ಗುರುವಾರ , ಮೇ 13, 2021
38 °C

ಡಿಕೆಶಿ ಹಡಗಿಗೆ ರಂಧ್ರ ಕೊರೆಯುತ್ತಿರುವ ಸಿದ್ದರಾಮಯ್ಯ: ಸಚಿವ ಎಸ್‌.ಟಿ. ಸೋಮಶೇಖರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ‘ಕಾಂಗ್ರೆಸ್‌ ಈಗ ಮುಳುಗುತ್ತಿರುವ ಹಡಗು. ಸಿದ್ದರಾಮಯ್ಯ ಅವರು ಇದಕ್ಕೆ ಇನ್ನೆರಡು ರಂಧ್ರ ಮಾಡಿದರೆ ಸಾಕು ಅದು ಪೂರ್ತಿ ಮುಳುಗುತ್ತದೆ. ಇಂಥ ಮುಳುಗುವ ಹಡಗಿಗೆ ಡಿ.ಕೆ. ಶಿವಕುಮಾರ್‌ ಅವರನ್ನು ಡ್ರೈವರ್‌ ಮಾಡಿದ್ದಾರೆ’ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಮೂದಲಿಸಿದರು.

‘ನಾಯಕರಾದ ಸಿದ್ದರಾಮಯ್ಯ ಒಂದು ಕಡೆಯಿಂದ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ. ಪರಮೇಶ್ವರ, ರಮೇಶಕುಮಾರ್ ಇನ್ನೊಂದು ಕಡೆಯಿಂದ ರಂಧ್ರ ಮಾಡುತ್ತಿದ್ದಾರೆ. ಈ ಹಡಗು ಪೂರ್ತಿ ಮುಳುಗಿದ ಮೇಲೆ ಸಿದ್ದರಾಮಯ್ಯ ಅವರು ಅತ್ಯಂತ ಖುಷಿ ಪಡುವ ವ್ಯಕ್ತಿ’ ಎಂದೂ ಅವರು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಲೇವಡಿ ಮಾಡಿದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಉಚ್ಚಾಟನೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಪಕ್ಷ ಅಥವಾ ಸರ್ಕಾರದಲ್ಲಿ ನಮ್ಮ ಸಹೋದ್ಯೊಗಿ ಆದವರು ಅದರ ಚೌಕಟ್ಟಿನೊಳಗೇ ಮಾತನಾಡಬೇಕು. ಚೌಕಟ್ಟು ಮೀರಿದವರ ಮೇಲೆ ಕ್ರಮ ಕೈಗೊಳ್ಳುವುದಕ್ಕೆ ಪಕ್ಷದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ರಾಜಕೀಯ ಕಾರ್ಯದರ್ಶಿಗಳು ಇದ್ದಾರೆ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು