ಶುಕ್ರವಾರ, ಜನವರಿ 28, 2022
25 °C

ವಿಠಲ ಹೇರೂರ ಪುಣ್ಯಸ್ಮರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ತಾಪುರ: ‘ಹಿಂದುಳಿದ ವರ್ಗಗಳ ಪ್ರಭಾವಿ ನಾಯಕರಾಗಿ ಬೆಳೆದ ದಿ.ವಿಠಲ್ ಹೇರೂರ ಅವರು ಕೋಲಿ ಸಮಾಜಕ್ಕಾಗಿ ರಾಜಿರಹಿತ ಹೋರಾಟ ಮಾಡಿದ್ದಾರೆ’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮುನಿಯಪ್ಪ ಕೊಳ್ಳಿ ಹೇಳಿದರು.

ತಾಲ್ಲೂಕಿನ ದಂಡೋತಿ ಗ್ರಾಮದಲ್ಲಿ ಶುಕ್ರವಾರ ದಿ.ವಿಠಲ ಹೇರೂರ ಅವರ 8ನೇ ಪುಣ್ಯಸ್ಮರಣೆ ನಿಮಿತ್ತ ಭಾವಚಿತ್ರದ ಮೆರವಣಿಗೆ, ಪುಷ್ಪನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹೇರೂರ ಅವರು ಮಾಡಿರುವ ಹೋರಾಟ ಸಮಾಜಕ್ಕೆ ದಾರಿದೀಪವಾಗಿದೆ. ಅವರು ತೋರಿದ ಮಾರ್ಗದಲ್ಲಿ ಸಮಾಜದ ಜನರು ಹೋರಾಟ ಮಾಡಬೇಕು ಎಂದು ಅವರು ಹೇಳಿದರು.

ಕೋಲಿ ಸಮಾಜದ ಯುವ ಮುಖಂಡ ಸಾಬಣ್ಣ ಭರಾಟೆ ಅವರು ಮಾತನಾಡಿ, ಸಮಾಜವನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವವರೇ ಹೆಚ್ಚು. ಆದರೆ, ಹೇರೂರ ಅವರು ತಮ್ಮ ಅಧಿಕಾರ ಮತ್ತು ರಾಜಕಾರಣ ಬಳಸಿಕೊಂಡು ಸಮಾಜಕ್ಕೆ ನ್ಯಾಯ ಕೊಡಿಸಲು ಜೀವ ಇರುವವರೆಗೂ ಹೋರಾಟ ನಡೆಸಿದರು. ಅವರ ಹೋರಾಟವೇ ಸಮಾಜಕ್ಕೆ ಬಹುದೊಡ್ಡ ಮಾರ್ಗದರ್ಶನ ಎಂದು ಹೇಳಿದರು.

ಗ್ರಾಮದ ನಿಜಶರಣ ಅಂಬಿಗರ ಚೌಡಯ್ಯನವರ ಧ್ವಜಕಟ್ಟೆಯಿಂದ ಅಂಬಿಗರ ಚೌಡಯ್ಯ ಕಲ್ಯಾಣ ಮಂಟಪದವರೆಗೆ ದಿ.ವಿಠಲ ಹೇರೂರ ಅವರ ಭಾವಚಿತ್ರವನ್ನು ಜಯಘೋಷದೊಂದಿಗೆ ಮೆರವಣಿಗೆ ಮಾಡಿ ಪುಷ್ಪನಮನ ಸಲ್ಲಿಸಲಾಯಿತು.

ಮಲ್ಲಿಕಾರ್ಜುನ ಭರಾಟೆ, ಸಂತೋಷ ಕೊಂಕನಳ್ಳಿ, ರವಿ ಕೊಂಕನಳ್ಳಿ, ಮಲ್ಲಿಕಾರ್ಜುನ ಚಿತ್ತಾಪುರ, ಈರಣ್ಣ ಕೊಳ್ಳಿ ಅನೇಕರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು