ಕಲಬುರಗಿ: ವಿಜ್ಞಾನ ಮಾದರಿಗಳ ಕುತೂಹಲದ ಖನಿಯಾದ ಜಿಲ್ಲಾ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡುವ ವೀಕ್ಷಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಳೆದ ನಾಲ್ಕು ತಿಂಗಳ ಅಂಕಿ–ಅಂಶಗಳು ಇದನ್ನು ಪುಷ್ಟೀಕರಿಸುತ್ತಿವೆ.

2025ರ ಏಪ್ರಿಲ್ನಿಂದ ಆಗಸ್ಟ್ 18ರ ತನಕ 53,793 ಸಂದರ್ಶಕರು ಭೇಟಿ ನೀಡಿ ವಿಜ್ಞಾನದ ಮಾದರಿಗಳನ್ನು ಕಣ್ತುಂಬಿಕೊಂಡಿದ್ದಾರೆ. ಈ ಅವಧಿಯಲ್ಲಿ ಒಟ್ಟು ₹10 ಲಕ್ಷ ವರಮಾನವನ್ನು ವಿಜ್ಞಾನ ಕೇಂದ್ರವು ಗಳಿಸಿದೆ.

2024–25ನೇ ಸಾಲಿನ ಏಪ್ರಿಲ್ನಲ್ಲಿ 7,663 ಸಂದರ್ಶಕರು ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿದ್ದರು. ಬಿರುಸಿನ ಬಿಸಿಲಿನ ಮೇನಲ್ಲಿ 9,635 ವೀಕ್ಷಕರು ವಿಜ್ಞಾನ ಮಾದರಿಗಳ ವೀಕ್ಷಣೆಗೆ ಬಂದಿದ್ದರು. ಜೂನ್ನಲ್ಲಿ 14,903 ಸಂದರ್ಶಕರು ಭೇಟಿ ಕೊಟ್ಟು ವಿಜ್ಞಾನದ ಅರಿವು ವಿಸ್ತರಿಸಿಕೊಂಡಿದ್ದರು. ಜುಲೈನಲ್ಲಿ 17,013 ವೀಕ್ಷಕರು ಬಂದು ವಿಜ್ಞಾನದ ಮಾದರಿಗಳನ್ನು ಕಣ್ತುಂಬಿಕೊಂಡಿದ್ದರು. ಆಗಸ್ಟ್ ತಿಂಗಳ 18ರ ತನಕ 4,579 ಮಂದಿ ಭೇಟಿ ಕೊಟ್ಟಿದ್ದಾರೆ.

ಕಳೆದ 2023–24ರಲ್ಲಿ ಏಪ್ರಿಲ್ನಿಂದ ಆಗಸ್ಟ್ ಅಂತ್ಯದ ತನಕ 51,550 ವೀಕ್ಷಕರು ಜಿಲ್ಲಾ ವಿಜ್ಞಾನ ಕೇಂದ್ರಕ್ಕೆ ಭೇಟಿ ಕೊಟ್ಟಿದ್ದರು. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷದ ಆಗಸ್ಟ್ 18ರ ತನಕ 2,200ಕ್ಕೂ ಹೆಚ್ಚಿನ ಮಂದಿ ಭೇಟಿ ಕೊಟ್ಟಿದ್ದಾರೆ. ಇದೇ ಸರಾಸರಿಯಲ್ಲಿ ಲೆಕ್ಕಹಾಕಿದರೂ ಆಗಸ್ಟ್ ತಿಂಗಳ ಮಿಕ್ಕುಳಿದ 13 ದಿನಗಳಲ್ಲಿ ಇನ್ನೂ 3,300ಕ್ಕೂ ಅಧಿಕ ವೀಕ್ಷಕರು ಭೇಟಿ ನೀಡುವ ನಿರೀಕ್ಷೆಗಳಿವೆ ಎನ್ನುತ್ತಾರೆ ವಿಜ್ಞಾನ ಕೇಂದ್ರದ ಅಧಿಕಾರಿಗಳು.

ಹ್ಯೂಮನ್ ಗ್ಯಾಲರಿ ಬಲ:

ಜಿಲ್ಲಾ ವಿಜ್ಞಾನ ಕೇಂದ್ರದ ಹಲವು ವಿಭಾಗಗಳಿಗೆ ಹೊಸ ಸ್ಪರ್ಶ ನೀಡಲಾಗಿದ್ದು, ಅದರಿಂದ ವೀಕ್ಷಕರ ಆಕರ್ಷಣೆಗೆ ಬಲ ತುಂಬಿದೆ. 2025ರ ಮಾರ್ಚ್ 21ರಂದು ಉದ್ಘಾಟನೆಯಾದ ‘ಮಾನವನ ಅದ್ಭುತ ದೇಹ’ ಗ್ಯಾಲರಿ ವೀಕ್ಷಕರ ನೆಚ್ಚಿನ ತಾಣವಾಗಿ ಬದಲಾಗಿದೆ. 1,000 ಚದರ ಅಡಿ ವಿಸ್ತೀರ್ಣದಲ್ಲಿ ₹ 60 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ರೂಪುಗೊಂಡಿರುವ ಈ ಗ್ಯಾಲರಿ ವೀಕ್ಷಕರಿಗೆ ಮಾನವ ಅಂಗರಚನಾಶಾಸ್ತ್ರ, ಶರೀರಶಾಸ್ತ್ರದ ಅದ್ಭುತಗಳ ಬಗೆಗೆ ಸಂವಾದಾತ್ಮಕವಾಗಿ ಮಾಹಿತಿ ನೀಡುತ್ತಿದೆ. ಇದು ಸಹಜವಾಗಿಯೇ ವೀಕ್ಷಕರನ್ನು ಬರಸೆಳೆಯುತ್ತಿದೆ.

ಮತ್ತೊಂದೆಡೆ ವಿಜ್ಞಾನ ಕೇಂದ್ರ ಆವರಣದ ಡೈನೋಸಾರ್ ಪಾರ್ಕ್ಗೂ ಇತ್ತೀಚೆಗೆ ಶಕ್ತಿ ತುಂಬಲಾಗಿದೆ. ಈ ಹಿಂದೆ ಮಳೆ ನೀರು ಹೊಕ್ಕು ಕೆಟ್ಟಿದ್ದ ಡೈನೋಸಾರ್ ಧ್ವನಿ ಹೊಮ್ಮಿಸುತ್ತಿದ್ದ ಧ್ವನಿ ವ್ಯವಸ್ಥೆ, ಅದರ ಚಲನಶೀಲತಾ ಸಮಸ್ಯೆ ಸರಿಪಡಿಸಲಾಗಿದೆ. ಹಲವು ಡೈನೋಸಾರ್ ಧ್ವನಿ, ಕದಲುವಿಕೆಗೆ ವೀಕ್ಷಕರು ಮನಸೋತ್ತಿದ್ದಾರೆ ಎಂದು ವಿಜ್ಞಾನ ಕೇಂದ್ರದ ಸಿಬ್ಬಂದಿ ಹೇಳುತ್ತಾರೆ.

ವಿಜ್ಞಾನವನ್ನೇ ಉಸಿರಾಡುವ ಕೇಂದ್ರ:

ಮಕ್ಕಳು, ಯುವಜನರಲ್ಲಿ ವಿಜ್ಞಾನ ಆಸಕ್ತಿ ಮೂಡಿಸಲು 1984ರಲ್ಲಿ ಕಲಬುರಗಿಯಲ್ಲಿ ಸ್ಥಾಪಿಸಲಾದ ಈ ವಿಜ್ಞಾನ ಕೇಂದ್ರವು ತರಹೇವಾರಿ ವಿಜ್ಞಾನ ಮಾದರಿಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡು ಉಸಿರಾಡುತ್ತಿದೆ. ಕಾಲಕ್ಕೆ ತಕ್ಕಂತೆ ಆಗಾಗ ತನ್ನನ್ನು ತಾನು ನವೀಕರಿಸಿಕೊಳ್ಳುತ್ತ, ಬರುವ ವೀಕ್ಷಕರಿಗೆ ವಿಜ್ಞಾನವನ್ನು ಸರಳವಾಗಿ ಕಲಿಸಲು ಸೇತುವೆಯಾಗುತ್ತಿದೆ. ಕೇಂದ್ರ ಸರ್ಕಾರದ ವಿಜ್ಞಾನ ಮ್ಯೂಸಿಯಂಗಳ ರಾಷ್ಟ್ರೀಯ ಪರಿಷತ್ತಿನಡಿ(ಎನ್ಸಿಎಸ್ಎಂ) ಕಾರ್ಯ ನಿರ್ವಹಿಸುವ ಕರ್ನಾಟಕ ರಾಜ್ಯದ ಏಕೈಕ ಜಿಲ್ಲಾ ವಿಜ್ಞಾನ ಕೇಂದ್ರ ಇದಾಗಿದೆ.

ಹೊಸ ಹ್ಯೂಮನ್ ಗ್ಯಾಲರಿ ನಿರ್ಮಾಣದ ಬಳಿಕ ವೀಕ್ಷಕರ ಸಂಖ್ಯೆ ಗಣನೀಯವಾಗಿ ವೃದ್ಧಿಸಿದೆ. ವಿಶೇಷವಾಗಿ ಶನಿವಾರ ಭಾನುವಾರಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಸಾರ್ವಜನಿಕರು ಬರುತ್ತಿದ್ದಾರೆ
ಕೆ.ಎಂ.ಸುನೀಲ್ ಜಿಲ್ಲಾ ವಿಜ್ಞಾನ ಕೇಂದ್ರದ ವಿಜ್ಞಾನ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.