ಕಲಬುರ್ಗಿ: ನಗರದಲ್ಲಿ ಸೋಮವಾರ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಮೂವರು ಬೈಕ್ ಸವಾರರು ಸಾವನ್ನಪ್ಪಿದ್ದಾರೆ.

‘ನಗರದ ಹೊರವಲಯದ ಆಳಂದ ರಸ್ತೆಯ ಕೆರಿ ಭೋಸಗಾ ಕ್ರಾಸ್ ಬಳಿ ರಾತ್ರಿ ಬೊಲೆರೊ ವಾಹನ ಮತ್ತು ಬೈಕ್ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಆಳಂದ ತಾಲ್ಲೂಕಿನ ಕುಡಕಿ ಗ್ರಾಮದ ಮಾಳಪ್ಪ ಶನೈಸಿ (37) ಮತ್ತು ಶರಣು ಗುಂಡಗುರ್ತಿ (28) ಎಂಬುವರು ಸ್ಥಳದಲ್ಲೇ ಮೃತಪಟ್ಟರು. ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮೂವರು ಬೈಕ್ನಲ್ಲಿ ಹೊರಟಿದ್ದರು’ ಎಂದು ಸಂಚಾರ ಠಾಣೆ–1ರ ಪೊಲೀಸ್ ಇನ್ಸ್ಪೆಕ್ಟರ್ ಶಾಂತಿನಾಥ ತಿಳಿಸಿದ್ದಾರೆ.

ಯುವಕ ಸಾವು: ತಾಲ್ಲೂಕಿನ ಫರಹತಾಬಾದ್ ಬಳಿ ಸಾರಿಗೆ ಸಂಸ್ಥೆ ಬಸ್ ಮತ್ತು ಮಧ್ಯೆ ನಡೆದ ಅಪಘಾತದಲ್ಲಿ ಕವಲಗಾ (ಕೆ) ಗ್ರಾಮದ ಮಲ್ಲಿಕಾರ್ಜುನ ಅಖಂಡಪ್ಪ ದೊಡ್ಡಗೌಡರ (18) ಎಂಬುವರು ಸಾವನ್ನಪ್ಪಿದ್ದಾರೆ.

ಅಜ್ಜಿಯ ಊರು ಸರಡಗಿ ಗ್ರಾಮಕ್ಕೆ ಮಲ್ಲಿಕಾರ್ಜುನ ಬೈಕ್ನಲ್ಲಿ ಹೊರಟಿದ್ದ ವೇಳೆ ಎದುರಿಗೆ ಬೆಂಗಳೂರಿನಿಂದ ಬಂದ ಸೇಡಂ ಡಿಪೊದ ಬಸ್ ಡಿಕ್ಕಿ ಹೊಡೆಯಿತು. ಇದರಿಂದ ತೀವ್ರ ರಕ್ತಸ್ರಾವವಾಗಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಸಂಚಾರ ಠಾಣೆ–2ರ ಪೊಲೀಸ್ ಇನ್ಸ್ಪೆಕ್ಟರ್ ರಮೇಶ ಕಾಂಬಳೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.