ಸೇಡಂ ಪಟ್ಟಣದ ವಿದ್ಯಾನಗರದ ಮತಗಟ್ಟೆಯಲ್ಲಿ ಮಾಜಿ ಶಾಸಕ ರಾಜಕುಮಾರ ಪಾಟೀಲ ಮತ ಚಲಾಯಿಸಿದರು
ಚಿತ್ತಾಪುರ ತಾಲ್ಲೂಕಿನ ಗುಂಡಗುರ್ತಿ ಗ್ರಾಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಶೃತಿ ಪ್ರಿಯಾಂಕ್ ಖರ್ಗೆ ಅವರು ಮತ ಹಕ್ಕು ಚಲಾಯಿಸಿದರು
ಜೇವರ್ಗಿ ತಾಲ್ಲೂಕಿನ ನೆಲೋಗಿ ಗ್ರಾಮದಲ್ಲಿ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯಸಿಂಗ್ ಅವರು ಬೆಂಬಲಿಗರೊಂದಿಗೆ ಮತ ಚಲಾಯಿಸಿದರು
ಕಾಳಗಿ ತಾಲ್ಲೂಕಿನ ಮತ್ತಿಮಡು ಗ್ರಾಮದಲ್ಲಿ ಶಾಸಕ ಬಸವರಾಜ ಮತ್ತಿಮಡು ಅವರು ಕುಟುಂಬ ಸಮೇತ ಮತ ಚಲಾಯಿಸಿದರು
ಜೇವರ್ಗಿಯ ನರಿಬೋಳ ಗ್ರಾಮದಲ್ಲಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ಬೆಂಬಲಿಗರೊಂದಿಗೆ ಮತದಾನ ಮಾಡಿದರು
ಕಲಬುರಗಿಯ ಎಂ.ಪಿ.ಎಚ್.ಎಸ್ ಶಾಲೆಯಲ್ಲಿರುವ ಮತಗಟ್ಟೆ 51ರಲ್ಲಿ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ದಂಪತಿ ಮತದಾನ ಮಾಡಿದರು
ಎಚ್‌ಕೆಇ ಸದಸ್ಯ ಡಾ. ಕೈಲಾಸ ಪಾಟೀಲ ಬಿಜೆಪಿ ನಗರ ಘಟಕದ ಜಿಲ್ಲಾಧ್ಯಕ್ಷ ಚಂದು ಪಾಟೀಲ ವಿಧಾನ್‌ಪರಿಷತ್ ಸದಸ್ಯ ಬಿ.ಜಿ. ಪಾಟೀಲ ಅವರು ಕಲಬುರಗಿಯ ನೆಹರು ಗಂಜನಲ್ಲಿರುವ ಮತಗಟ್ಟೆಯಲ್ಲಿ ಮತದಾನ ಮಾಡಿದರು
ವಿಧಾನ ಪರಿಷತ್ ಸದಸ್ಯ ಶಶೀಲ ಜಿ. ನಮೋಶಿ ಅವರು ಕುಟುಂಬದ ಸದಸ್ಯರೊಂದಿಗೆ ಕಲಬುರಗಿಯ ಎನ್.ವಿ. ಕಾಲೇಜಿನಲ್ಲಿ ಚುನಾವಣಾ ಬೂತ್‌ನಲ್ಲಿ ತಮ್ಮ ಮತದಾನ ಹಕ್ಕನ್ನು ಚಲಾಯಿಸಿದರು
ಅಫಜಲಪುರ ತಾಲ್ಲೂಕಿನ ದೇಸಾಯಿ ಕಲ್ಲೂರು ಗ್ರಾಮದಲ್ಲಿ ಶಾಸಕ ಎಂ.ವೈ. ಪಾಟೀಲ ಅವರು ಮತದಾನ ಮಾಡಿದರು
ಅಫಜಲಪುರ ತಾಲ್ಲೂಕಿನ ಸ್ಟೇಷನ್ ಗಾಣಗಾಪುರದಲ್ಲಿ ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಅವರು ಕುಟುಂಬದೊಂದಿಗೆ ಮತದಾನ ಮಾಡಿದರು
ಸ್ಟೇಷನ್ ಗಾಣಗಾಪುರದಲ್ಲಿ ಬಿಜೆಪಿ ಮುಖಂಡ ನಿತಿನ್ ಗುತ್ತೇದಾರ್ ಮತದಾನ ಮಾಡಿದರು
ಜೇವರ್ಗಿ ತಾಲ್ಲೂಕಿನ ರದ್ದೇವಾಡಗಿ ಗ್ರಾಮದ ಬೂತ್ ನಂಬರ್ 47ರಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ ಮತ ಚಲಾಯಿಸಿದರು