಕೋಳ, ಅಧ್ಯಕ್ಷ ಜೆ. ಮಲ್ಲಪ್ಪ, ಕಾರ್ಯಾಧ್ಯಕ್ಷ ಶರಣಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ನರಸಪ್ಪ ಟಿ. ರಂಗೋಲಿ, ಉಪನ್ಯಾಸಕರಾದ ಶಾಂತಗೌಡ ಪಾಟೀಲ, ಬಲರಾಮ ಚವ್ಹಾಣ, ರಾಜೇಂದ್ರ ರಂಗದಾಳ, ಸಿದ್ದರಾಮ ಪೊಲಾರ್, ಸಂತೋಷ ಜುಕಾಲೆ, ಶ್ರೀಶೈಲಪ್ಪ ಮಾಳಿಗೆ, ವಿಜಯಲಕ್ಷ್ಮಿ ಜೀವನರೆಡ್ಡಿ, ವೀಣಾ ಆಲಗೂಡಕರ್, ಕಾಶಿಬಾಯಿ, ಮಂಗಳಾ, ಸುಜಾತಾ ಹಾಗೂ ಇತರ ಇಂಗ್ಲಿಷ್ ಉಪನ್ಯಾಸಕರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು