ವಿರಾಜಪೇಟೆ: ಗಾಂಜಾ ದಂಧೆ ನಡೆಸುತ್ತಿದ್ದ ಐವರನ್ನು ಮಂಗಳವಾರ ಬಂಧಿಸಿರುವ ಪೊಲೀಸರು, ಬಂಧಿತರಿಂದ ₹ 1.10 ಲಕ್ಷ ಮೌಲ್ಯದ 3.4 ಕೆ.ಜಿ. ಗಾಂಜಾ ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಖಚಿತ ಸುಳಿವು ಪಡೆದ ನಗರ ಠಾಣೆಯ ಪೊಲೀಸರು, ಪಟ್ಟಣದ ಸುಂಕದಕಟ್ಟೆಯ ಬಳಿ ದಂಧೆಯಲ್ಲಿ ತೊಡಗಿದ್ದ ಫಾರೂಕ್, ಮುದಾಶೀರ್, ರಫೀಕ್, ಮನು ಹಾಗೂ ಮಹೇಶ್ ಎಂಬುವವರನ್ನು ಬಂಧಿಸಿ, ಗಾಂಜಾ ಇರಿಸಿದ್ದ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳ ಬಳಿ, ಮಾರಾಟಕ್ಕೆ ಸಿದ್ಧವಾಗಿಟ್ಟುಕೊಂಡ 50 ಗ್ರಾಂ ಮತ್ತು 100 ಗ್ರಾಂ ಪೊಟ್ಟಣಗಳಿದ್ದವು. ಆರೋಪಿಗಳನ್ನು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, 15 ದಿನಗಳ ನ್ಯಾಯಾಂಗ
ಬಂಧನಕ್ಕೆ ನ್ಯಾಯಾಧೀಶರು ಆದೇಶಿಸಿದ್ದಾರೆ.
ಡಿ.ವೈಎಸ್.ಪಿ ಸಿ.ಟಿ.ಜಯಕುಮಾರ್, ಸಿಪಿಐ ಕ್ಯಾತೆಗೌಡ ಮಾರ್ಗದರ್ಶನದಲ್ಲಿ ನಗರ ಪೊಲೀಸ್ ಠಾಣೆಯ ಎಸ್ಐ ಎಚ್.ಎಸ್.ಬೋಜಪ್ಪ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಗಿರೀಶ್, ಸಂತೋಷ್, ಮುಸ್ತಾಫ ಹಾಗೂ ಮುನೀರ್ ಪಾಲ್ಗೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.