ಭಾನುವಾರ, ಮೇ 22, 2022
21 °C

ಸೇಡಂ: ದೇವರ ದರ್ಶನಕ್ಕೆ ಮುಂದಾದ ಸಾಧುವನ್ನು ಎಳೆದಾಡಿ ಅವಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೇಡಂ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಯಾನಾಗುಂದಿ ಗ್ರಾಮದ ದೇವಸ್ಥಾನದ ಸಿಬ್ಬಂದಿ ದೇವರ ದರ್ಶನಕ್ಕೆ ಮುಂದಾದ ಸಾಧು ಒಬ್ಬರನ್ನು ಎಳೆದಾಡಿದ್ದಾರೆ ಎನ್ನಲಾದ ವಿಡಿಯೊ ಭಾನುವಾರದಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಗ್ರಾಮದ ಬೆಟ್ಟದ ಮೇಲಿನ ಮಾತೆ ಮಾಣಿಕೇಶ್ವರಿಯ ಸನ್ನಿಧಿಯತ್ತ ತೆರಳಲು ಸಾಧು ಮುಂದಾದರು. ಆಗ ದೇವಸ್ಥಾನದ ಸಿಬ್ಬಂದಿ ಬಂದು, ‘ಕೀಲಿ ಏಕೆ ಒಡೆಯುತ್ತಿದ್ದಿಯಾ’ ಎಂದು ಪ್ರಶ್ನಿಸಿ ದರದರನೆ ಎಳೆದೊಯ್ದು ನಿಂದಿಸಿದ್ದಾರೆ ಎನ್ನಲಾಗುತ್ತಿದೆ.

ಎಳೆದೊಯ್ಯುವಾಗ ಸಾಧು ‘ಓ ನಮೋ ನಾರಾಯಣ’ ಮಂತ್ರ ಜಪಿಸುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

ಈ ಕುರಿತು ಮಾಹಿತಿ ಪಡೆಯಲು ‘ಪ್ರಜಾವಾಣಿ’ ದೇವಸ್ಥಾನದ ಆಡಳಿತ ಮಂಡಳಿಯವರಿಗೆ ಕರೆ ಮಾಡಿದಾಗ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು