ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಹಾತೂರು ವಲಯ ತಂಡಕ್ಕೆ ಪ್ರಶಸ್ತಿ

ಕೊಡಗು ಹೆಗ್ಗಡೆ ಸಮಾಜದ ಕ್ರೀಡೋತ್ಸವ
Published 7 ಮೇ 2024, 13:08 IST
Last Updated 7 ಮೇ 2024, 13:08 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಹಾತೂರು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮೈದಾನದಲ್ಲಿ ಮಂಗಳವಾರ ನಡೆದ ಕೊಡಗು ಹೆಗ್ಗಡೆ ಸಮಾಜದ 21 ನೇ ವರ್ಷದ  ಕ್ರಿಕೆಟ್ ಟೂರ್ನಿಯಲ್ಲಿ ಹಾತೂರು ವಲಯ ತಂಡ ಜಯಗಳಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಹಾತೂರು ವಲಯ ತಂಡ ಬ್ಯಾಂಟಿಂಗ್ಲಯ ತಂಡ ಫೈನಲ್ ಪಂದ್ಯದಲ್ಲಿ ಹಾಲುಗುಂದ ವಲಯ ತಂಡದ ವಿರುದ್ಧ 2 ರನ್ ಗಳಿಂದ ಜಯಗಳಿಸಿತು. ಹಾಲುಗುಂದ ತಂಡ ಟಾಸ್ ಗೆದ್ದು ಕ್ಷೇತ್ರ ರಕ್ಷಣೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ನಡೆಸಿದ ಹಾತೂರು ತಂಡ ನಿಗದಿತ 8 ಓವರ್ ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 72 ರನ್ ಗಳಿಸಿತು. ಗೆಲುವಿನ ಗುರಿ ಬೆನ್ನತ್ತಿದ ಹಾಲುಗುಂದ 70 ರನ್ ಗಳಿಸಲಷ್ಟೇ ಶಕ್ತವಾಯಿತು.

ಪಂದ್ಯ ಪುರುಷ ಪ್ರಶಸ್ತಿಯನ್ನು ಕೊಂಗೆಪಂಡ ಸಚಿನ್, ಬೆಸ್ಟ್ ಬ್ಯಾಟ್ಸ್‌ಮನ್ ಕೊಂಗೆಪಂಡ ನಿತಿನ್, ಬೆಸ್ಟ್ ಬೌಲರ್ ಪಂದಿಕಂಡ ಶ್ರೇಯಸ್ ಪ್ರಶಸ್ತಿ ಪಡೆದುಕೊಂಡರು.

ಥ್ರೋ ಬಾಲ್: ಮಹಿಳೆಯರ ಥ್ರೋ ಬಾಲ್ ಟೂರ್ನಿಯಲ್ಲಿ ಬಿಟ್ಟಂಗಾಲ ತಂಡ, ಪಾರಾಣೆ ತಂಡದ ವಿರುದ್ಧ ಜಯ ಸಾಧಿಸಿ ಪ್ರಶಸ್ತಿ ಪಡೆದುಕೊಂಡವು.


ಹಗ್ಗ ಜಗ್ಗಾಟ: ತೀವ್ರ ಜಿದ್ದಾ ಜಿದ್ದಿಯಿಂದ ಕೂಡಿದ್ದ ಪುರುಷರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಹಾಲುಗುಂದ ತಂಡ ಬೆಟ್ಟಗೇರಿ ತಂಡ ವನ್ನು ಸೋಲಿಸಿ ಪ್ರಶಸ್ತಿ ಪಡೆಯಿತು.  ಬೆಟ್ಟಗೇರಿ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.


ಮಹಿಳೆಯರ ಹಗ್ಗ ಜಗ್ಗಾಟ ಫೈನಲ್ ನಲ್ಲಿ ಒಂಟಿಯಂಗಡಿ ತಂಡ ಬೆಟ್ಟಗೇರಿ ತಂಡದ ವಿರುದ್ಧ ಜಯಸಾಧಿಸಿ ಪ್ರಶಸ್ತಿ ಗಳಿಸಿತು. ಬೆಟ್ಟಗೇರಿ ತಂಡ ದ್ವಿತೀಯ ಸ್ಥಾನ ಪಡೆಯಿತು.

ಜೂನಿಯರ್ ಕ್ರಿಕೆಟ್ : ಕ್ರಿಕೆಟ್ ಜೂನಿಯರ್ ವಿಭಾಗದ ಫೈನಲ್‌ನಲ್ಲಿ ಬೆಟ್ಟಗೇರಿ ತಂಡ ಹಾಲುಗುಂದ ತಂಡದ ವಿರುದ್ಧ ಜಯಗಳಿಸಿತು. ಹಾಲುಗುಂದ ದ್ವಿತೀಯ ಸ್ಥಾನ ಪಡೆಯಿತು. ಚೇತನ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದುಕೊಂಡರು.

ಮಹಿಳಾ ವಿಭಾಗದ ಥ್ರೋ ಬಾಲ್ ನಲ್ಲಿ ಬಿಟ್ಟಂಗಾಲ ತಂಡ ಪ್ರಶಸ್ತಿ ಗಳಿಸಿತು.
ಮಹಿಳಾ ವಿಭಾಗದ ಥ್ರೋ ಬಾಲ್ ನಲ್ಲಿ ಬಿಟ್ಟಂಗಾಲ ತಂಡ ಪ್ರಶಸ್ತಿ ಗಳಿಸಿತು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿ ಹಾಲುಗುಂದ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಂದಿಕಂಡ ದಿನೇಶ್ ಮಾತನಾಡಿ ಸಮುದಾಯದ ಒಗ್ಗಟ್ಟನ್ನು ಕಾಪಾಡುವುದು ಕ್ರೀಡೆಯ ಉದ್ದೇಶವಾಗಿದೆ ಎಂದರು. ಕೊಡಗು ಹೆಗ್ಗಡೆ ಸಮಾಜದ ಅಧ್ಯಕ್ಷ ಪಡಿಞಾರಂಡ ಜಿ.ಅಯ್ಯಪ್ಪ ಅಧ್ಯಕ್ಷತೆ ವಹಿಸಿದ್ದರು. ವನ್ಯಜೀವಿ ಪಶು ವೈದ್ಯಾಧಿಕಾರಿ ಡಾ. ಮೇಘನ ಪೆಮ್ಮಯ್ಯ ಅವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಪಿಯುಸಿ ಮತ್ತು ಪದವಿ ಶಿಕ್ಷಣದಲ್ಲಿ ಹೆಚ್ಚು ಅಂಕ ಪಡೆದು ಸಮುದಾಯದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಸಮಾಜದ ಉಪಾಧ್ಯಕ್ಷ ಕೊರಕುಟ್ಟಿರ ಸರ ಚಂಗಪ್ಪ ಕಾರ್ಯದರ್ಶಿ ಪಡಿಞಾರಂಡ ಪ್ರಭುಕುಮಾರ್ ಖಜಾಂಚಿ ಪಾನಿಕುಟ್ಟಿರ ಕುಟ್ಟಪ್ಪ ಕ್ರೀಡಾ ಸಂಚಾಲಕ ಪಂದಿಕಂಡ ನಾಗೇಶ್ ನಿರ್ದೇಶಕರಾದ ಕೊಕ್ಕೆರ ಜಗನಾಥ್ ಚರ್ಮಂಡ ಪೂವಯ್ಯ ಕೊಪ್ಪಡ ಪಳಂಗಪ್ಪ ಕೊಂಗೆಪಂಡ ರವಿ ಮಳ್ಳಡ ಸುತ ಚಳಿಯಂಡ ಕಮಲ ಉತ್ತಯ್ಯ ಮೂರಿರ ಶಾಂತಿ ಪುದಿಯತಂಡ ಜಾಲಿ ಬೆಳ್ಯಪ್ಪ ಮೂರಿರ ಕುಶಾಲಪ್ಪ  ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT