ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗೋಣಿಕೊಪ್ಪಲು | ಅಪಘಾತ; ಮಹಿಳೆ ಸಾವು

ಸಿನಿಮೀಯ ರೀತಿಯಲ್ಲಿ ವಾಹನ ಚಾಲಕನನ್ನು ಹಿಡಿದ ಪೊಲೀಸರು
Published 19 ಜೂನ್ 2024, 6:27 IST
Last Updated 19 ಜೂನ್ 2024, 6:27 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಇಲ್ಲಿಗೆ ಸಮೀಪದ ಅರುವತ್ತೋಕ್ಲು ಗ್ರಾಮ ಪಂಚಾಯಿತಿ ಸಮೀಪ ಪಿಕಪ್‌ ವಾಹನವೊಂದು ಡಿಕ್ಕಿ ಹೊಡೆದು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಪ್ರಭಾವತಿ (49) ಎಂಬುವವರು ಮೃತಪಟ್ಟಿದ್ದಾರೆ. ಮತ್ತೊಬ್ಬರಿಗೆ ತೀವ್ರತರವಾದ ಗಾಯಗಳಾಗಿದ್ದು, ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.

ಗೋಣಿಕೊಪ್ಪಲು ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯೆಯಾದ ಪ್ರಭಾವತಿ ಅವರು ಸ್ಕೂಟಿಯಲ್ಲಿ ಪೊನ್ನಂಪೇಟೆಯಿಂದ ಗೋಣಿಕೊಪ್ಪಲು ಕಡೆಗೆ ಹೋಗುತ್ತಿದ್ದ ವೇಳೆ ಅರುವತೋಕ್ಲು ಗ್ರಾಮ ಪಂಚಾಯಿತಿ ಸಮೀಪ ಎದುರಿನಿಂದ ಬಂದ ಪಿಕಪ್‌ ವಾಹನ ಡಿಕ್ಕಿ ಹೊಡೆದಿದೆ. ಇದರಿಂದ ತೀವ್ರವಾಗಿ ಗಾಯಗೊಂಡ ಪ್ರಭಾವತಿ ಮೃತಪಟ್ಟಿದ್ದಾರೆ. ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆಗೆ ತೀವ್ರತರವಾದ ಗಾಯಗಳಾಗಿವೆ.

ಅಪ‍ಘಾತ ಸಂಭವಿಸಿದಾಗ ಚಾಲಕ ಪಿಕಪ್ ವಾಹನ ನಿಲ್ಲಿಸದೇ ಪರಾರಿಯಾಗಿದ್ದ. ತಕ್ಷಣ ಕಾರ್ಯೋನ್ಮುಖರಾದ ಗೋಣಿಕೊಪ್ಪಲು ಠಾಣೆಯ ಪೊಲೀಸರು ಶ್ರೀಮಂಗಲ ಠಾಣೆಗೆ ಮಾಹಿತಿ ನೀಡಿದರು. ಪರಾರಿಯಾಗುತ್ತಿದ್ದ ಪಿಕಪ್ ವಾಹನ ಚಾಲಕನನ್ನು 25 ಕಿ.ಮೀ ದೂರದಲ್ಲಿ ಹಿಡಿಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಇನ್‌ಸ್ಪೆಕ್ಟರ್ ಶಿವರಾಜ ಮುಧೋಳ ಹಾಗೂ ಸಬ್‌ಇನ್‌ಸ್ಪೆಕ್ಟರ್ ರೂಪಾದೇವಿ ಬಿರಾದಾರ ಸೇರಿದಂತೆ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT