ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಲಿಂಗ ಅವಧೂತರ ಜಾತ್ರೆ ನಾಳೆ

Last Updated 25 ಮಾರ್ಚ್ 2022, 3:14 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನ ದೇಗಲಮಡಿ ಗ್ರಾಮದಲ್ಲಿ ಬಸವಲಿಂಗ ಅವಧೂತರ 10ನೇ ಜಾತ್ರಾ ಮಹೋತ್ಸವ ಹಾಗೂ ನೂತನವಾಗಿ ನಿರ್ಮಿಸಿದ ಅಕ್ಕಮಹಾದೇವಿ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಮಹಾದ್ವಾರ ಉದ್ಘಾಟನೆ ಕಾರ್ಯಕ್ರಮ ಮಾ.26ರಂದು ಸಂಜೆ 5.30ಕ್ಕೆ ನಡೆಯಲಿದೆ.

ಜಾತ್ರಾ ಮಹೋತ್ಸವ ಪ್ರಯುಕ್ತ ಬಸವಲಿಂಗ ಅವಧೂತರ ಆಶ್ರಮದಲ್ಲಿ ಹೋಮ, ಪ್ರವಚನ ಪ್ರಾರಂಭವಾಗಿದ್ದು ಪ್ರತಿದಿನ ನೂರಾರು ಭಕ್ತರು ಭಾಗಿಯಾಗುತ್ತಿದ್ದಾರೆ.

ಮೆದಕ್ ಜಿಲ್ಲೆಯ ನಾರ್ಸಿಂಗಿ ಗ್ರಾಮದ ಪ್ರಸಾದ ಸ್ವಾಮಿ ಮತ್ತು ಸಾಯಿಚರಣ ಸ್ವಾಮಿ ನೇತೃತ್ವದಲ್ಲಿ ಹೋಮ ನಡೆಯುತ್ತಿದೆ. ಗ್ರಾಮದ ವೀರಭದ್ರೇಶ್ವರ ದೇವಾಲಯದಲ್ಲಿ ಪಲ್ಲಕ್ಕಿ ಮೆರವಣಿಗೆ ಮಾ.27ರಂದು ಪಲ್ಲಕ್ಕಿ ಮೆರವಣಿಗೆ ಜರುಗುವುದು.

ಮಾ.26ರಂದು ಜಾತ್ರಾ ಮಹೋತ್ಸವವನ್ನು ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದೇವರು ಉದ್ಘಾಟಿಸಲಿದ್ದಾರೆ. ರಾಜೇಶ್ವರ ಶಿವಾಚಾರ್ಯರು, ಗುರುಬಸವ ಪಟ್ಟದೇವರು ಸನ್ನಿಧಾನ ಹಾಗೂ ಬಸವಲಿಂಗ ಅವಧೂತರು ಪಾವನ ಸನ್ನಿಧಾನ ವಹಿಸುವರು. ಸಿಂಧನಕೇರಾದ ಹೊನ್ನಲಿಂಗ ಸ್ವಾಮೀಜಿ, ಚಂದ್ರಶೇಖರ ಶಿವಾಚಾರ್ಯರು, ವೀರಯ್ಯಸ್ವಾಮಿ ಧನಾಶ್ರಿ ಶಾಸಕ ಡಾ. ಅವಿನಾಶ ಜಾಧವ, ಸಂಸದ ಉಮೇಶ ಜಾಧವ, ಡಿವೈಎಸ್ಪಿ ಬಸವೇಶ್ವರ ಹೀರಾ, ಗ್ರಾ.ಪಂ. ಅಧ್ಯಕ್ಷೆ ಶೋಭಾ ಸಂಗಪ್ಪ ಮುದ್ದಾ, ವಕೀಲ ಲಕ್ಷ್ಮಣ ಆವುಂಟಿ, ಶ್ರೀಮಂತ ಕಟ್ಟಿಮನಿ ಪಾಲ್ಗೊಳ್ಳುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT