ಮಡಿಕೇರಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ‘ಮನ್ ಕಿ ಬಾತ್’ನ 127ನೇ ಆವೃತ್ತಿಯಲ್ಲಿ ಕಾಫಿಯನ್ನು ಪ್ರಸ್ತಾಪಿಸುವ ಮೂಲಕ ಕೊಡಗಿನವರ ಗಮನ ಸೆಳೆದಿದ್ದಾರೆ.

ಕಾಫಿ ಬೆಳೆಯುವ ಪ್ರದೇಶವನ್ನು ಹೆಸರಿಸುವಾಗ ಅವರು ಕೊಡಗನ್ನೂ ಪ್ರಸ್ತಾಪಿಸಿದ್ದಾರೆ. ಜೊತೆಗೆ, ಕಾಫಿ ಬೆಳೆಯಿಂದ ಹಲವರ ಬದುಕು ಹಸನಾಗಿದೆ ಎಂದಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್, ‘ಬಾಳೆಹೊನ್ನೂರಿನ ಕೇಂದ್ರೀಯ ಕಾಫಿ ಸಂಶೋಧನಾ ಕೇಂದ್ರದಲ್ಲಿ 2025ರ ನವೆಂಬರ್ ಶತಮಾನೋತ್ಸವ ಆಚರಣೆ ನಡೆಯಲಿದೆ. ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸಚಿವರು ಭಾಗಿಯಾಗುತ್ತಾರೆ. ಇದರ ಮಾಹಿತಿಯನ್ನು ಈಚೆಗಷ್ಟೇ ಪ್ರಧಾನಮಂತ್ರಿ ಕಚೇರಿಗೆ ಮೇಲ್ ಮಾಡಿದ್ದೆ. ಆನಂತರ, ಪ್ರಧಾನಮಂತ್ರಿ ಕಚೇರಿಯಿಂದಲೇ ದೂರವಾಣಿ ಕರೆ ಮಾಡಿ ಮತ್ತಷ್ಟು ವಿವರಗಳನ್ನು ಪಡೆದುಕೊಂಡಿದ್ದರು. ಜೊತೆಗೆ ವಿವರವಾಗಿ ಮೇಲ್ ಮಾಡುವಂತೆ ಹೇಳಿದ್ದರು’ ಎಂದು ಅವರು ತಿಳಿಸಿದರು.

7 ಕಾಫಿ ಬೀಜಗಳಿಂದ ಆರಂಭವಾದ ಕಾಫಿಯ ಉತ್ಪಾದನೆಯನ್ನು 2047ಕ್ಕೆ 7 ಲಕ್ಷ ಟನ್ನವರೆಗೆ ಬೆಳೆಯಬೇಕು ಎಂಬು ಗುರಿಯನ್ನಿರಿಸಿಕೊಂಡು ಆ ನಿಟ್ಟಿನಲ್ಲಿ ಕಾಫಿ ಮಂಡಲಿ ಕಾರ್ಯೋನ್ಮುಖವಾಗಿದೆ ಎಂದರು.

ಈಗ ಪ್ರಧಾನಮಂತ್ರಿಯವರೇ ಸ್ವತಃ ಕಾಫಿ ಕುರಿತು ಆಡಿರುವ ಮಾತುಗಳು ನಮ್ಮಲ್ಲಿ ಹೊಸ ಬಗೆಯ ಸ್ಫೂರ್ತಿಯನ್ನು ತುಂಬಿವೆ. ಈ ಮಾತುಗಳಿಂದ ಕಾಫಿ ಕೃಷಿ ಹಾಗೂ ಉದ್ಯಮಕ್ಕೆ ಪ್ರಯೋಜನವಾಗಲಿದೆ ಎಂದು ಹೇಳಿದರು.

ಪ್ರಧಾನಿಯಿಂದ ಪ್ರಬಲ ಸಂದೇಶ: ಯದುವೀರ್

ಕೊಡಗು ಮತ್ತು ಕರ್ನಾಟಕದ ಕಾಫಿ ಬೆಳೆಗಳ ಬಗ್ಗೆ ಪ್ರಧಾನಿ ಮೋದಿ ಅವರು ‘ಮನ್ ಕಿ ಬಾತ್’ನಲ್ಲಿ ಉಲ್ಲೇಖಿಸಿರುವುದು ಸಕಾಲಿಕ ಮತ್ತು ಅರ್ಥಪೂರ್ಣವಾಗಿದೆ. ಈ ಮೂಲಕ ಅವರೊಂದು ಪ್ರಬಲ ಸಂದೇಶ ನೀಡಿದ್ದಾರೆ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಶ್ಲಾಘಿಸಿದ್ದಾರೆ.

ಭಾರತದ ಕಾಫಿ ಕೃಷಿಯ ಕೇಂದ್ರಬಿಂದುಗಳಾದ ಕೊಡಗು, ಹಾಸನ ಮತ್ತು ಚಿಕ್ಕಮಗಳೂರಿನಂತಹ ಪ್ರದೇಶಗಳತ್ತ ಅವರ ಗಮನ ಸೆಳೆಯುವ ಮೂಲಕ ಅವರು ಸ್ಥಳೀಯ ಭಾರತೀಯ ಉತ್ಪಾದಕರಿಂದ ಬೆಳೆದ ಕಾಫಿಯ ಘಮವನ್ನೂ ಜಾಗತಿಕ ಹಂತಗಳಿಗೆ ತಲುಪಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

‘ಕರ್ನಾಟಕದ ಚಿಕ್ಕಮಗಳೂರು, ಕೊಡಗು, ಬಿಳಿಗಿರಿ ಮತ್ತು ಹಾಸನದಲ್ಲಿ ಬೆಳೆದ ಭಾರತೀಯ ಕಾಫಿ ಪ್ರಪಂಚದಾದ್ಯಂತ ಬಹಳ ಜನಪ್ರಿಯವಾಗುತ್ತಿದೆ’ ಎಂಬ ಅವರ ಹೇಳಿಕೆಯು ಈ ಪ್ರದೇಶಗಳ ಭೌಗೋಳಿಕ ಪ್ರಾಮುಖ್ಯತೆಯನ್ನು ಮಾತ್ರವಲ್ಲದೆ, ರೈತರ ಉದ್ಯಮಶೀಲತಾ ಮನೋಭಾವವನ್ನೂ ಸಾರುತ್ತದೆ ಎಂದಿದ್ದಾರೆ.

ಕಾಫಿ ಬೆಳೆಗಾರರಲ್ಲಿ ಅನೇಕರು ನಿಜವಾಗಿಯೂ ಸ್ಥಳೀಯ ಉತ್ಪನ್ನಗಳನ್ನು ಬೆಳೆಸುವಲ್ಲಿ ಹೊಸ ಘನತೆ ಮತ್ತು ಉದ್ದೇಶವನ್ನು ಕಂಡುಕೊಳ್ಳುತ್ತಿದ್ದಾರೆ. ಇದರಿಂದ ಪ್ರಾದೇಶಿಕ ಹೆಮ್ಮೆ ಮತ್ತು ಜಾಗತಿಕ ಗುಣಮಟ್ಟವು ಕೈಜೋಡಿಸಬಹುದು ಎಂದು ಪ್ರಧಾನಿ ಮೋದಿ ಪ್ರಬಲ ಸಂದೇಶವನ್ನು ನೀಡಿದ್ದಾರೆ. ಭಾರತದ ಕಾಫಿ ಅತ್ಯುತ್ತಮವಾದ ಕಾಫಿ. ಇದನ್ನು ಭಾರತದಲ್ಲಿ ತಯಾರಿಸಲಾಗುತ್ತದೆ ಮತ್ತು ಪ್ರಪಂಚವು ಅದನ್ನು ಇಷ್ಟಪಡುತ್ತಿದೆ ಎಂದು ಘೋಷಿಸುವ ಮೂಲಕ ಅವರು ಕೊಡಗು ಮತ್ತು ಕರ್ನಾಟಕದ ರೈತರನ್ನು ಕೇವಲ ಉತ್ಪಾದಕರಾಗಿ ಅಲ್ಲ, ಕೃಷಿ ಪರಂಪರೆಯ ರಾಯಭಾರಿಗಳಾಗಿ ಬಿತ್ತರಿಸಿದ್ದಾರೆ ಎಂದು ಯದುವೀರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.