ಬುಧವಾರ, ನವೆಂಬರ್ 25, 2020
24 °C

ಪ್ರಜಾವಾಣಿ ಕ್ವಿಜ್‌ ಕೋಟ್‌– 5

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಮ್ಮನ್ನು ನಾವು ತಿಳಿದುಕೊಳ್ಳಲು ಸಾಧ್ಯ

ಪ್ರಜಾವಾಣಿ ರೆಗ್ಯುಲರ್‌ ಬಂರುವ ದಿನಪತ್ರಿಕೆ. ನನ್ನ ಬಾಲ್ಯದಿಂದಲೂ ನಾನು ಪ್ರಜಾವಾಣಿ ಓದುತ್ತಿದ್ದೇನೆ. ಕಾಲಕ್ಕೆ ತಕ್ಕಂತೆ ಬದಲಾಗಿದೆ ಹೊರತು ‘ಕ್ವಾಲಿಟಿ’ಯಲ್ಲಿ ರಾಜೀ ಮಾಡಿಕೊಂಡಿಲ್ಲ. ನಿರಂತರವಾಗಿ ಮಕ್ಕಳು ಹಾಗೂ ಮಹಿಳೆಯರನ್ನು ಓದಲು ಹಚ್ಚುವುದೇ ದೊಡ್ಡ ಸವಾಲು. ಆದರೆ, ಪ್ರಜಾವಾಣಿ ಈ ಕೆಲವನ್ನು ನಿರಂತರ ಮಾಡಿಕೊಂಡು ಬಂದು ಯಶಸ್ವಿಯಾಗಿದೆ. ಈಗ ಓದಿಗರಿಗಾಗಿಯೇ ಕ್ವಿಜ್‌ ಇಟ್ಟಿದ್ದರಿಂದ ಸ್ಪರ್ಧಾತ್ಮಕ ಸ್ಫೂರ್ತಿ ಬೆಳೆಸುತ್ತದೆ. ಓದುಗ ಇದರಿಂದ ತಮ್ಮನ್ನು ತಾವು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.

–ಸುಚಿತ್ರಾ ಹೊನ್ನಳ್ಳಿ, ವ್ಯವಸ್ಥಾಪಕ ನಿರ್ದೇಶಕರು, ಸುಮೇಧಾ ಅಕಾಡೆಮಿ, ಕಲಬುರ್ಗಿ

*

ಶುದ್ಧ ಬರಹ, ಪರಿಶುದ್ಧ ಭಾಷೆ

ಪ್ರಜಾವಾಣಿಯ ಭಾಷೆ ಬಹಳ ಪರಿಶುದ್ಧ. ಮಕ್ಕಳಿಂದ ಎಲ್ಲರಿಗೂ ಅರ್ಥವಾಗುಂತೆ ಸುದ್ದಿ, ಲೇಖನ ನೀಡುವುದು ಬಹಳ ಮುಖ್ಯ. ಅದರಲ್ಲೂ ಮೌಲ್ಯದಲ್ಲಿ ಯಾವುದೇ ರಾಜೀ ಮಾಡಿಕೊಳ್ಳದ, ಯಾವುದೇ ಪಕ್ಷ, ತತ್ವಗಳ ಪರ– ವಿರೋಧ ಎಂಬ ಜಿಜ್ಞಾಸೆ ಇಲ್ಲದೇ ಬೆಳೆದುಬಂದ ಪತ್ರಿಕೆ. ಇಂಥ ಪತ್ರಿಕೆಯಲ್ಲಿ ಆಯೋಜಿಸಿರುವ ರಸಪ್ರಶ್ನೆ ಸ್ಪರ್ಧೆಯಲ್ಲಿ ಪಾಲ್ಗೊಂಡರೆ ಓದುಗರಿಗೆ ಹೆಚ್ಚು ಪ್ರಯೋಜನಕಾರಿ. ಜ್ಞಾನದ ಜತೆಗೆ ಬಹುಮಾನವನ್ನೂ ಪಡೆಯಬಹುದು.

–ಚಕೋರ ಮೆಹ್ತಾ, ವ್ಯವಸ್ಥಾಪಕ ಟ್ರಸ್ಟಿ, ಎಸ್‌ಆರ್‌ಎನ್‌ ಮೆಹ್ತಾ ಸ್ಕೂಲ್‌, ಕಲಬುರ್ಗಿ

*

ಎಲ್ಲಕ್ಕಿಂತ ವಿಭಿನ್ನ ಮತ್ತು ಮೌಲ್ಯಯುತ

ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಕ್ವಿಜ್‌ ಏರ್ಪಡಿಸುವುದನ್ನು ನಾವು ನೋಡಿದ್ದೇವೆ. ಅದು ಬಹಳ ವಿದ್ವತ್‌ಪೂರ್ಣವಾಗಿ, ಪಾರದರ್ಶಕವಾಗಿ ನಡೆಯುತ್ತದೆ. ಆದರೆ, ಈ ವರ್ಷ ಅದರೊಂದಿಗೇ ಓದುಗರಿಗಾಗಿಯೇ ರಸಪ್ರಶ್ನೆ ಏರ್ಪಡಿಸಿದ್ದು, ಕಾರ್‌ನಂಥ ದೊಡ್ಡ ಬಹುಮಾನ ಇಟ್ಟಿದ್ದು ಕೂಡ ಆಶಾದಾಯಕ. ಯಾವಾಗಲೂ ‘ಡಿಫರಂಟ್‌’ ಆದ ಚಿಂತನೆಗಳೊಂದಿಗೆ ಬರುವ ಈ ಪತ್ರಿಕೆ ವಿದ್ಯಾರ್ಥಿಗಳಿಗಾಗಿ, ಶಿಕ್ಷಕರಿಗಾಗಿ ಹೆಚ್ಚು ಒತ್ತುಕೊಟ್ಟು ಬೆಳೆದುಬಂದಿದೆ ಎಂಬುದು ಹರ್ಷದಾಯಕ.

–ಶಾಂತರೆಡ್ಡಿ ಪೇಠಶಿರೂರ, ವ್ಯವಸ್ಥಾಪಕ ನಿರ್ದೇಶಕ, ರೆಡ್ಡೀಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಕಿಯೊನಿಕ್ಸ್‌ ಫ್ರ್ಯಾಂಚಾಸಿ ಕೇಂದ್ರ, ಕಲಬುರ್ಗಿ

*

ಕನ್ನಡ ಭಾಷೆಯ ಪಾವಿತ್ರ್ಯತೆ ಕಾಪಾಡಿದೆ

ಇಂದು ಬರುವ ಪತ್ರಿಕೆಯ ವಿಷಯವನ್ನೇ ನಾಳಿನ ಕ್ವಿಜ್‌ ಆಗಿ ಕೇಳುವುದು ಹೆಚ್ಚು ಆಸಕ್ತಿ ಮೂಡಿಸುತ್ತದೆ. ಹೀಗಾಗಿ, ವಿದ್ಯಾರ್ಥಿಗಳು, ಗೃಹಿಣಿಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತಿಯಿಂದ ಇಡೀ ಪತ್ರಿಕೆಯನ್ನು ಓದುವ ರೂಢಿ ಮಾಡಿಕೊಳ್ಳುತ್ತಾರೆ. ಪ್ರಜಾವಾಣಿಯನ್ನು ಒಂದು ವಾರ ಓದಿದ ಯಾರೂ ಮತ್ತೆ ಅದರಿಂದ ವಿಮುಖರಾಗದ ಉದಾಹರಣೆ ಇಲ್ಲ. ಹಾಗಾಗಿ, ಇಂಥ ಕ್ವಿಜ್‌ನಲ್ಲಿ ಪಾಲ್ಗೊಂಡು ಪತ್ರಿಕೆಯನ್ನು ನಿರಂತರ ಓದುವಂಥ ರೂಢಿ ಬೆಳೆಸಿಕೊಳ್ಳಬೇಕು. ‘ಗ್ಲಾಮರ್‌’ಗಿಂತ ‘ಗ್ರಾಮರ್‌’ಗೆ ಹೆಚ್ಚು ಒತ್ತು ಕೊಡುವ ಪತ್ರಿಕೆ ಇದು.

–ಶಂಕರಗೌಡ ಹೊಸಮನಿ, ಅಪ್ಪಾ ಪಬ್ಲಿಕ್‌ ಸ್ಕೂಲ್‌, ಕಲಬುರ್ಗಿ

*

ಪತ್ರಿಕಾ ಧರ್ಮ ಪಾಲಿಸಿದೆ

ವಿಜ್ಞಾನ, ತಂತ್ರಜ್ಞಾನ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಅಗಾಧ ಬದಲಾವಣೆ ಆಗುತ್ತಿರುವ ಈ ಕಾಲದಲ್ಲಿ ದಿನ ಪತ್ರಿಕೆಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಳಿಗೆಗೆ ಅವಶ್ಯಕ. ಜನರ ನಾಡಿ ಮಿಡಿತದ ದ್ವನಿಯಾಗಿರು ಪ್ರಜಾವಾಣಿ ಹೆಚ್ಚು ಮೌಲ್ಯಯುತವಾಗಿ ಮತ್ತು ಖಾತ್ರಿ ಸುದ್ದಿ ನೀಡುವಂಥದ್ದು. ಪತ್ರಿಕಾ ಧರ್ಮ ಪಾಲನೆಯಲ್ಲಿ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಇಟ್ಟಿದೆ.

–ಶಿವಾನಂದ ಖಜೂರ್ಗಿ, ಚೇರ್ಮನ್‌, ದಿಶಾ ಪದವಿಪೂರ್ವ ವಿಜ್ಞಾನ ಕಾಲೇಜ್‌, ಕಲಬುರ್ಗಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.