ಮಂಗಳವಾರ, ಫೆಬ್ರವರಿ 18, 2020
18 °C
ಸೊನ್ನ ವಿರಕ್ತ ಮಠದ ಪೀಠಾಧಿಪತಿ ಡಾ.ಶಿವಾನಂದ ಸ್ವಾಮೀಜಿ ಅಭಿಮತ

‘ಮಾನಸಿಕ ಖಿನ್ನತೆಗೆ ಸತ್ಸಂಗವೇ ಔಷಧಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜೇವರ್ಗಿ: ‘ಹನ್ನೆರಡನೇ ಶತಮಾನದ ಬಸವಾದಿ ಶರಣರ ಚಿಂತನೆಗಳನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು’ ಎಂದು ಸೊನ್ನ ವಿರಕ್ತ ಮಠದ ಪೀಠಾಧಿಪತಿ ಡಾ.ಶಿವಾನಂದ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಕಲ್ಲಹಂಗರಗಾ ಗ್ರಾಮದಲ್ಲಿ ಮಂಗಳವಾರ ಮಹಾಲಕ್ಷ್ಮಿ ದೇವಸ್ಥಾನ ಉದ್ಘಾಟನೆ, ಮೂರ್ತಿ ಪ್ರಾಣಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ನಿಮಿತ್ತ ಅವರು ‘ವಚನ ದರ್ಶನ’ ಪ್ರವಚನ ನೀಡಿದರು.

‘ಮಾನಸಿಕ ಖಿನ್ನತೆ ದೂರವಾಗಲು ಸತ್ಸಂಗದ ಔಷಧಿ ಪಡೆದುಕೊಳ್ಳಬೇಕು. ಬಸವಾದಿ ಶರಣರು ಬದುಕಿನುದ್ದಕ್ಕೂ ಸತ್ಯಶುದ್ಧ ಕಾಯಕ ಮತ್ತು ದಾಸೋಹ ಸೂತ್ರಗಳನ್ನು ಅಳವಡಿಕೊಂಡಿದ್ದರು. ಕಲ್ಲಹಂಗರಗಾ ಗ್ರಾಮಸ್ಥರು ಗ್ರಾಮ ದೇವತೆ ಮಹಾಲಕ್ಷ್ಮಿ ದೇವಸ್ಥಾನ ಉದ್ಘಾಟನೆ ನಿಮಿತ್ತ ವಚನ ದರ್ಶನ ಪ್ರವಚನ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ’ ಎಂದರು.

ಧಾರ್ಮಿಕ ಸಭೆಯನ್ನು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ ಉದ್ಘಾಟಿಸಿ, ‘ಕಲ್ಲಹಂಗರಗಾ ಸಾಮರಸ್ಯದ ಬದುಕಿಗೆ ಹೆಸರುವಾಸಿಯಾಗಿದೆ. ಬದುಕಿನಲ್ಲಿ ಧರ್ಮಾಚರಣೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಸದೃಢ ಸಮಾಜ ನಿರ್ಮಿಸಲು ಪ್ರತಿಯೊಬ್ಬರು ಕಂಕಣಬದ್ಧರಾಗಬೇಕು’ ಎಂದು ಹೇಳಿದರು.

ವೇದಿಕೆಯಲ್ಲಿ ಮುಖಂಡರಾದ ಎಸ್.ಎಸ್.ಸಲಗರ್, ಈರಣ್ಣ ಧನ್ನೂರ ಸೊನ್ನ, ನಿಂಗಣ್ಣಗೌಡ ಹಿರೇಗೌಡ ಸೊನ್ನ, ಭಗವಂತರಾಯಗೌಡ ಪಾಟೀಲ, ಶರಣು ಹೊಸಮನಿ, ಶರಣಗೌಡ ಪಾಟೀಲ ಮುತ್ತಕೋಡ, ದೇವಿಂದ್ರ ಹಂಗರಗಿ ಮುತ್ತಕೋಡ, ಶ್ರೀಶೈಲ ಕುಂಬಾರ, ರಾಜಶೇಖರ ಮುತ್ತಕೋಡ ಇದ್ದರು.

ಗಿರೆಪ್ಪಗೌಡ ಪಾಟೀಲ, ವಿಜಯಕುಮಾರ ಪಾಟೀಲ, ನಾಗಪ್ಪಗೌಡ ಪೊಲೀಸ್ ಪಾಟೀಲ, ಗುಂಡು ಸಾಹು ಸರ್ದಾರ, ನಿಂಗಣ್ಣ ಕುಂಬಾರ, ಅಶೋಕ ಮಾಲಿಪಾಟೀಲ, ತಮ್ಮಣ್ಣ ಬಾಗೇವಾಡಿ, ಸೋಮು ಕಲಬುರ್ಗಿ, ಗುಂಡು ಶಿರಸಗಿ, ಅಯ್ಯಣ್ಣ ಸಿಂದಗಿ, ಮಲ್ಲಿನಾಥ ಸರ್ದಾರ, ಯಲ್ಲಾಲಿಂಗ ಸಾಲಿ, ಬಾಪುಗೌಡ ಪಾಟೀಲ, ದೇವಪ್ಪ ಸಂತಿ ಹಾಗೂ ಕಲ್ಲಹಂಗರಗಾ, ಸೊನ್ನ, ಕೂಟನೂರ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.

ತಮ್ಮಣ್ಣ ಬಾಗೇವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಯಲ್ಲಾಲಿಂಗ ಸಾಲಿ ನಿರೂಪಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು