ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ಮಹಾನಗರ ಪಾಲಿಕೆಗಳ ನಿವೃತ್ತ ನೌಕರರ ಒಕ್ಕೂಟ ರಚನೆ

Published 3 ಸೆಪ್ಟೆಂಬರ್ 2023, 14:02 IST
Last Updated 3 ಸೆಪ್ಟೆಂಬರ್ 2023, 14:02 IST
ಅಕ್ಷರ ಗಾತ್ರ

ಕಲಬುರಗಿ: ಮಹಾನಗರ ಪಾಲಿಕೆಗಳ ನಿವೃತ್ತ ನೌಕರರ ಸಂಘಗಳ ಪದಾಧಿಕಾರಿಗಳ ನೇತೃತ್ವದಲ್ಲಿ ರಾಜ್ಯ ಮಹಾನಗರ ಪಾಲಿಕೆಗಳ ನಿವೃತ್ತ ನೌಕರರ ಸಂಘಗಳ ಒಕ್ಕೂಟವನ್ನು ಭಾನುವಾರ ರಚಿಸಲಾಯಿತು.

ಒಕ್ಕೂಟದ ಅಧ್ಯಕ್ಷರಾಗಿ ವೀರಭದ್ರ ಸಿಂಪಿ (ಕಲಬುರಗಿ), ಉಪಾಧ್ಯಕ್ಷರಾಗಿ ಎಚ್‌.ಆರ್‌.ದೇವಿಂದ್ರಪ್ಪ (ಶಿವಮೊಗ್ಗ), ವೈ.ಜಿ. ಸಕ್ರಿ (ವಿಜಯಪುರ) ಮತ್ತು ಜಗನ್ನಾಥ ಶೆಟ್ಟಿ (ಮಂಗಳೂರು), ಕಾರ್ಯದರ್ಶಿಯಾಗಿ ಅಕ್ರಮ್ ಅಹ್ಮದ್ (ವಿಜಯಪುರ), ಖಜಾಂಚಿಯಾಗಿ ಶ್ರೀಕಾಂತ್ ಶೆಟ್ಟಿ (ಕಲಬುರಗಿ), ಸಂಘಟನಾ ಕಾರ್ಯದರ್ಶಿಯಾಗಿ ಶೇಖರ ಪೂಜಾರಿ (ಬೆಳಗಾವಿ), ಸೈಯದ್ ಫೀರ್ (ದಾವಣಗೆರೆ) ಹಾಗೂ ಜೆ.ರಾಮಾಂಜನೇಯಲು (ಬಳ್ಳಾರಿ) ಅವರು ಆಯ್ಕೆಯಾಗಿದ್ದಾರೆ.

‘ಬಿಬಿಎಂಪಿ ಹೊರತುಪಡಿಸಿ ರಾಜ್ಯದಲ್ಲಿ 10 ಮಹಾನಗರ ಪಾಲಿಕೆಗಳಿವೆ. ಮೈಸೂರಿನಲ್ಲಿ ನಿವೃತ್ತ ನೌಕರರ ಸಂಘಟನೆ ಇಲ್ಲ. ತುಮಕೂರು ಮತ್ತು ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಗಳ ಪದಾಧಿಕಾರಿಗಳು ಕಾರಣಾಂತರಗಳಿಂದ ಪಾಲ್ಗೊಂಡಿಲ್ಲ. ಮುಂದಿನ ದಿನಗಳಲ್ಲಿ ಭಾಗವಹಿಸುವರು. 7ನೇ ವೇತನ ಆಯೋಗದ ಶಿಫಾರಸಿನಂತೆ ನಿವೃತ್ತ ನೌಕರರಿಗೆ ಶೇ 17ರಷ್ಟು ಮಧ್ಯಂತರ ಪರಿಹಾರ ವೇತನ ಜಮಾ, ಆರೋಗ್ಯ ಸಂಜೀವಿನಿ ಯೋಜನೆ ಸೇರಿ ಇತರೆ ಬೇಡಿಕೆಗಳ ಈಡೇರಿಕೆಗೆ ಹೋರಾಟ ಮಾಡಲಾಗುವುದು’ ಎಂದು ನೂತನ ಅಧ್ಯಕ್ಷ ಸಿಂಪಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT