ಶುಕ್ರವಾರ, ನವೆಂಬರ್ 27, 2020
21 °C

ಯಡ್ರಾಮಿ ಇನ್ನು ಪಟ್ಟಣ ಪಂಚಾಯಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಡ್ರಾಮಿ: ಇಲ್ಲಿನ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಿ ಸರ್ಕಾರ ಆದೇಶ ಹೊರಡಿಸಿದೆ.

ಯಡ್ರಾಮಿ ಗ್ರಾಮ ಪಂಚಾಯಿತಿ ಪ್ರದೇಶವನ್ನು ಸೆಪ್ಟೆಂಬರ್ 11ರಂದು ಪರಿವರ್ತನಾ ಪ್ರದೇಶವೆಂದು ಉದ್ಘೋಷಿಸಿ ಪರಿವರ್ತನಾ ಯಡ್ರಾಮಿ ಪಟ್ಟಣ ಪಂಚಾಯಿತಿ ಪ್ರದೇಶವೆಂದು ಪದನಾಮೀಕರಿಸಿ ಘೋಷಿಸಲಾಗಿದೆ.

ಯಡ್ರಾಮಿ ಮೇಲ್ದರ್ಜೆಗೇರಿಸಿದ ನಂತರ ಒಟ್ಟಾರೆ ಪರಿಗಣಿಸಲ್ಪಡುವ ಪ್ರದೇಶ 11.35 ಚ.ಕಿ.ಮೀ. ಪೂರ್ವಕ್ಕೆ ಯಡ್ರಾಮಿ ಗ್ರಾಮವು ಜೇವರ್ಗಿ ಮತ್ತು ಚಿಗರಹಳ್ಳಿ ಮುಖ್ಯರಸ್ತೆಯ ಮೇಲೆ ನಿರ್ಮಾಣವಾಗಿದ್ದು ಸರ್ವೆ ನಂ.442/1 ಅಖಂಡಹಳ್ಳಿ ಗ್ರಾಮಕ್ಕೆ ಹೋಗುವ ದಕ್ಷಿಣಾಭಿಮುಖವಾಗಿ ಸರ್ವೆ ನಂ.442/1ರವರೆಗೆ ಮತ್ತು ಸ.ನಂ 442, 441, 440 ಕೂಡ ಒಳಗೊಂಡಿರುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.