ಮಂಗಳವಾರ, ಅಕ್ಟೋಬರ್ 20, 2020
25 °C

ಅಪಘಾತ: ಪತ್ನಿ ಸಾವು, ಪತಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಮಲಾಪುರ: ಕಮಲಾಪುರದ ಬಳಿ ಭಾನುವಾರ ಟಂಟಂಗೆ ಕ್ರೂಸರ್ ಡಿಕ್ಕಿ ಹೊಡೆದ ಮಹಿಳೆಯೊಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದು, ಅವರ ಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ತಾಲ್ಲೂಕಿನ ಹೊಳಕುಂದಾ ಗ್ರಾಮದ ನಾಗಮ್ಮ ಸಾಯಬಣ್ಣ ಪ್ರಸನ್ (50) ಮೃತರು. ಪತಿ ಸಾಯಬಣ್ಣ ಬಂಡಪ್ಪ ಪ್ರಸನ್ ಅವರ ಕಾಲಿನ ಮೂಳೆ ಮುರಿದಿದೆ.

ಟಂಟಂ ಚಾಲಕ ಸಾಯಬಣ್ಣ ಪತ್ನಿಯನ್ನು ಕರೆದುಕೊಂಡು ಕಮಲಾಪುರ ಸಂತೆಗೆ ತೆರಳುತ್ತಿದ್ದರು. ಹುಮನಾಬಾದ್‌ನಿಂದ ಬರುತ್ತಿದ್ದ ಕ್ರೂಸರ್ ಟಂಟಂಗೆ ಡಿಕ್ಕಿಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟಂಟಂ ಹೆದ್ದಾರಿ ಬದಿಯ ಹೊಲದಲ್ಲಿ ಬಿತ್ತು. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು