ಭಾನುವಾರ, ಜನವರಿ 19, 2020
26 °C

ಕಾರು ಚಾಲಕ ಲಾಡ್ಜ್‌ನಲ್ಲಿ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ನಗರದ ಕೊಹಿನೂರು ರಸ್ತೆಯ ಪೋರ್ಟ್‌ ವ್ಯೂ ಲಾಡ್ಜ್‌ನಲ್ಲಿ ಶನಿವಾರ ಕಾರು ಚಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಾಲ್ಲೂಕಿನ ಕಗೋಡ್ಲು ನಿವಾಸಿ ದಕ್ಷತ್ (28) ನೇಣಿಗೆ ಶರಣಾದವರು. ಲಾಡ್ಜ್‌ನಲ್ಲಿ ರೂಮ್‌ ಪಡೆದು ನೇಣಿಗೆ ಶರಣಾಗಿದ್ದಾರೆ.

ಶನಿವಾರ ಬೆಳಿಗ್ಗೆಯಿಂದಲೂ ಕೊಠಡಿಯಿಂದ ದಕ್ಷತ್ ಹೊರಬರದ ಹಿನ್ನೆಲೆಯಲ್ಲಿ ಲಾಡ್ಜ್‌ ಸಿಬ್ಬಂದಿ ಕಿಟಕಿ ಮೂಲಕ ವೀಕ್ಷಣೆ ಮಾಡಿದಾಗ ಆತ್ಮಹತ್ಯೆ ಮಾಡಿಕೊಂಡಿದ್ದು ಬೆಳಕಿಗೆ ಬಂದಿದೆ.

ತನ್ನ ವಾಟ್ಸ್‌ಆ್ಯಪ್‌ ಸ್ಟೇಟಸ್‌ನಲ್ಲಿ ತಂದೆ ತಾಯಿ ಫೋಟೊ ಹಾಕಿಕೊಂಡು 'ಸಾರಿ ಡ್ಯಾಡಿ ಅಮ್ಮ' ಎಂದು ಬರೆದುಕೊಂಡಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು