ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾನಿಟರಿ ಪ್ಯಾಡ್ ತಯಾರಿಕಾ ಘಟಕ ಆರಂಭ

Last Updated 14 ನವೆಂಬರ್ 2020, 4:23 IST
ಅಕ್ಷರ ಗಾತ್ರ

ಕಾಳಗಿ: ಪಟ್ಟಣದ ವರ್ಷಾ ಗಣಕಯಂತ್ರ ತರಬೇತಿ ಕೇಂದ್ರವು ಈಚೆಗೆ ಸ್ತ್ರೀ ಸ್ವಾಭಿಮಾನ ಸ್ಯಾನಿಟರಿ ಪ್ಯಾಡ್ ತಯಾರಿಕಾ ಘಟಕ ಆರಂಭಿಸಿತು.

ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ತೆಂಗಳಿ ದೀಪ ಬೆಳಗಿಸಿ ಚಾಲನೆ ನೀಡಿದರು.

ಬಳಿಕ ಮಾತನಾಡಿ ‘ನನಗೆ ದೊರೆತ ಅಧಿಕಾರವನ್ನು ಮಹಿಳೆಯರ ಅಭಿವೃದ್ಧಿಗಾಗಿ ಸಂಪೂರ್ಣ ಧಾರೆ ಎರೆಯುತ್ತಿದ್ದೇನೆ. ಬಿಡುವಿಲ್ಲದೆ ರಾಜ್ಯದೆ ಲ್ಲೆಡೆ ಪ್ರವಾಸ ಕೈಗೊಂಡು ಮಹಿಳಾ ಸಂಘ-ಸಂಸ್ಥೆಗಳನ್ನು ಭೇಟಿ ಮಾಡಿ ಆತ್ಮಬಲ ಹೆಚ್ಚಿಸುತ್ತಿದ್ದೇನೆ’ ಎಂದರು.

‘ಗುಡಿ ಕೈಗಾರಿಕೆ, ಬೀದಿ ವ್ಯಾಪಾರಿ ಮಹಿಳೆಯರಿಗೆ ಇರುವ ಸೌಲಭ್ಯಗಳನ್ನು ಮುಕ್ತವಾಗಿ ಸಿಗುವ ರೀತಿಯಲ್ಲಿ ಶ್ರಮಿಸುತ್ತಿದ್ದೇನೆ. ಅದರಲ್ಲೂ ನಮ್ಮ ಭಾಗದ ಮಹಿಳೆಯರು ಹೆಚ್ಚಿನ ಲಾಭ ಪಡೆದು ಸ್ವಾವಲಂಬಿ ಬದುಕು ನಡೆಸಬೇಕು’ ಎಂದು ಕರೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ವಿಜಯಲಕ್ಷ್ಮಿ, ನಿವೃತ್ತ ಮುಖ್ಯಶಿಕ್ಷಕ ಗುಡುಸಾಬ ಕಮಲಾಪುರ ಮಾತನಾಡಿದರು.

ತಹಶೀಲ್ದಾರ್ ನೀಲಪ್ರಭಾ ಬಬಲಾದ, ಗ್ರೇಡ್-2 ತಹಶೀಲ್ದಾರ್ ಶಾಂತಗೌಡ ಬಿರಾದಾರ, ತಾಲ್ಲೂಕು ಪಂಚಾಯಿತಿ ಸದಸ್ಯೆ ರತ್ನಮ್ಮ ಗುತ್ತೇದಾರ, ಮಾಜಿ ಸದಸ್ಯ ಚಂದ್ರಕಾಂತ ಜಾಧವ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಪ್ರಶಾಂತ ಕದಂ, ಉದ್ಯಮಿ ಸತ್ಯನಾರಾಯಣ ವನಮಾಲಿ, ಮಂಜುನಾಥ ಡಂಕಿ, ವೀರೇಶ ಪಾಟೀಲ, ತಿಪ್ಪಣ್ಣ ಸಿರಿಮನಿ ವೇದಿಕೆಯಲ್ಲಿದ್ದರು. ಕೇಂದ್ರದ ಮುಖ್ಯಸ್ಥೆ ಮಹಾನಂದಾ ಸಿರಿಮನಿ ಸ್ವಾಗತಿಸಿದರೆ, ಸೂರ್ಯಕಾಂತ ಕಟ್ಟಿಮನಿ ನಿರೂಪಿಸಿದರು.

ಭೇಟಿ: ಬಳಿಕ ನಿಗಮ ಅಧ್ಯಕ್ಷರು ಪ್ರವಾಸಿ ಮಂದಿರದಲ್ಲಿ ಸ್ತ್ರೀಶಕ್ತಿ ಸಂಘಗಳ ಮಹಿಳೆಯರನ್ನು ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಆಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT