ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೇಡಂ: ಪೊಲೀಸ್‌ ಠಾಣೆಗೆ ನುಗ್ಗಿದ ಮಳೆನೀರು

Published 8 ಜೂನ್ 2024, 0:05 IST
Last Updated 8 ಜೂನ್ 2024, 0:05 IST
ಅಕ್ಷರ ಗಾತ್ರ

ಕಲಬುರಗಿ: ಜಿಲ್ಲೆಯಲ್ಲಿ ಮಳೆಯ ಸಿಂಚನ ಮುಂದುವರಿದಿದೆ. ಸೇಡಂನಲ್ಲಿ ಸುರಿದ ಬಿರುಸಿನ ಮಳೆಗೆ, ಪೊಲೀಸ್ ಠಾಣೆಗೆ ಮಳೆ ಮತ್ತು ಚರಂಡಿ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.

ಕಲಬುರಗಿ, ಕಾಳಗಿ, ಚಿಂಚೋಳಿ ತಾಲ್ಲೂಕಿನ ಸುಲೇಪೇಟ, ಚಿತ್ತಾಪುರ, ಅಫಜಲಪುರ ತಾಲ್ಲೂಕಿನ ಶುಕ್ರವಾರ ಮಳೆ ಸುರಿದಿದೆ.

ಕೊಪ್ಪಳ ತಾಲ್ಲೂಕಿನ ಗುಳದಳ್ಳಿ ವ್ಯಾಪ್ತಿಯಲ್ಲಿ 7.12 ಸೆಂ.ಮೀ ಮತ್ತು ತಾವರಗೇರಾದಲ್ಲಿ 5.60 ಸೆಂ.ಮೀ ಮಳೆಯಾಗಿದೆ.

ಯಾದಗಿರಿ ಜಿಲ್ಲೆಯ ವಿವಿಧೆಡೆ ಶುಕ್ರವಾರ ಜಿಟಿಜಿಟಿ ಮಳೆಯಾಗಿದೆ. ರಾಯಚೂರು ನಗರ, ಗ್ರಾಮೀಣ ಹಾಗೂ ಕವಿತಾಳದಲ್ಲಿ ಸಂಜೆ ಸಾಧಾರಣ ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT