ಮಡಿಕೇರಿ: ‘ಸೆ. 28ರಿಂದ ಅ.2ರವರೆಗೂ ದಸರಾ ಕ್ರೀಡಾಕೂಟ ನಡೆಯಲಿದೆ. 28ರಂದು ಬೆಳಿಗ್ಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಓಟದ ಸ್ಪರ್ಧೆ, ಕಾಳು ಹೆರಕುವುದು, ಹಗ್ಗ ಜಗ್ಗಾಟ, ನಿಧಾನವಾಗಿ ದ್ವಿ ಚಕ್ರ ವಾಹನ ಚಾಲನೆ, ವಾಲಿಬಾಲ್, ಥ್ರೋಬಾಲ್, ಫುಟ್‌ಬಾಲ್, ಬಾಸ್ಕೆಟ್‌ಬಾಲ್, ಬ್ಯಾಡ್ಮಿಂಟರ್ ಟೂರ್ನಿಗಳನ್ನು ಆಯೋಜಿಸಲಾಗಿದೆ’ ಎಂದು ದಸರಾ ಕ್ರೀಡಾ ಸಮಿತಿಯ ಕಾರ್ಯದರ್ಶಿ ಕಪಿಲ್‌ಕುಮಾರ್ ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಸೆ.29ರಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿಯನ್ನು ದಸರಾ ಕ್ರೀಡಾ ಸಮಿತಿ, ಮಡಿಕೇರಿ ದಸರಾ ಸಮಿತಿ, ಪತ್ರಕರ್ತರು, ಪೊಲೀಸರು, ಶಿಕ್ಷಕರು, ವಕೀಲರು, ವೈದ್ಯಕೀಯ ರಂಗದಲ್ಲಿರುವವರಿಗಾಗಿ ಏರ್ಪಡಿಸಲಾಗಿದೆ’ ಎಂದರು.

29ರಂದು ಬೆಳಿಗ್ಗೆ 6.30ಕ್ಕೆ ತಿಮ್ಮಯ್ಯ ವೃತ್ತದಲ್ಲಿ ಮುಕ್ತ ಮ್ಯಾರಥಾನ್‌ನ್ನು ಪುರುಷರಿಗಾಗಿ ಟೋಲ್‌ಗೇಟ್– ಕ್ಯಾಪಿಟಲ್ ವಿಲೇಜ್– ಟೋಲ್‌ಗೇಟ್‌ವರೆಗೆ, ಮಹಿಳೆಯರಿಗಾಗಿ ಟೋಲ್‌ಗೇಟ್–ನೀರ್‌ಕೊಲ್ಲಿ–ಟೋಕ್‌ಗೇಟ್‌ವರೆಗೆ ಏರ್ಪಡಿಸಲಾಗಿದೆ. ಅ. 2ರಂದು ಗಾಂಧಿ ಮೈದನದಲ್ಲಿ ಕಬಡ್ಡಿ ಟೂರ್ನಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಸಮಿತಿಯ ಅಧ್ಯಕ್ಷ ರಾಜೀವ್‌ಕುಮಾರ್, ನಯನ್, ಕೃಷ್ಣ, ನಿತಿನ್, ನಿರಂಜನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.