ಸೋಮವಾಪೇಟೆ: ಗೋವಾದಲ್ಲಿ ಈಚೆಗೆ ನಡೆದ ದ ಗ್ರೀನ್ ಪ್ಲಾನೆಟ್ ಬಯೋಕ್ರೆಡಿಟ್ ಇಂಡಿಯಾ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ಜಿಲ್ಲೆಯ ಮಾದಾಪುರದ ಪ್ರಗತಿಪರ ಕೃಷಿಕ ರತೀಶ್ ಹಾಗೂ ಗೋಣಿಕೊಪ್ಪದ ಕೃಷಿಕ ದರ್ಶನ್ ಅವರಿಗೆ ‘ಅತ್ಯುತ್ತಮ ರೈತ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

‘ದೇಶದ ಕೃಷಿ ಪದ್ಧತಿಯಲ್ಲಿ ವಿಷಮುಕ್ತ ಆಹಾರ ಬೆಳೆಗೆ ಆದ್ಯತೆ ನೀಡಬೇಕೆಂದು ದೇಶದ ರೈತರನ್ನು ಸಂಘಟಿಸುತ್ತಿರುವ ಕಮಲ್ನಾಥ್ ಮತ್ತು ಪ್ರೇಮ್ನಾಥ್ ಅವರ ‘ಗ್ರೀನ್ ಪ್ಲಾನೆಟ್ ಬಯೋಕ್ರೆಡಿಟ್ ಇಂಡಿಯಾ ಸಂಸ್ಥೆ’ಯ ಸದಸ್ಯತ್ವವನ್ನು ಜಿಲ್ಲೆಯ ಅನೇಕ ಕೃಷಿಕರು ಪಡೆದಿದ್ದು, ಅದರಲ್ಲಿ 11 ಮಂದಿ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿದ್ದರು.

ಗೋಣಿಕೊಪ್ಪದ ದರ್ಶನ್, ಸೋಮವಾರಪೇಟೆ ಯಶವಂತ್ ಮುಂದಾಳತ್ವದಲ್ಲಿ ಮಹೇಶ್, ತಿಲಕ್ ಕುಮಾರ್, ರೂಪೇಶ್, ಯೋಗೇಶ್, ಧೂಮಪ್ಪ, ದಯಾನಂದ್, ಮಚ್ಚಂಡ ಆಶೋಕ್ ಮತ್ತು ಸತೀಶ್ ಭಾಗವಹಿಸಿ, ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದ ಕೃಷಿಗಳ ಬಗ್ಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.