ಗೋಣಿಕೊಪ್ಪಲು: ಆಗಸ್ಟ್ 15ರಿಂದ ಬೆಂಗಳೂರಿನಲ್ಲಿ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ಆಶ್ರಯದಲ್ಲಿ ನಡೆಯಲಿರುವ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ತಂಡದ ಫಿಜಿಯೋಥೆರಪಿಸ್ಟ್ ಆಗಿ ಡಾ. ಚೆಕ್ಕೇರ ಪೂವಯ್ಯ ನೇಮಕಗೊಂಡಿದ್ದಾರೆ.
ಪ್ರಸ್ತುತ ಐರ್ಲೆಂಡ್‌ನಲ್ಲಿ ಫಿಜಿಯೋಥೆರಪಿಸ್ಟ್ ಆಗಿರುವ ಪೂವಯ್ಯ 2ನೇ ಬಾರಿಗೆ ಕಲ್ಯಾಣಿ ತಂಡಕ್ಕೆ ನೇಮಕಗೊಂಡಿದ್ದಾರೆ. ಪೊನ್ನಂಪೇಟೆ ತಾಲ್ಲೂಕು ಹುದಿಕೇರಿ ಹೈಸೊಡ್ಲೂರು ಗ್ರಾಮದ ಚೆಕ್ಕೇರ ರಮೇಶ್ ಹಾಗೂ ಗೀತಾ ದಂಪತಿಯ ಪುತ್ರ.