ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ | 10 ತಂಡಗಳು ಭಾಗಿ, ಕರಡ ಬುಲ್ಸ್ ತಂಡ ಚಾಂಪಿಯನ್

Published 11 ಫೆಬ್ರುವರಿ 2024, 16:30 IST
Last Updated 11 ಫೆಬ್ರುವರಿ 2024, 16:30 IST
ಅಕ್ಷರ ಗಾತ್ರ

ಮಡಿಕೇರಿ: ಇಲ್ಲಿನ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ 2ನೇ ವರ್ಷದ ವಿಪ್ರ ಕ್ರೀಡಾಕೂಟದ ಅಂಗವಾಗಿ ನಡೆದ ಟೆನ್ನಿಸ್‌ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಕರಡ ಬುಲ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಮಡಿಕೇರಿ ವಿಪ್ರಾಸ್ ತಂಡವು ರನ್ನರ್ ಪ್ರಶಸ್ತಿ ಪಡೆದುಕೊಂಡಿತು.

ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಆಯೋಜಿಸಿದ್ದ ಪಂದ್ಯಾವಳಿಯಲ್ಲಿ ಒಟ್ಟು 10 ತಂಡಗಳು ಪಾಲ್ಗೊಂಡಿದ್ದವು.

ಮಡಿಕೇರಿ ವಿಪ್ರಾಸ್, ಕರಡ ಬುಲ್ಸ್, ಕುಶಾಲನಗರ, ವಿರಾಜಪೇಟೆ ಈಗಲ್ಸ್, ಟೀಮ್ ಬೆನಕ, ಗೋಣಿಕೊಪ್ಪ ಅರ್ಚಕರ ಸಂಘ, ಅಡ್ವೋಕೇಟ್ ಬ್ರಹ್ಮಾಸ್, ಗುಡ್ಡೆ ಹಿತ್ಲು ಕ್ರಿಕೆಟರ್ಸ್, ಚೆಯ್ಯಂಡಾಣೆ ವಾರಿಯರ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಿದವು.

ಫೈನಲ್‌ನಲ್ಲಿ ಮುಖಾಮುಖಿಯಾದ ಕರಡ ಬುಲ್ಸ್ ತಂಡ ಮತ್ತು ಮಡಿಕೇರಿ ವಿಪ್ರಾಸ್ ತಂಡದ ನಡುವೆ ರೋಚಕ ಹಣಾಹಣಿ ನಡೆಯಿತು.

ಮೊದಲು ಬ್ಯಾಟಿಂಗ್ ಮಾಡಿದ ಕರಡ ತಂಡವು ನಿಗದಿತ 6 ಓವರ್‌ಗಳಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡು 76 ರನ್ ಗಳಿಸಿತು. ತಂಡದ ಪರ ಪ್ರಕಾಶ್ 29 ಹಾಗೂ ಹರಿ 24 ರನ್ ಗಳಿಸಿದರು.

ಇದಕ್ಕೆ ಪ್ರತಿಯಾಗಿ ಮಡಿಕೇರಿ ವಿಪ್ರಾಸ್ ತಂಡ 3 ವಿಕೆಟ್‌ಗಳ ನಷ್ಟಕ್ಕೆ 6 ಓವರ್ ಗಳಲ್ಲಿ 65 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ತಂಡದ ಪರ ವಿನಯ್ 26 ರನ್ ಗಳಿಸಿದರು. ತೀರ್ಪುಗಾರರಾಗಿ ನಯನ್, ನಂದೀಶ್, ರಕ್ಷಿತ್ ಭಾಗವಹಿಸಿದ್ದರು.

ಹಗ್ಗಜಗ್ಗಾಟ ಪಂದ್ಯದಲ್ಲಿ ಪುರುಷರ ವಿಭಾಗದಲ್ಲಿ ವಿರಾಜಪೇಟೆ ಈಗಲ್ಸ್ ತಂಡ ಹಾಗೂ ಮಹಿಳೆಯರ ವಿಭಾಗದಲ್ಲಿ
ಪೊನ್ನಂಪೇಟೆ ಶ್ರೀದೇವಿ ತಂಡ ಜಯ ಸಾಧಿಸಿದವು.

‘ಸಮುದಾಯ ಸಂಘಟನೆಗೆ ಇದೊಂದು ಉತ್ತಮ ಹೆಜ್ಜೆ’

ಇದಕ್ಕೂ ಮುನ್ನ ಮಾತನಾಡಿದ ಪತ್ರಿಕೋದ್ಯಮಿ ಜಿ.ಚಿದ್ವಿಲಾಸ್, ‘ಸಮುದಾಯ ಸಂಘಟನೆಗೆ ಇದೊಂದು ಉತ್ತಮ ಹೆಜ್ಜೆ ಆಗಿದೆ’ ಎಂದು ಪ್ರತಿಪಾದಿಸಿದರು.

ಜಿಲ್ಲೆಯಲ್ಲಿನ ಬ್ರಾಹ್ಮಣ ಸಮಾಜದ ಬಾಂಧವರು ವಿಪ್ರ ಕ್ರೀಡಾಕೂಟ ಆಯೋಜನೆ ಮೂಲಕ ಸಮುದಾಯದವರನ್ನು ಒಂದೆಡೆ ಸೇರಿಸಲು ಪ್ರಯತ್ನಿಸಿ ಸಫಲವಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಹಿರಿಯ ಮುಖಂಡ ಜಿ.ಟಿ.ರಾಘವೇಂದ್ರ ಮಾತನಾಡಿ,‘ಮುಂದಿನ ದಿನಗಳಲ್ಲಿ ರಾಜ್ಯಮಟ್ಟದಲ್ಲೂ ವಿಪ್ರ ಬಾಂಧವರ ಕ್ರೀಡಾಕೂಟ ಆಯೋಜನೆ ಆದಲ್ಲಿ ಸಮಾಜದ ಸರ್ವರ ಸಹಕಾರ ಇರಲಿದೆ’ ಎಂದರು.

ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಅಧ್ಯಕ್ಷೆ ಗೀತಾ ಗಿರೀಶ್, ಕಾರ್ಯದರ್ಶಿ ಬಿ.ಕೆ.ಜಗದೀಶ್, ಖಜಾಂಚಿ ಜಿ.ಆರ್.ರವಿಶಂಕರ್, ನಿರ್ದೇಶಕರಾದ ಸವಿತಾ ಭಟ್, ಪ್ರಭಾಕರ ನೆಲ್ಲಿತ್ತಾಯ, ಎ.ವಿ.ಮಂಜುನಾಥ, ಜಯಶೀಲಾ ಪ್ರಕಾಶ್, ವೀಣಾ ಹೊಳ್ಳ, ಶಿವಶಂಕರ್, ರಾಜಶೇಖರ್, ಭರತೇಶ್ ಖಂಡಿಗೆ, ಕ್ರೀಡಾ ಸಂಚಾಲಕ ಬಿ.ಕೆ.ಅರುಣ್ ಕುಮಾರ್, ಮುಖಂಡರಾದ ಶ್ರೀಧರ್ ನೆಲ್ಲಿತ್ತಾಯ, ವಿದ್ಯಾಭಿವೃದ್ಧಿ ನಿಧಿಯ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಭಾಗವಹಿಸಿದ್ದರು.

ಫೆ. 25ರಂದು ವಿಪ್ರ ಕ್ರೀಡಾಕೂಟದ ಸಮಾರೋಪ ಸಮಾರಂಭ ಹಾಗೂ ಪ್ರಶಸ್ತಿ ವಿತರಣೆ ಮಡಿಕೇರಿಯ ಲಕ್ಷ್ಮಿ ನರಸಿಂಹ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.

ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಲು ಸೇರಿದ್ದ ಪ್ರೇಕ್ಷಕರು
ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಲು ಸೇರಿದ್ದ ಪ್ರೇಕ್ಷಕರು

Highlights - ದಿನವಿಡೀ ನಡೆದ ಕ್ರಿಕೆಟ್ ಪಂದ್ಯಾವಳಿ ಫೆ. 25ರಂದು ವಿಪ್ರ ಕ್ರೀಡಾಕೂಟದ ಸಮಾರೋಪ ಸಮಾರಂಭ ಮಡಿಕೇರಿಯ ಲಕ್ಷ್ಮಿನರಸಿಂಹ ಕಲ್ಯಾಣ ಮಂಟಪದಲ್ಲಿ ಆಯೋಜನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT