ಕಲಬುರಗಿ: ನಗರದಾದ್ಯಂತ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ನಾಗರಿಕರು ಜೀವ ಭಯದಲ್ಲಿ ರಸ್ತೆಗೆ ಇಳಿಯುವಂತಾಗಿದೆ. ಪಾಲಿಕೆಯ ಪ್ರತಿ ಸಭೆಯಲ್ಲೂ ನಾಯಿಗಳ ದಾಳಿ ಪ್ರಸ್ತಾಪವಾದರೂ ಪರಿಹಾರ ಮಾತ್ರ ಮರೀಚಿಕೆಯಾಗಿದೆ.

ಬಾಪುನಗರ, ಮಾಂಗರವಾಡಿ, ರಾಮಮೊಹಲ್ಲಾ ಬಡಾವಣೆ, ಬಸವೇಶ್ವರ ಕಾಲೊನಿ, ಗುಬ್ಬಿ ಕಾಲೊನಿ, ಆದರ್ಶನಗರ, ಕುವೆಂಪು ನಗರ, ಹಳೆಯ ಜೇವರ್ಗಿ ರಸ್ತೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ನಾಯಿಗಳ ಹಾವಳಿ ಅಧಿಕವಾಗಿದೆ. ರಸ್ತೆ ಬದಿಯಲ್ಲಿ ಆಡುವ ಮಕ್ಕಳಿಗೆ, ಮನೆ– ಮನೆಗೆ ಪೇಪರ್ ಹಾಕುವವರಿಗೆ, ಬೈಕ್ ಸವಾರರಿಗೆ, ಶಾಲೆಯಿಂದ ಮನೆಗೆ ಹೊರಟ ಮಕ್ಕಳಿಗೆ ನಾಯಿಗಳ ಹಿಂಡು ದಾಳಿ ಮಾಡಿ ಕಚ್ಚಿ ಗಾಯಗೊಳಿಸಿದ ಪ್ರಸಂಗಗಳು ಸಾಕಷ್ಟಿವೆ.

ಪ್ರತಿ ವರ್ಷ ಬೀದಿ ನಾಯಿ ಕಡಿತದಿಂದ ನೂರಾರು ಪ್ರಕರಣಗಳು ದಾಖಲಾಗುತ್ತಿವೆ. ಇದನ್ನು ನಿಯಂತ್ರಣಕ್ಕೆ ತಂದು ಪರಿಹಾರ ಕೊಡಬೇಕಾದ ಪಾಲಿಕೆ ಅಧಿಕಾರಿಗಳು ಜಾಣ ಮೌನವಹಿಸಿದ್ದಾರೆ. ಹಾದಿ ಬೀದಿಯಲ್ಲಿ ನಾಯಿಗಳ ಕಡಿತಕ್ಕೆ ತುತ್ತಾದ ಮಕ್ಕಳು, ವೃದ್ಧರು ಯಾತನೆ ಅನುಭವಿಸುತ್ತಿದ್ದಾರೆ. ನಾಯಿಗಳ ಸಂಖ್ಯೆ ತಗ್ಗಿಸುವ ಪ್ರಾಣಿ ಜನನ ನಿಯಂತ್ರಣ (ಎಬಿಸಿ) ಕಾರ್ಯಾಚರಣೆ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ.

ಪಾಲಿಕೆ ಸ್ಥಾಯಿ ಸಮಿತಿ ಸದಸ್ಯೆ ಇರ್ಫಾನಾ ಪರ್ವೀನ್ ಅವರು ನಾಯಿ ಕಡಿತದಿಂದ ಮಕ್ಕಳು, ವೃದ್ಧರಿಗೆ ರಕ್ಷಣೆ ಕೊಡುವಂತೆ ಈಚೆಗೆ ನಡೆದ ಪಾಲಿಕೆ ಸಭೆಯಲ್ಲಿ ಮೊರೆ ಇಟ್ಟು ಕಣ್ಣೀರು ಸುರಿಸಿದರು. ‘ನಾಯಿಗಳ ಕಾಟಕ್ಕೆ ಬೇಸತ್ತ ಜನರು ಮಧ್ಯರಾತ್ರಿ ಪಾಲಿಕೆ ಸದಸ್ಯರಿಗೆ ಫೋನ್ ಮಾಡಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ನಾವು, ನೀವು ಸೇರಿ ನಾಯಿ ಹಿಡಿಯೋಣ ಬನ್ನಿ’ ಎಂದು ಪಾಲಿಕೆ ವಿಪಕ್ಷದ ನಾಯಕ ಸಚಿನ್ ಹೊನ್ನಾ ಆಕ್ರೋಶ ವ್ಯಕ್ತಪಡಿಸಿದ್ದರೂ ಬೀದಿ ನಾಯಿಗಳ ಉಪಟಳ ತಪ್ಪುತ್ತಿಲ್ಲ.

ಪಾಲಿಕೆಯ ವ್ಯಾಪ್ತಿಯಲ್ಲಿ ಎಷ್ಟು ನಾಯಿಗಳಿವೆ ಎಂಬ ನಿಖರವಾದ ಮಾಹಿತಿಯೇ ಇಲ್ಲ. ಕಳೆದ ಜೂನ್ ತಿಂಗಳಲ್ಲಿ ಪಶುಸಂಗೋಪನಾ ಇಲಾಖೆ ಅಧಿಕಾರಿಯೊಬ್ಬರು 1,342 ಹೆಣ್ಣು ಹಾಗೂ 6,181 ಗಂಡು ನಾಯಿಗಳಿವೆ ಎಂದು ಅಂಕಿಅಂಶ ಕೊಟ್ಟಿದ್ದರು. ಈ ಹಿಂದಿನ ಅಧಿಕಾರಿ 16 ಸಾವಿರ ನಾಯಿಗಳಿವೆ ಎಂದಿದ್ದರು. ಸಾರ್ವಜನಿಕರು 40 ಸಾವಿರಕ್ಕೂ ಹೆಚ್ಚು ಶ್ವಾನಗಳಿವೆ ಎನ್ನುತ್ತಿದ್ದಾರೆ. ಸ್ಪಷ್ಟವಾದ ಅಂಕಿಅಂಶಗಳು ಸಿಗುತ್ತಿಲ್ಲ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.

ನಾಯಿ ಕಡಿತಕ್ಕೆ ಒಳಗಾದವರಿಗೆ ಕಳೆದ 11 ತಿಂಗಳಲ್ಲಿ 62 ಮಂದಿಗೆ ಪರಿಹಾರ ಕೊಡಲಾಗಿದೆ. ಆಸ್ಪತ್ರೆಯ ಚಿಕಿತ್ಸೆಯ ವೆಚ್ಚವನ್ನು ಪಾಲಿಕೆ ಭರಸಲಿದೆ.
ರಾಜೇಂದ್ರ ಭಾಲ್ಕಿ, ಪಾಲಿಕೆಯ ಅಧಿಕಾರಿ

‘ಮುಂಜಾನೆ ನಾಲ್ಕು ಗಂಟೆಗೆ ಪತ್ರಿಕೆ ವಿತರಿಸುವ ಎಂಟು–ಹತ್ತು ಯುವಕರಿಗೆ ನಾಯಿ ಕಚ್ಚಿದೆ. ಅವರಲ್ಲಿ ಕೆಲವರು ಪತ್ರಿಕೆ ಹಾಕುವುದನ್ನೇ ಬಿಟ್ಟಿದ್ದಾರೆ. ಸ್ಲಂ ಪ್ರದೇಶಗಳಿಗೆ ಹೋಗಲು ಭಯವಾಗುತ್ತಿದೆ. ಪಾಲಿಕೆ ಅಧಿಕಾರಿಗಳು ಬೀದಿ ನಾಯಿಗಳ ಕಾಟಕ್ಕೆ ಕಡಿವಾಣ ಹಾಕಿ, ಸಾರ್ವಜನಿಕರು ನಿರ್ಭಯದಿಂದ ಓಡಾಡುವಂತೆ ಮಾಡಬೇಕು. ನಾಯಿ ಕಡಿತದಿಂದ ಗಾಯಗೊಂಡವರಿಗೆ ಪರಿಹಾರಧನ ನೀಡಬೇಕು’ ಎನ್ನುತ್ತಾರೆ ಪತ್ರಿಕಾ ವಿತರಕರ ಸಂಘದ ಜಿಲ್ಲಾ ಅಧ್ಯಕ್ಷ ರಮಕಾಂತ ಜಿಡಗೆಕರ್.

‘ಎಬಿಸಿಯಲ್ಲಿ ತಪ್ಪು ಮಾಹಿತಿ; ಸರ್ಜರಿ ಸ್ಥಗಿತ’

‘ಮಹಾರಾಷ್ಟ್ರದ ಏಜೆನ್ಸಿ ಒಂದಕ್ಕೆ ಪ್ರಾಣಿ ಜನನ ನಿಯಂತ್ರಣ (ಎಬಿಸಿ) ಟೆಂಡರ್ ಕೊಡಲಾಗಿದೆ. ಎಬಿಸಿಗೆ ಸಮರ್ಪಕವಾಗಿ ಮಾಹಿತಿ ಕೊಡದೆ ₹ 16 ಲಕ್ಷ ಬಿಲ್ ಕೊಟ್ಟಿದ್ದರಿಂದ ಸರ್ಜರಿ ಮಾಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಕೆಲವೇ ದಿನಗಳಲ್ಲಿ ಹೊಸ ಟೆಂಡರ್ ಕರೆಯಲಾಗುವುದು’ ಎಂದು ಪಾಲಿಕೆಯ ಅಧಿಕಾರಿ ರಾಜೇಂದ್ರ ಭಾಲ್ಕಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣಕ್ಕೆ ಎಬಿಸಿ ಒಂದೇ ಪರಿಹಾರ. ಆದರೆ ಟೆಂಡರ್ ಪಡೆದವರು ಪಾಲಿಕೆಗೆ ತಪ್ಪು ಮಾಹಿತಿ ಕೊಡುತ್ತಿದ್ದಾರೆ. ಒಮ್ಮೆ 430 ಮತ್ತೊಮ್ಮೆ 1500 ಮಗದೊಮ್ಮೆ 975 ನಾಯಿಗಳಿಗೆ ಎಬಿಸಿ ಮಾಡಿದ್ದಾಗಿ ತೋರಿಸಿದ್ದಾರೆ. ಸರ್ಜರಿ ಮಾಡಿದ್ದ ವೈದ್ಯರು ಅಂಗಾಂಗಳ ಬಗ್ಗೆ ಸರಿಯಾದ ಮಾಹಿತಿ ಹಂಚಿಕೊಳ್ಳುತ್ತಿಲ್ಲ. ಆದರೆ ಬಿಲ್ ಕೊಡುವಂತೆ ಮಾತ್ರ ಕೇಳುತ್ತಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.