ಶನಿವಾರ, ನವೆಂಬರ್ 28, 2020
25 °C

ಈಜಲು ಹೋಗಿ ತಂದೆ- ಮಗ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೇಡಂ: ತಾಲ್ಲೂಕಿನ ಸಂಗಾವಿ (ಎಂ) ಬಳಿ ಭಾನುವಾರ ನದಿಯಲ್ಲಿ ಈಜಲು ಹೋದ ತಂದೆ- ಮಗ ನೀರುಪಾಲಾಗಿದ್ದಾರೆ.

ಸಂಗಾವಿ ಗ್ರಾಮದ ಮಿರ್ಜಾ ಖಾಯಂ ಅಲಿ (51) ಮತ್ತು ಅವರ ಪುತ್ರ ಮಿರ್ಜಾ ಮೆಹದಿ ಅಲಿ (19) ಮೃತಪಟ್ಟವರು. ಇಬ್ಬರೂ ಹೈದರಾಬಾದ್ ಬಂಜಾರ ಹಿಲ್ಸ್ ನಿವಾಸಿಗಳು ಎಂದು ತಿಳಿದುಬಂದಿದೆ.

ರಜೆಯ ಹಿನ್ನೆಲೆಯಲ್ಲಿ ಮಳಖೇಡದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಆಗಮಿಸಿದ್ದರು. ಸಂಗಾವಿ ಸೇತುವೆ ಬಳಿ ತಂದೆ ಮತ್ತು ಮಕ್ಕಳು ಈಜಲು ಹೋಗಿದ್ದರು. ತಂದೆ ಮುಳುಗುತ್ತಿರುವಾಗ ರಕ್ಷಿಸಲು ಇಬ್ಬರು ಮಕ್ಕಳು ಹೋಗಿದ್ದರು. ಅದರಲ್ಲಿ ಒಬ್ಬ ಮಗ ಮತ್ತು ತಂದೆ ನೀರು ಪಾಲಾದರು. ಇನ್ನೊಬ್ಬ ಮಗ ಅಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮಳಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.