ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನಿಸುವುದನ್ನು ಕಲಿಸಿದ ವಿವೇಕಾನಂದ: ಪ್ರೊ. ಟಿ ಜಿ ಕೆ ಮೂರ್ತಿ

ಸಿಯುಕೆಯಲ್ಲಿ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಪ್ರೊ.ಟಿಜಿಕೆ ಮೂರ್ತಿ
Last Updated 13 ಜನವರಿ 2021, 2:31 IST
ಅಕ್ಷರ ಗಾತ್ರ

ಕಲಬುರ್ಗಿ: ವಯಸ್ಸು, ಲಿಂಗ, ಜಾತಿ, ರಾಷ್ಟ್ರೀಯತೆಯನ್ನು ಲೆಕ್ಕಿಸದೆ ಸ್ವಾಮಿ ವಿವೇಕಾನಂದರು ಎಲ್ಲಾ ನಾಗರಿಕರ ಮನ ಗೆದ್ದಿದ್ದಾರೆ. ಅವರು ಯೌವನದವರಾಗಿದ್ದರು ಮತ್ತು ದೇಶದ ಯೌವನದ ಸಂಕೇತವಾಗಿದ್ದಾರೆ. ಆದ್ದರಿಂದ ಅವರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸುವುದು ಸೂಕ್ತವಾಗಿದೆ ಎಂದು ಇಸ್ರೋದ ಮಾಜಿ ಕಾರ್ಯಕ್ರಮ ನಿರ್ದೇಶಕ ಪ್ರೊ. ಟಿ ಜಿ ಕೆ ಮೂರ್ತಿ ಹೇಳಿದರು.

ಇಲ್ಲಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ಯುವ ದಿನಾಚರಣೆಯ ಸಂದರ್ಭದಲ್ಲಿ ಅವರು ಆನ್‌ಲೈನ್‌ ಮೂಲಕ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.

ವಿವೇಕಾನಂದರು ಯುವಕರಿಗೆ ‘ಯಶಸ್ವಿಯಾಗಲು ನೀವು ವೇದಗಳಿಗೆ ಹೋಗಬೇಕಾಗಿಲ್ಲ, ಒಳ್ಳೆಯವರಾಗಿರಿ ಮತ್ತು ಒಳ್ಳೆಯದನ್ನು ಮಾಡಿ’ ಎಂದು ಹೇಳಿದರು. ವಿವೇಕಾನಂದರು ಯಾವಾಗಲೂ ಪ್ರಶ್ನಿಸುವುದನ್ನು ಪ್ರೋತ್ಸಾಹಿಸಿದರು. ನೀವು ಜೀವನದಲ್ಲಿ ಏನಾದರೂ ಆಗಲು ಬಯಸಿದರೆ ನೀವೇ ನಿಮ್ಮನ್ನು ಪ್ರಶ್ನಿಸಬೇಕು, ನೀವು ಕುರುಡಾಗಿ ಯಾವುದನ್ನೂ ಸ್ವೀಕರಿಸಬೇಡಿ. ಆದ್ದರಿಂದ ಸ್ವಾಮಿ ವಿವೇಕಾನಂದರು ರಾಮಕೃಷ್ಣ ಪರಮಹಂಸರನ್ನು ನೀವು ದೇವರನ್ನು ನೋಡಿದ್ದೀರಾ ಎಂದು ಪ್ರಶ್ನಿಸಿದರು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಂಗಾಮಿ ಕುಲಪತಿ ಪ್ರೊ.ಎಂ.ವಿ.ಅಳಗವಾಡಿ ಮಾತನಾಡಿ, ‘ವಿಜ್ಞಾನಿಗಳು ಸಮಯ ಮತ್ತು ಸ್ಥಳವು ಕಣ್ಮರೆಯಾಗುತ್ತವೆ ಎಂದು ನಿರೂಪಿಸಲು ಪ್ರಯತ್ನಿಸುತ್ತಿರುವಾಗ, ಸ್ವಾಮಿ ವಿವೇಕಾನಂದರು ನಿರ್ವಿಕಲ್ಪ ಸಮಾಧಿಯನ್ನು ಅನುಭವಿಸಿದ್ದಾರೆ. ನಾವು ಭಾರತೀಯರು ವಸುದೈವ ಕುಟುಂಬಕಂ ಎಂದು ನಂಬುತ್ತೇವೆ. ಆದ್ದರಿಂದ ಸ್ವಾಮಿ ವಿವೇಕಾನಂದರು ನಾನು ಭಾರತೀಯ ಮತ್ತು ಹಿಂದೂ ಎಂದು ಹೆಮ್ಮೆಪಡುತ್ತೇನೆ ಎಂಬುದಾಗಿ ತಿಳಿಸಿದ್ದರು ಎಂದು ಸ್ಮರಿಸಿದರು.

ಎನ್‌ಎಸ್‌ಎಸ್ ಸಂಯೋಜಕ ಡಾ. ಎಸ್. ಲಿಂಗಮೂರ್ತಿ ಪರಿಚಯಿಸಿದರು. ಸ್ವಾಮಿ ವಿವೇಕಾನಂದರು ಯುವಕರ ಪ್ರತಿಮೆ ಎಂದು ಹೇಳಿದರು.

ರಿಜಿಸ್ಟ್ರಾರ್ ಪ್ರೊ.ಮುಷ್ತಾಕ್ ಅಹ್ಮದ್ ಐ ಪಟೇಲ್, ಸಿಒಇ ಶಿವಾನಂದಂ, ಡೀನರು, ಪ್ರಾಧ್ಯಾಪಕರು ಮತ್ತು ವಿಶ್ವವಿದ್ಯಾಲಯದ ಸಿಬ್ಬಂದಿ, ಹಣಕಾಸು ಅಧಿಕಾರಿ ಪ್ರೊ. ಬಿ ಆರ್ ಕೆರೂರ್ ಉಪಸ್ಥಿತರಿದ್ದರು. ಡಾ.ರಮ್ಯಾ ಕಾರ್ಯಕ್ರಮವನ್ನು ನಿರೂಪಿಸಿ ಸ್ವಾಗತಿಸಿದರು, ಡಾ.ಅನಂತ್ ಚಿಂಚುರೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT