ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ವೀರೇಂದ್ರ ಪಾಟೀಲ ಪಬ್ಲಿಕ್ ಶಾಲೆಯ ಪ್ರಾರಂಭೋತ್ಸವ

Published 3 ಜೂನ್ 2024, 3:15 IST
Last Updated 3 ಜೂನ್ 2024, 3:15 IST
ಅಕ್ಷರ ಗಾತ್ರ

ಚಿಂಚೋಳಿ: ಪಟ್ಟಣದ ವೀರೇಂದ್ರ ಪಾಟೀಲ ಪಬ್ಲಿಕ್ ಶಾಲೆಯ ಪ್ರಾರಂಭೋತ್ಸವ ಶನಿವಾರ ಸಂಭ್ರಮದಿಂದ ಜರುಗಿತು. ಶಾಲೆಯ ಪ್ರವೇಶ ದ್ವಾರವನ್ನು ಬಲೂನಿನಿಂದ ಸಿಂಗರಿಸಲಾಗಿತ್ತು. ಪಕ್ಕದಲ್ಲಿ ಸುಸ್ವಾಗತದ ಫಲಕ ಹಾಕಲಾಗಿತ್ತು. ಶಾಲೆಗೆ ಬಂದ ಮಕ್ಕಳಿಗೆ ಪ್ರಾಂಶುಪಾಲರಾದ ಜ್ಯೋತಿರಡ್ಡಿ ಹಾಗೂ ಸಿಬ್ಬಂದಿ ಗುಲಾಬಿ ಹೂವು ನೀಡಿ ಸ್ವಾಗತಿಸಿದರು.

ವೀರೇಂದ್ರ ಪಾಟೀಲ ಪಬ್ಲಿಕ್ ಶಾಲೆ, ವೀರೇಂದ್ರ ಪಾಟೀಲ ಪಿಯು ಕಾಲೇಜು ಹಾಗೂ ವೀರೇಂದ್ರ ಪಾಟೀಲ ಕನ್ನಡ ಮಾಧ್ಯಮ ಶಾಲೆಯ ಮಕ್ಕಳನ್ನು ಸ್ವಾಗತಿಸಲಾಯಿತು. ಕೊನೆಗೆ ಶಾರದಾ ವೀರೇಂದ್ರ ಪಾಟೀಲ ಪೂರ್ವ ಪ್ರಾಥಮಿಕ ಶಾಲೆಯ ಮಕ್ಕಳನ್ನು ನಿಲ್ಲಿಸಿಕೊಂಡು ಫೋಟೊ ತೆಗೆಸಿಕೊಳ್ಳಲಾಯಿತು.

ಪೂರ್ವ ಪ್ರಾಥಮಿಕ, ಪ್ರಾಥಮಿಕ, ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಾಗೂ ಪಿಯು ಕಾಲೇಜು ಪ್ರವೇಶ ನಡೆಯುತ್ತಿದ್ದು, ಮೊದಲ ದಿನವೇ ಪೂರ್ವ ಪ್ರಾಥಮಿಕ ಮತ್ತು ಪಿಯು ಕಾಲೇಜು ಹೊರತುಪಡಿಸಿ ಉಳಿದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಉಪಾಧ್ಯಕ್ಷ ಬಸವರಾಜ ಮಾಲಿ, ಹಿರಿಯರಾದ ಅಬ್ರಾಹಂ, ಪ್ರಾಂಶುಪಾಲರಾದ ಜ್ಯೋತಿ ಯಜ್ಞೇಂದ್ರರಡ್ಡಿ, ವಿಶ್ವನಾಥ ನಾಯನೂರ, ದೈಹಿಕ ಶಿಕ್ಷಕ ಸಂಜೀವರಡ್ಡಿ, ಲೀಲು, ರಾಧಾ, ಪ್ರಮಿಳಾ, ಜ್ಯೋತಿ, ವಿಜಯಲಕ್ಷ್ಮಿ, ದೀಪಿಕಾ, ಅಶ್ವಿತಾ, ಡೆನ್ನಿ, ರೇಣುಕಾ ಎಸ್, ಗೀತಾ, ಸುಜಾತಾ, ರೇಣುಕಾ ಆರ್. ಮೊದಲಾದವರು ಉಪಸ್ಥಿತರಿದ್ದರು.

ಚಿಂಚೋಳಿಯ ವೀರೇಂದ್ರ ಪಾಟೀಲ ಪಬ್ಲಿಕ್ ಶಾಲೆಯ ಮಕ್ಕಳನ್ನು ಶನಿವಾರ ಸ್ವಾಗತಿಸಲಾಯಿತು
ಚಿಂಚೋಳಿಯ ವೀರೇಂದ್ರ ಪಾಟೀಲ ಪಬ್ಲಿಕ್ ಶಾಲೆಯ ಮಕ್ಕಳನ್ನು ಶನಿವಾರ ಸ್ವಾಗತಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT