ಕಲಬುರಗಿ: ‘ಬರೀ ಸತ್ಯಾಂಶಗಳನ್ನು ತಲೆಗೆ ತುಂಬುವುದೇ ಶಿಕ್ಷಣವಲ್ಲ; ವಿಮರ್ಶಾತ್ಮಕ ಚಿಂತನೆ, ನೈತಿಕ ವರ್ತನೆ ಹಾಗೂ ನಿಸ್ವಾರ್ಥವಾಗಿ ಸೇವೆ ಮಾಡುವಂತೆ ನಮ್ಮೊಳಗಿನ ಶಕ್ತಿ ಜಾಗೃತಗೊಳಿಸುವುದೇ ನಿಜವಾದ ಶಿಕ್ಷಣ’ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಲ್.ಪಾಟೀಲ ಹೇಳಿದರು.

ನಗರದ ಶರಣಬಸವೇಶ್ವರ ದೇವಸ್ಥಾನದ ಆವರಣದ ಶರಣಬಸವಪ್ಪ ಅಪ್ಪ ಅನುಭವ ಮಂಟಪದಲ್ಲಿ ಭಾನುವಾರ ನಡೆದ ಶರಣಬಸವ ವಿಶ್ವವಿದ್ಯಾಲಯದ ಏಳನೇ ಘಟಿಕೋತ್ಸವದಲ್ಲಿ ಅವರು ಘಟಿಕೋತ್ಸವ ಭಾಷಣ ಮಾಡಿದರು.

‘ಜಗತ್ತು ವೇಗವಾಗಿ ಬದಲಾಗುತ್ತಿದ್ದು, ತಂತ್ರಜ್ಞಾನ ನಮ್ಮ ಜೀವನದ ಪ್ರತಿಯೊಂದು ಅಂಶವನ್ನೂ ಪರಿವರ್ತಿಸುತ್ತಿದೆ. ಸಾಕಷ್ಟು ಪ್ರಗತಿಯ ನಡುವೆಯೂ ಹವಾಮಾನ ಬದಲಾವಣೆ, ಆರ್ಥಿಕ ಅಸಮಾನತೆ, ಮಾನಸಿಕ ಆರೋಗ್ಯ ಬಿಕ್ಕಟ್ಟು, ಸಂಘರ್ಷಗಳು, ನೈತಿಕ ಸಂದಿಗ್ಧತೆಗಳಂಥ ಸವಾಲುಗಳನ್ನು ಜಗತ್ತು ಎದುರಿಸುತ್ತಿದೆ. ಭಾರತ ಬೆಳೆಯುತ್ತಿರುವ ಆರ್ಥಿಕತೆ ಹೊಂದಿದ್ದರೂ, ದೇಶದ ವಿವಿಧ ವರ್ಗಗಳ ನಡುವೆ ಸಂಪತ್ತಿನ ಗಮನಾರ್ಹ ಅಂತರ ಕಳವಳಕಾರಿ. ಆರೋಗ್ಯ, ಶಿಕ್ಷಣ ಹಾಗೂ ನೈರ್ಮಲ್ಯದಂಥ ಅಗತ್ಯ ಸೌಕರ್ಯಕ್ಕಾಗಿ ಈಗಲೂ ಹಲವರು ಪರದಾಡುತ್ತಿದ್ದಾರೆ’ ಎಂದರು.

‘ಭವಿಷ್ಯದಲ್ಲಿ ಎಲ್ಲ ಬಗೆಯ ಸವಾಲುಗಳನ್ನು ಮೀರಿ ನಿಲ್ಲುವಂತಾಗಲು ಯುವ ಪದವೀಧರರು ಬದುಕಿನಲ್ಲಿ ಆರು ಸೂತ್ರಗಳನ್ನು ಪಾಲಿಸಬೇಕು. ಕಾಯಕವೇ ಕೈಲಾಸ ಎಂಬುದು ನೆನಪಿರಲಿ. ಕೆಲಸವೇ ನಿಮ್ಮ ಪ್ರಾರ್ಥನೆಯಾಗಲಿ. ಚಾರಿತ್ರ್ಯ ನಿರ್ಮಾಣವೇ ಶಿಕ್ಷಣದ ನಿಜ ಕೆಲಸ ಎಂಬುವುದು ಗಮನಕ್ಕಿರಲಿ. ಸೇವೆಯೇ ಅತ್ಯಂತ ದೊಡ್ಡ ಸದ್ಗುಣ ಎಂಬುದು ತಿಳಿದಿರಲಿ. ದಾಸೋಹ ಗುಣ ರೂಢಿಸಿಕೊಳ್ಳಿ. ಯಾವುದೇ ಕಾಯಕವಿರಲಿ, ಅದನ್ನು ಗೌರವದಿಂದ ಕಾಣಿ. ಸಮಾನತೆ ಎತ್ತಿಹಿಡಿಯಿರಿ. ಜಾತಿ, ಮತ, ಪಂಥದ ಗಡಿಗಳನ್ನು ಒಡೆದು ಹಾಕಿ. ಜಗತ್ತು ಶಕ್ತಿ ಮತ್ತು ಸಂಪತ್ತನ್ನು ಗೌರವಿಸಬಹುದು. ಆದರೆ, ಇತಿಹಾಸ ಮಾನವೀಯತೆಯ ಸೇವಕರನ್ನು ಎಂದಿಗೂ ಸ್ಮರಿಸುತ್ತದೆ ಎಂಬುದನ್ನು ಮರೆಯದಿರಿ’ ಎಂದರು.

‘ನಿರಂತರ ಕಲಿಕೆ, ಮೌಲ್ಯಗಳನ್ನು ಗೌರವಿಸುವುದು, ಸೋಲನ್ನು ಮೀರಿ ನಿಲ್ಲುವುದು, ಪ್ರತಿಯೊಂದರಲ್ಲೂ ನೈತಿಕವಾಗಿ ನಡೆದುಕೊಳ್ಳುವುದು ಹಾಗೂ ಸಮಾಜ ಸೇವೆ ಎಂಬ ಪಂಚ ಮಂತ್ರಗಳು ಬದುಕಿನ ದಿಕ್ಸೂಚಿಯಾಗಲಿ’ ಎಂದು ಕಿವಿಮಾತು ಹೇಳಿದರು.

ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದ ಶರಣಬಸವ ವಿವಿ ಕುಲಾಧಿಪತಿ ದಾಕ್ಷಾಯಣಿ ಎಸ್.ಅಪ್ಪ ಮಾತನಾಡಿ, ‘ಕಡಿಮೆ ಸಮಯದಲ್ಲೇ ಶರಣಬಸವ ವಿವಿ ಶೈಕ್ಷಣಿಕವಾಗಿ ಹಲವು ಸಾಧನೆ ಮಾಡಿದೆ. ದಿ.ಶರಣಬಸವಪ್ಪ ಅಪ್ಪ ಅವರ ಕನಸಿನಂತೆ ವಿಶ್ವದ 100 ಅಗ್ರ ವಿವಿಗಳ ಪಟ್ಟಿಯಲ್ಲಿ ಶರಣಬಸವ ವಿವಿಯೂ ಸೇರಲಿದೆ ಎಂಬ ಭರವಸೆ ಮೂಡಿಸಿದೆ. ಆ ಕನಸು ಸಾಕಾರಕ್ಕೆ ಎಲ್ಲರೂ ಒಗ್ಗೂಡಿ ಶ್ರಮಿಸೋಣ’ ಎಂದರು.

ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ದೊಡ್ಡಪ್ಪ ಎಸ್.ಅಪ್ಪ ಸಾನ್ನಿಧ್ಯ ವಹಿಸಿದ್ದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಕುಲಸಚಿವರಾದ ಪ್ರೊ.ಎಸ್.ಜಿ.ಡೊಳ್ಳೆಗೌಡರ, ಪ್ರೊ.ಎಸ್.ಎಚ್.ಹೊನ್ನಳ್ಳಿ, ಪ್ರಮುಖರಾದ ರಾಜಾ ಭೀಮಳ್ಳಿ, ಎನ್.ಎಸ್.ದೇವರಕಲ್, ವಿ.ಡಿ.ಮೈತ್ರಿ, ಲಕ್ಷ್ಮಿಪಾಟೀಲ ಮಾಕಾ, ಕಿರಣ ಮಾಕಾ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.

‘ಮುನಿಸು ಅಸೂಯೆ ದೂರವಿಡಿ’

ಪ್ರಾಸ್ತಾವಿಕವಾಗಿ ಮಾತನಾಡಿದ ಶರಣ ಬಸವ ವಿವಿ ಕುಲಸಚಿವ ಪ್ರೊ.ಅನಿಲಕುಮಾರ ಬಿಡವೆ ‘ಕ್ರೂರ ಜಗತ್ತಿನಲ್ಲಿ ಭವಿಷ್ಯದ ಸವಾಲುಗಳನ್ನು ಎದುರಿಸಲು ಬರೀ ಕೌಶಲಗಳು ತರಗತಿಯಲ್ಲಿನ ಜ್ಞಾನ ಸಾಲದು. ಅದರೊಂದಿಗೆ ಒಳ್ಳೆಯ ಮಾನವನಾಗಲು ಬೇಕಾದ ಕೌಶಲ ಗುಣಗಳ ಜೊತೆಗೆ ಸಂಸ್ಕಾರ ರೂಢಿಸಿಕೊಳ್ಳಬೇಕು. ಜೊತೆಗೆ ಮುನಿಸು ಹಾಗೂ ಅಸೂಯೆದಿಂದ ದೂರವಿರಬೇಕು’ ಎಂದು ಸಲಹೆ ನೀಡಿದರು.

ಇಬ್ಬರಿಗೆ ಗೌಡಾ; ಒಬ್ಬರು ಗೈರು

ಘಟಿಕೋತ್ಸವದಲ್ಲಿ ಮುತ್ಯಾನ ಬಬಲಾದ ಗುರು ಚೆನ್ನವೀರೇಶ್ವರ ವಿರಕ್ತಮಠದ ಪೀಠಾಧಿಪತಿ ಗುರುಪಾದಲಿಂಗ ಶಿವಯೋಗಿ ಹಾಗೂ ಎಚ್ಕೆಇ ಸಂಸ್ಥೆಯ ಅಧ್ಯಕ್ಷ ಶಶೀಲ್ ನಮೋಶಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. 21 ಪಿಎಚ್ಡಿ 9 ಡಿಪ್ಲೊಮಾ 28 ಕೋರ್ಸ್ಗಳ 527 ಸ್ನಾತಕೋತ್ತರ ಹಾಗೂ 1362 ಪದವಿ ಸೇರಿದಂತೆ ಒಟ್ಟು 1919 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಶರಣಬಸವ ವಿವಿ ‘ಅಗ್ರಜ’ರಾದ ಸಿಮ್ರಾನಿಶಾತ್ ಕಲಕೇರಿ ಹಾಗೂ ರಾಹುಲ್ ಅವರಿಗೆ ಲಿ.ಶರಣಬಸವಪ್ಪ ಅಪ್ಪ ಹೆಸರಿನ ತಲಾ ₹21 ಸಾವಿರ ಮೊತ್ತದ ನಗದು ಪ್ರಶಸ್ತಿ ನೀಡಲಾಯಿತು. ಇನ್ನುಳಿದಂತೆ 44 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ನಗದು ಬಹುಮಾನ ನೀಡಲಾಯಿತು. ಗೌರವ ಡಾಕ್ಟರೇಟ್ ಪಡೆಯಬೇಕಿದ್ದ ಖಾಜಾ ಬಂದಾನವಾಜ್ ದರ್ಗಾದ ಮುಖ್ಯಸ್ಥ ಸೈಯದ್ ಮುಹಮ್ಮದ್ ಅಲಿ ಅಲ್ ಹುಸೇನಿ ನಗರದಿಂದ ಹೊರಗಿರುವ ಕಾರಣ ಘಟಿಕೋತ್ಸವಕ್ಕೆ ಗೈರಾಗಿದ್ದರು.

ಘಟಿಕೋತ್ಸವ ವಿದ್ಯಾರ್ಥಿಗಳ ದಿನ. ಅವರ ತಪಸ್ಸಿಗೆ ಸಂದ ಗೌರವ ಸ್ವೀಕರಿಸುವ ದಿನ. ಶರಣರ ಆಶೀರ್ವಾದದಿಂದ ನೀವೆಲ್ಲ ಎತ್ತರೆತ್ತರಕ್ಕೆ ಬೆಳೆಯಲಿ ಎಂಬುದು ನನ್ನ ಆಶಯ
–ದಾಕ್ಷಾಯಣಿ ಎಸ್.ಅಪ್ಪ ಕುಲಾಧಿಪತಿ ಶರಣಬಸವ ವಿವಿ