ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶರಣ ತತ್ವ ಅಧ್ಯಯನ ಮಾಡಿ: ಮಾಜಿ ಸಚಿವ ಎನ್. ಮಹೇಶ

Published 25 ಜೂನ್ 2024, 15:38 IST
Last Updated 25 ಜೂನ್ 2024, 15:38 IST
ಅಕ್ಷರ ಗಾತ್ರ

ಕಲಬುರಗಿ: ‘ಶರಣರ ವಚನಗಳು ಅಂತರಂಗ ಮತ್ತು ಬಹಿರಂಗ ಶುದ್ಧಿ ಮಾಡುವ ದಿವ್ಯ ಔಷಧಿಗಳಾಗಿವೆ. ದಿನನಿತ್ಯ ನಾವುಗಳು ವಚನ ಪಠಣ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಶರಣ ತತ್ವಗಳನ್ನು ಅಧ್ಯಯನ ಮಾಡಿದರೆ ಶರಣ ಜೀವನವಾಗುತ್ತದೆ’ ಎಂದು ಮಾಜಿ ಸಚಿವ ಎನ್. ಮಹೇಶ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ನಗರದ ಶ್ರೀಮತಿ ವಿ.ಜಿ. ಮಹಿಳಾ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಅವರ ಬದುಕು ಮತ್ತು ಸಾಧನೆ ಕುರಿತು ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಮಾನವೀಯ ಮೌಲ್ಯಗಳ ಗಣಿಯಂತಿರುವ ವಚನಗಳನ್ನು ನಮಗೆ ಸಿಗುವಂತೆ ಮಾಡಿದ್ದು ವಚನ ಪಿತಾಮಹ ಫ.ಗು. ಹಳಕಟ್ಟಿ ಅವರು. ಯಾವ ವಿಶ್ವವಿದ್ಯಾಲಯಗಳು ಮಾಡಲಾಗದ ಬಹು ದೊಡ್ಡ ಸಾಧನೆಯನ್ನು ಮಾಡುವ ಮೂಲಕ ವಚನ ಸಂರಕ್ಷಣೆಯ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ ಎಂದರು.

ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ಕಾಯಕ ಶರಣರನ್ನು ಒಗ್ಗೂಡಿಸಿದಂತೆ, ವಚನಕಾರರ ಸಾಹಿತ್ಯವನ್ನು 20ನೇ ಶತಮಾನದಲ್ಲಿ ಒಗ್ಗೂಡಿಸಲು ಶ್ರಮಿಸಿದ ಫ.ಗು.ಹಳಕಟ್ಟಿ ಅವರು ಆಧುನಿಕ ಬಸವಣ್ಣ ಎಂದು ಹೇಳಿದರು.

ಶರಣ ಚಿಂತಕಿ ಜಯಶ್ರೀ ಚಟ್ನಳ್ಳಿ ಮಾತನಾಡಿ, ಫ.ಗು. ಹಳಕಟ್ಟಿ ಅವರು ಆಸೆ, ಆಕಾಂಕ್ಷೆಗಳನ್ನು ತೊರೆದು ಸಾಮಾಜಿಕ ಹಿತಕ್ಕಾಗಿ ವಚನ ಸಾಹಿತ್ಯ ಉಳಿಸಿ, ಬೆಳೆಸಿದರು ಎಂದರು.

ಕಾಲೇಜಿನ ಪ್ರಾಚಾರ್ಯ ನಾಗೇಂದ್ರ ಮಸೂತಿ ಅಧ್ಯಕ್ಷತೆ ವಹಿಸಿದ್ದರು. ವಕೀಲ ಶಿವಲಿಂಗಪ್ಪ ಅಷ್ಟಗಿ, ಪ್ರಮುಖರಾದ ಶರಣರಾಜ್ ಛಪ್ಪರಬಂದಿ, ರವೀಂದ್ರಕುಮಾರ ಭಂಟನಳ್ಳಿ, ವಿನೋದಕುಮಾರ ಜೇನವೇರಿ, ರಾಜೇಂದ್ರ ಮಾಡಬೂಳ, ಮಲ್ಲಿಕಾರ್ಜುನ ಪೂಜಾರಿ, ಜಗದೀಶ ಮರಪಳ್ಳಿ, ಶಿವಾನಂದ ಮಠಪತಿ, ರೇವಣಸಿದ್ದಪ್ಪ ಜೀವಣಗಿ, ಹಣಮಂತ ಪ್ರಭು, ಡಾ. ಕಾಶಿಬಾಯಿ ಬೋಗಶೆಟ್ಟಿ, ಪ್ರಭವ ಪಟ್ಟಣಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT