ಕಲಬುರಗಿ: ‘ಅಂತರರಾಷ್ಟ್ರೀಯ ಮಹಿಳಾ ಆರೋಗ್ಯ ಸಂರಕ್ಷಣಾ ದಿನದ ಪ್ರಯುಕ್ತ ನಗರದ ಕೆಕೆಸಿಸಿಐ ಸಭಾಂಗಣದಲ್ಲಿ ಮೇ 28ರಂದು ಬೆಳಿಗ್ಗೆ 10 ಗಂಟೆಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ’ ಎಂದು ಕೆಕೆಸಿಸಿಐ ಅಧ್ಯಕ್ಷ ಶರಣು ಪಪ್ಪಾ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ) ಹಾಗೂ ಮಾನವೀಯ ಕಲ್ಯಾಣ ಟ್ರಸ್ಟ್ ಅರುಜೀವ ಹೊಲಿಸ್ಟಿಕ್ ಹೀಲಿಂಗ್ ಸೆಂಟರ್ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮವನ್ನು ಉತ್ತರ ಮತಕ್ಷೇತ್ರದ ಶಾಸಕಿ ಖನೀಜ್ ಫಾತೀಮಾ ಉದ್ಘಾಟಿಸುವರು’ ಎಂದರು.

‘ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ನಗರ ಪೊಲೀಸ್ ಉಪಆಯುಕ್ತೆ ಕನಿಕಾ ಸಿಕ್ರಿವಾಲ್, ಶರಣಬಸವ ವಿಶ್ವವಿದ್ಯಾಲಯದ ಡೀನ್ ಲಕ್ಷ್ಮಿ ಮಾಕಾ, ಸಹಾಯಕ ಔಷಧ ನಿಯಂತ್ರಕಿ ಕರುಣಾದೇವಿ ಜೀವಣಗಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು’ ಎಂದು ಮಾಹಿತಿ ನೀಡಿದರು.

‘ನೈಸರ್ಗಿಕ ಚಿಕಿತ್ಸೆಗಳಾದ ಆಯುರ್ವೇದ, ಯೋಗ, ಧ್ಯಾನ, ಫೀಜಿಯೋಥೇರಪಿಗಳ ಮಹತ್ವದ ಕುರಿತು ಡಾ. ರೇಖಾ ಮತ್ತು ಡಾ. ಶಾಲಿನ್ ವಿಶೇಷ ಉಪನ್ಯಾಸ ನೀಡುವರು. ನಗರದ ಮಹೇಶ್ವರಿ ಮಹಿಳಾ ಸಂಘ, ಸಂಗೀನಿ ಜೈನ್ ಸಮೂಹ, ರೋಟರಿ ಇನ್ನರ್ವೀಲ್ ಕ್ಲಬ್, ಸ್ಪಂದನಾ ಮಹಿಳಾ ಸಮೂಹ, ಮಹಿಳಾ ಏಕತಾ ಮಂಚ್, ರಾಜಸ್ಥಾನಿ ಮಹಿಳಾ ಮಂಡಳಿಯ ಸದಸ್ಯರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಆರೋಗ್ಯ ಮತ್ತು ನೈಮರ್ಲ್ಯ ಉಪಸಮಿತಿ ಚೇರ್ಮನ್ ಸೈಯದ್ ಮೌಜಮ್ ಅಲಿ, ಡಾ. ರೇಖಾ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.